ಮೆಗ್ಗಾನ್ ಶಸ್ತ್ರಚಿಕಿತ್ಸಿಕನ ವಿರುದ್ಧ ಮತ್ತೊಂದು ದೂರು-Another complaint against Megan surgeon

 SUDDILIVE || SHIVAMOGGA

ಮೆಗ್ಗಾನ್ ಶಸ್ತ್ರಚಿಕಿತ್ಸಿಕನ ವಿರುದ್ಧ ಮತ್ತೊಂದು ದೂರು-Another complaint against Megan surgeon

Meggan, surgeon

ಮೆಗ್ಗಾನ್ ಆಸ್ಪತ್ರೆಯ ಪ್ರತಿಷ್ಠಿತ ಶಸ್ತ್ರಚಿಕಿತ್ಸಕರಾದ ವೈದ್ಯ ಡಾ.ಅಶ್ವಿನ್ ಹೆಬ್ಬಾರ್ ವಿರುದ್ಧ ಮತ್ತೊಂದು ಲೈಂಗಿಕ ಪ್ರಕರಣ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಎಂ ಎಸ್ ಓದುತ್ತಿದ್ದ ವಿದ್ಯಾರ್ಥಿನಿಯಿಂದ ಈ ದೂರು ದಾಖಲಾಗಿದೆ. 

ಹೋಟೆಲ್ ವೊಂದಕ್ಕೆ ಊಟಕ್ಕೆ ತೆರಳಿದಾಗ ಲೈಂಗಿಕ ಕಿರುಕುಳ ನಡೆದಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಈ ಹಿಂದೆ ಅನ್ಯ ರಾಜ್ಯದ ಯುವತಿಒಬ್ಬಳ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿತ್ತು.

ಆ ವೇಳೆ ಡಿಸಿ ನೇತೃತ್ವದ ಸಮಿತಿ ರಚಿಸಿ ಮರು ತನಿಖೆ ನಡೆದಿತ್ತು. ಈ ಬಗ್ಗೆಯ ವಿಚಾರಣೆಯು ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ತನಿಖೆ ಏನಾಗಿದೆ ಎಂಬುದು ತಿಳಿಯಬೇಕಿದೆ.

ಡಾ.ಅಶ್ವಿನ್ ಒಬ್ಬ ಅಪ್ರತಿಮ ಶಸ್ತ್ರ ಚಿಕಿತ್ಸಗಾರರಾಗಿ ಗುರುತಿಸಿಕೊಂಡಿದ್ದಾರೆ. ಸಧ್ಯಕ್ಕೆ ಡಾ.ಅಶ್ವಿನ್ ಆಸ್ಪತ್ರೆಗೆ ಬರ್ತಾಯಿಲ್ಲ ಎಂಬ ಮಾಹಿತಿಯಿದೆ. ಅವರ ಪರ ವಿರೋಧದ ಮಾತುಗಳಲ್ಲಿ  ಮೆಗ್ಗಾನ್ ನಲ್ಲಿರುವ ರಾಜಕಾರಣ ಸ್ವಲ್ಪ ಅವರನ್ನ ಇಂತಹ ಪ್ರಕರಣಗಳಲ್ಲಿ ಸಿಲುಕುವಂತೆ ಮಾಡಿರುವ ಶಂಕೆಯಿದೆ. 

ಎಂತೆಂತಹ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯನ್ನ ಡಾ.ಅಶ್ವಿನ್ ಮಾಡಿದ್ದಾರೆ. ಆದರೆ ಇಂತಹ ಆರೋಪಗಳಿಂದ ಪದೇ ಪದೇ ಸಿಲುಕುವುದು ಅಷ್ಟೇ ಅಪಾಯಕ್ಕೆ ಸಿಲುಕುವಂತೆ ಮಾಡಿದೆ. ಈ ಬಾರಿಯ ದೂರಿಲ್ಲಿ ಡಾ.ಅಶ್ವಿನ್ ವಿರುದ್ಧ ವಿಡಿಯೋ ಸಾಕ್ಷಿಗಳು ಬಲವಾಗಿದೆ. ಡಾ.ಅಶ್ವಿನ್ ಹೆಬ್ಬಾರ್ ಬಗ್ಗೆ ಅವರಿಗೆ ಇರುವ ಒಳ್ಳೆಯ ತನವೂ ಅವರನ್ನ ಕೊಂಚ ಶತೃವಾಗಿಯೂ ಕಾಡಿದೆ. ಹಾಗಾಗಿ ವೈದ್ಯರಿಗೆ ಕಂಟಕ ಹೆಚ್ಚಾಗಬಹುದು. 

ಈ ಕುರಿತು ಮೆಗ್ಗಾನ್ ಅಧೀಕ್ಷಕ ಡಾ.ತಿಮ್ಮಪ್ಪ ಪ್ರತಿಕ್ರಿಯಿಸಿದ್ದು, ಇದಕ್ಕೆ ಫೋಶ್ ಸಮಿತಿ ರಚನೆಯಾಗಿದೆ. ಸಮಿತಿಯು ಮಹಿಳೆಯ ವಿರುದ್ಧ ದೂರುಗಳು ಬಂದಾಗ ನೋಟೀಸ್ ನೀಡಿ ಸಮಿತಿ ಬಳಿ ವಿವರಣೆ ನೀಡಲು ತಿಳಿಸುತ್ತದೆ. ಈ ವಿಷಯದಲ್ಲಿ ವೈದ್ಯರಿಗೆ ನೋಟೀಸ್ ನೀಡಲಾಗಿದೆ ಎಂದರು. 

ಸರ್ಕಾರ ಇಲ್ಲಿ ಇರುವ ಎಲ್ಲಾ ವೈದ್ಯರನ್ನ ಹಾಗೂ ಕೆಲ ಸಿಬ್ಬಂದಿಗಳನ್ನ ವರ್ಗಾವಣೆ ಮಾಡಿದರೆ ಮಾತ್ರ ಮೆಗ್ಗಾನ್ ಒಂದಿಷ್ಟು ಅವ್ಯವಸ್ಥೆ ಮತ್ತು ಇಂತಹ ದೂರುಗಳಿಂದ ದೂರ ಉಳಿಯಬಹುದು. ಇಲ್ಲ ಅಂದರೆ ದೇವರೇ ಕಾಪಾಡಬೇಕು. 

Another complaint against Megan surgeon


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close