SUDDILIVE || SAGARA
Health, special puja, theft of gold and jewellery
ಆರೋಗ್ಯದ ಸುಧಾರಣೆಗೆ ವಿಶೇಷ ಪೂಜೆ ಮಾಡಿಸುವುದಾಗಿ ನಂಬಿಸಿ 40 ಗ್ರಾಂ ಚಿನ್ನಾಭರಣವನ್ನ ಕಳವು ಮಾಡಿದ ಘಟನೆಯನ್ನ ಸಾಗರ ಗ್ರಾಮಾಂತರ ಪೊಲೀಸರು ಬೇಧಿಸಿದ್ದಾರೆ. ಓರ್ವನನ್ನ ಬಂಧಿಸಲಾಗಿದೆ.
ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನೆಸರ ಗ್ರಾಮದ ವಿನಾಯಕ ರವರ ಮನೆಯಲ್ಲಿ ಮಾ.23 ರಂದು ವಿನಾಯಕ ರವರ ಹೆಂಡತಿಯ ಆರೋಗ್ಯ ಸುಧಾರಿಸಲು ಪೂಜೆ ಮಾಡುವುದಾಗಿ ನಂಬಿಸಿ ವಿನಾಯಕ ರವರ ಕೈಯಲ್ಲಿದ್ದ 5 ಗ್ರಾಂ ತೂಕದ ಉಂಗುರ ಹಾಗೂ ಹೆಂಡತಿಯ ಕುತ್ತಿಗೆಯಲ್ಲಿದ್ದ 35 ಗ್ರಾಂ ತೂಕದ ಮಾಂಗಲ್ಯ ಚೈನ್ ನ್ನು ಹಿಟ್ಟಿನ ಗೊಂಬೆಯೊಳಗೆ ಇಟ್ಟು 21 ದಿನ ಪೂಜೆ ಮಾಡಬೇಕೆಂದು ನಂಬಿಸಿ ಮಾಂಗಲ್ಯ ಚೈನ್ ಹಾಗೂ ಉಂಗುರವನ್ನು ಕಳವು ಮಾಡಲಗಿತ್ತು. ಪ್ರಕರಣ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಆರೋಪಿ ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಅನಿಲ್ ಕುಮಾರ್ ಭೂಮಾರೆಡ್ಡಿ 1ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ 2ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಗೋಪಾಲಕೃಷ್ಣ ನಾಯ್ಕ ಟಿ. ಪೊಲೀಸ್ ಉಪಾಧೀಕ್ಷಕರು ಸಾಗರ ಉಪವಿಭಾಗರವರಮೇಲ್ವಿಚಾರಣೆಯಲ್ಲಿ, ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್, ಮಹಾಬಲೇಶ್ವರ ಎಸ್.ಎನ್,
& ಸಿದ್ದರಾಮಪ್ಪ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಸಿಹೆಚ್ಸಿ ಷೇಖ್ ಫೈರೋಜ್ ಅಹಮ್ಮದ್. ಸಿಪಿಸಿ ರವಿಕುಮಾರ್. ಹನುಮಂತ ಜಂಬೂರ್, ನಂದೀಶ್, ಪ್ರವೀಣ್ ಕುಮಾರ್ ಹಾಗೂ ಜಿಲ್ಲಾ ತಾಂತ್ರಿಕ ಘಟಕದ ಶ್ರೀ ಇಂದ್ರೇಶ್ ಹಾಗೂ ವಿಜಯಕುಮಾರ್ ರವರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ತನಿಖಾ ತಂಡವು ಪ್ರಕರಣದ ಆರೋಪಿ ಬಸಯ್ಯ ಹಿರೇಮಠ್, 29 ವರ್ಷ, ಹೊಂಬ್ಳಿ ಗ್ರಾಮ, ಮಾರನಬೀಡ ಪೊಸ್ಟ್, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ. ಈತನನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿ, ಆರೋಪಿತನಿಂದ ಅಂದಾಜು ಮೌಲ್ಯ 3,40,000/-ರೂಗಳ 33 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಚೈನ್ ಹಾಗೂ 5 ಗ್ರಾಂ ತೂಕದ ಬಂಗಾರದ ಉಂಗುರವನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.
ಆರೋಪಿತನ ಪತ್ತೆ ಹಾಗೂ ಆಭರಣ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.
theft of gold and jewellery