ad

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಮಲೈ ನೇಮಕ-Annamalai appointed as BJP's national general secretary

 SUDDILIVE || NEW DELHI

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಮಲೈ ನೇಮಕ-Annamalai appointed as BJP's national general secretary

Annamalai, Bjp


ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯಾಗಿ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಅಣ್ಣಮಲೈ ಅವರನ್ನ ಆಯ್ಕೆ ಮಾಡಲಾಗಿದೆ. 

2025 ಎಪ್ರಿಲ್ 11 ರಲ್ಲಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೈನಾರ್ ನಾಗೇಂದ್ರ ಅವರನ್ನ ತಙದಾಗ ಗೃಹ ಸಚಿವ ಅಮಿತ್ ಶಾ, ಅಣ್ಣಮಲೈ ಅವರ ಕಾರ್ಯವೈಖರಿಯನ್ನ ಹೊಗಳಿದ್ದರು. ಅಣ್ಣಮಲೈ ಅಂತಹ ಚತುರ ರಾಜಕಾರಣಿ ಬೇಕೆಂದು ಹೊಗಳಿದ್ದರು. 

ಈಗ ಅವರಿಗೆ ರಾಷ್ಡ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. 2026 ರಲ್ಲಿ ತಮಿಳುನಾಡು ವಿಧಾನ ಸಭಾ ಚುನಾವಣೆಯನ್ನ ಎದುರಿಸಲಿದೆ. ಈ ವೇಳೆ ಅಣ್ಣಮಲೈ ಅವರನ್ನ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯಾಗಿ ನೇಮಿಸಿರುವುದು ತಮಿಳು ನಾಡಿನಲ್ಲಿ ಸಂಚಲನ ಮೂಡಿಸಿದೆ. 

ಇತ್ತ ಶಿವಮೊಗ್ಗದ ಮಾಜಿ ಸಚಿವ ಕುಮಾರ ಬಂಗಾರಪ್ಪ, ಶಿವಮೊಗ್ಗ ಶಾಸಕ ಚೆನ್ನಬಸಪ್ಪ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅಣ್ಣಮಲೈ ಅವರನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವುದಕ್ಕೆ ಶ್ಲಾಘನೆ ಮತ್ತು ಅಭಿನಂದನೆಯನ್ನ ಸಲ್ಲಿಸಿದ್ದಾರೆ. 


Annamalai appointed as BJP's national general secretary

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close