SUDDILIVE|| SAGARA
ಕೋಣ ಹುಡುಕಿಕೊಂಡು ಹೋದ ವ್ಯಕ್ತಿ ಶವವಾಗಿ ಪತ್ತೆ-A man who went looking for a the angle was found dead
ತಾಲೂಕಿನ ಹುಲಿದೇವರ ಬನದ ಶರಾವತಿ ಹಿನ್ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ. ಪತ್ತೆಯಾದ ಮೃತದೇಹವನ್ನ ಸಿದ್ದಯ್ಯ (65) ಎಂದು ಗುರುತಿಸಲಾಗಿದೆ.
ಮೂರು ದಿನಗಳ ಹಿಂದೆ ಪತ್ನಿ ಮಗಳ ಮನೆಗೆ ಹೋಗಿದ್ದು ಸಿದ್ದಯ್ಯ ತಾವು ಸಾಕಿದ ಕೋಣ ಹಟ್ಟಿಗೆ ಬಂದಿಲ್ಲವೆಂದು ಹುಡುಕಿಕೊಂಡು ಹೋಗಿದ್ದಾರೆ. ಹುಡುಕಿಕೊಂಡು ಹೋದ ಸಿದ್ದಯ್ಯ ಹುಲಿದೇವರ ಬನದ ಹಿನ್ನೀರಿನಲ್ಲಿ ಇಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸೇತೂರು ಗ್ರಾಮದ ನಿವಾಸಿ ಸಿದ್ದಯ್ಯನವರಿಗೆ ಮೂವರು ಮಕ್ಕಳಿದ್ದಾರೆ. ಒಂದು ಹೆಣ್ಣು ಎರಡು ಗಂಡುಮಕ್ಕಳಿದ್ದಾರೆ. ಒಬ್ಬ ಬೆಂಗಳೂರಿನಲ್ಲಿದ್ದರೆ ಮತ್ತೋರ್ವ ದೇವಸ್ಥಾನದ ಪೂಜಾರಿಯಾಗಿದ್ದಾರೆ. ಪ್ರಕರಣ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ದೇಹವನ್ನ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ.
ಅಚ್ಚರಿ ಎಂದರೆ ಕೋಣ ಹುಡುಕಿಕೊಂಡು ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಬಗ್ಗೆ ತನಿಖೆಯಾಗಬೇಕಿದೆ. ಇದೊಂದು ಅನುಮಾನಸ್ಪದ ಸಾವೆಂದು ಹೇಳಲಾಗುತ್ತಿದೆ.
went looking for a the angle was found dead