SUDDILIVE || SHIVAMOGGA
ರಾತ್ರಿ ಬಿದ್ದ ಮಳೆಗೆ ಶತಾಯುಷಿ ಬಲಿ!A shathayushi died in the rain that fell overnight!
ಜಿಲ್ಲೆಯಾದ್ಯಂತ ಮಳೆ ಚುರುಕುಗೊಂಡಿದೆ. ಈಗಾಗಲೇ ಎರಡು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇವುಗಳ ನಡುವೆ ಮನೆಯೊಂದು ಕುಸಿದು ಬಿದ್ದು ಶತಾಯುಷಿಯೊಬ್ಬರ ಸಾವಾಗಿದೆ.
ರಾತ್ರಿ ಸುರಿದ ಮಳೆಗೆ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಆಡಗಡಿ ಗ್ರಾಮದ ಶ್ರೀಮತಿ ಹೇಮಾವತಿ ಕೋಂ ನಾಗರಾಜ್ (45) ಇವರ ಮಣ್ಣಿನ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಶತಾಯುಷಿ ಸಿದ್ದಮ್ಮ ಸಾವನ್ನಪ್ಪಿದ್ದಾರೆ.
ಸಿದ್ದಮ್ಮ ಹೇಮಾವತಿ ರವರ ಸಂಬಂದಿಯಾಗಿದ್ದು (100) ಹೊನ್ನಾಳಿ ತಾಲೂಕಿನ ಕುಂಕೋವ ಗ್ರಾಮದವರಾಗಿದ್ದಾರೆ, ಮನೆಯಲ್ಲಿ ಹೇಮಾವತಿ ಅವರ ಮಗಳು ಪಲ್ಲವಿ ಅಳಿಯ ಪರಶುರಾಮ್ ಮೊಮ್ಮಗ ಚೇತನ್ 2 ವರ್ಷ ಇವರು ಇದ್ದು ಇವರಿಗೆ ಸಣ್ಣ ಪುಟ್ಟ ಗಾಯವಾಗಿವೆ ಎಂದು ತಿಳಿದು ಬಂದಿದೆ.
A shathayushi died in the rain that fell overnight!