SUDDILIVE || AGUMBE
ಆಗುಂಬೆಯಲ್ಲಿ ಅಡ್ಡಲಾಗಿ ಬಿದ್ದ ಮರ-ಸಾಲುಕಟ್ಟಿದ ಅಂಬ್ಯುಲೆನ್ಸ್ ಗಳು-Ambulances lined for fallen trees in
ಆಗುಂಬೆ ಘಾಟಿಯಲ್ಲಿ ಬೃಹತ್ ಮರವೊಂದು ಅಡ್ಡಲಾಗಿ ರಸ್ತೆಗೆ ಬಿದ್ದ ಪರಿಣಾಮ ವಾಹನಗಳ ಸಂಚಾರ ಅದರಲ್ಲೂ ಮಣಿಪಾಲಿಗೆ ಹೋಗುವ ಆಂಬ್ಯಲೆನ್ಸ್ ಗಳಿಗೆ ಅಡಚಣೆಯಾಗಿದೆ.
ಆಗುಂಬೆ ಚೆಕ್ ಪೋಸ್ಟ್ ಸಮೀಪದಲ್ಲಿ ಬೃಹತ್ ಮರವೊಂದು ಧರೆಗೆ ಉರುಳಿದೆ. ಮರ ಉರುಳಿದ ಹಿನ್ನೆಲೆ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ವಾಹನಗಳು ನಿಲ್ಲುವಂತಾಗಿದೆ. ಟ್ರಾಫಿಕ್ ಜಾಮ್ ನಲ್ಲಿ ಆಂಬುಲೆನ್ಸ್ ಸಿಲುಕಿಕೊಂಡಿವೆ. ಮಣಿಪಾಲ್ ಮತ್ತು ವೆನ್ ಲಾಕ್ ಗೆ ತೆರಳುತ್ತಿದ್ದ ಅಂಬ್ಯುಲೆನ್ಸ್ ಗಳು ಸಾಲುಕಟ್ಟಿ ನಿಂತಿವೆ.
ಬೃಹತ್ ಮರ ತೆರೆವುಗೊಳಿಸಲು ಸ್ಥಳೀಯರು ಹಾಗೂ ಅರಣ್ಯ ಇಲಾಖೆಯವರು ಮುಂದಾಗಿದ್ದಾರೆ. ಉಡುಪಿ ಭಾಗದಿಂದ ಬರುತ್ತಿದ್ದ ವಾಹನಗಳು ಘಾಟಿಯಲ್ಲಿ ಜಾಮ್ ನಲ್ಲಿ ಸಿಲುಕಿಕೊಂಡಿವೆ. ಟ್ರಾಫಿಕ್ ಜಾಮ್ ನಿಂದ ರೋಗಿಗಳು ಹಾಗೂ ಸಂಬಂಧಿಕರು ಪರದಾಡುವಂತಾಗಿದೆ.
ಬೆಳಗಿನ ಜಾವ ಹುಲಿಕಲ್ ಘಾಟಿಯಲ್ಲಿ ಲಾರಿಯೊಂದು ಕೆಟ್ಟುನಿಂತಿತ್ತು. ಇದರಿಂದ ಭಾರಿ ವಾಹನಗಳು ಟ್ರಾಫಿಕ್ ಜ್ಯಾಮ್ ನಲ್ಲಿ ಸಿಲುಕಿಕೊಂಡಿದ್ದವು. ನಂತರ ಬೆಳಗ್ಗೆ ಅವುಗಳನ್ನ ಮುಕ್ತಗೊಳಿಸಲಾಯಿತು. ಈಗ ಮಳೆಯ ಕಾರಣದಿಂದ ಆಗುಂಬೆಯಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ.
Ambulances lined for fallen trees in Agumbe