ಮೊಮ್ಮಗನ ಆರತಕ್ಷತೆಯಲ್ಲಿ ಬಿಎಸ್ ವೈ-ಈಶ್ವರಪ್ಪ ‌ ಕುಟುಂಬ-BSY-Eshwarappa family

SUDDILIVE || SHIKARIPURA

ಮೊಮ್ಮಗನ ಆರತಕ್ಷತೆಯಲ್ಲಿ ಬಿಎಸ್ ವೈ-ಈಶ್ವರಪ್ಪ ‌ ಕುಟುಂಬ-BSY-Eshwarappa family welcomes grandson reception

BSY, eshwarapa


ಜಿಲ್ಲೆಯ ಶಿಕಾರಿಪುರದಲ್ಲಿ ಇಂದು ನಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮೊಮ್ಮಗ ಬಿವೈ ರಾಘವೇಂದ್ರ ಅವರ ಸುಪುತ್ರ ಸುಭಾಷ್ ಮತ್ತು ಶ್ರೀಮತಿ ಶ್ರವಣಾ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಪಾಲ್ಗೊಂಡು ನವ ದಂಪತಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಜಕೀಯವಾಗಿ ವೈರಿಗಳಂತಿದ್ದ ಬಿ ಎಸ್ ಯಡಿಯೂರಪ್ಪ ಹಾಗೂ ಈಶ್ವರಪ್ಪನವರು ಪರಸ್ಪರ ಉಭಯ ಕುಶಲಪಾರಿ ವಿಚಾರಿಸಿ ಆತ್ಮೀಯವಾಗಿ ಮಾತುಕತೆ ನಡೆಸಿದರು. ಹಾಗೆ ಇದೇ ಸಂದರ್ಭದಲ್ಲಿ ಬಿವೈ ರಾಘವೇಂದ್ರ ಹಾಗೂ ಬಿ ವೈ ವಿಜಯೇಂದ್ರ ಅವರ ಹತ್ತಿರ ಕೂಡ ಈಶ್ವರಪ್ಪನವರು ಹಾಗೂ ಅವರ ಮಗ ಕಾಂತೇಶ್ ಅನ್ಯೂನ್ಯವಾಗಿ ಮಾತನಾಡಿದ್ದು ವಿಶೇಷವಾಗಿತ್ತು.


ಇಡೀ ರಾಜ್ಯದ ಗಮನ ಸೆಳೆದಿದ್ದ ಈ ಮದುವೆಗೆ ‌ ಈಶ್ವರಪ್ಪನವರು ಬರುತ್ತಾರೋ ಇಲ್ಲವೋ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು ಕೊನೆಗೂ ಈಶ್ವರಪ್ಪನವರು ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಆ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ನೆನ್ನೆ ನಡೆದ ಚಕ್ರವರ್ತಿ ಸೋಲಿಬೆಲೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರ ಒಟ್ಟಿಗೆ ದೀಪ ಬೆಳಗಿಸಿ ನಾವು ಎಲ್ಲಾ ಒಟ್ಟಿಗೆ ಇದ್ದೆವೆ ಎಂಬುದನ್ನು ಸಾಬಿತ್ ಪಡಿಸಿದ್ದರು.ಮುಂದೆ ಬಿ.ಜೆ.ಪಿ. ಪಕ್ಷ ಸೇರುವುದು ಸನ್ನಿಹಿತ ವಾಗಿದೆ ಎಂದು ಶಿವಮೊಗ್ಗ ಜನತೆ ಮಾತನಾಡುತ್ತಿದ್ದಾರೆ.

BSY-Eshwarappa family

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close