SUDDILIVE || SHIVAMOGGA
ಹೊಳೆಹೊನ್ನೂರಿನಲ್ಲಿ ಕತ್ತುಸೀಳಿ ಕೊಲೆ-Murder by slitting throat in Holehonnur
ಹೊಳೆಹೊನ್ನೂರಿನಲ್ಲಿ ವ್ಯಕ್ತಿಯೋರ್ವನನ್ನ ಕತ್ತುಸೀಳಿ ಕೊಲೆಗೈಯಲಾಗಿದೆ.
ವಾಕಿಂಗ್ ಗೆ ತೆರಳಿದ್ದ ಹೇಮಣ್ಣನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹೊಳೆಹೊನ್ನೂರಿನ ಹೊಸಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆಯಲ್ಲಿ ಕೊಲೆ ಮಾಡಲಾಗಿದೆ. ಮೃತರಿಗೆ (68) ವರ್ಷ ವಯಸ್ಸಾಗಿತ್ತು.
ಹೇಮಣ್ಣನ ಮೇಲೆ ಈ ಹಿಂದೆಯು ದಾಳಿಯಾಗಿತ್ತು. ಆಗ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು ಎನ್ನಲಾಗಿದೆ. ಇನ್ನು, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ದೊಡ್ಡ ಸಂಖ್ಯೆಯ ಜನ ಸೇರಿದ್ದಾರೆ. ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಡಿಕೆ ಚೇಣಿ, ಭತ್ತ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಹೇಮಣ್ಣರವರ ಮೇಲೆ ಎರಡು ವರ್ಷದ ಹಿಂದೆಯು ಇದೇ ರೀತಿ ಅಟ್ಯಾಕ್ ಆಗಿತ್ತು. ಎನ್ನಲಾಗಿದೆ.
Murder by slitting throat