ad

ಭಾರತಿಪುರ ಗುಡ್ಡ ಕುಸಿತದ ಭಯದಲ್ಲಿ ಮತ್ತೊಂದು ಪರ್ಯಾಯ ಮಾರ್ಗ-Bharathipura hill collapse

SUDDILIVE ||SHIVAMOGGA

ಭಾರತಿಪುರ ಗುಡ್ಡ ಕುಸಿತದ ಭಯದಲ್ಲಿ ಮತ್ತೊಂದು ಪರ್ಯಾಯ ಮಾರ್ಗ-Another alternative route amid fears of Bharathipura hill collapse

Thirthahalli, Bharathipura

ಮೇಲು ಸೇತುವೆ ಕಾಮಗಾರಿಗೆ ಭಾರತೀಯಪುರ ಗುಡ್ಡ ವನ್ನು ಅಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು ಈಗ ಗುಡ್ಡ ಕುಸಿವ ಆತಂಕ ಎದುರಾಗಿದೆ ಭೂಕುಸಿತ ತಾತ್ಕಾಲಿಕ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ತಾತ್ಕಾಲಿಕ ಚತುಷ್ಪದ ರಸ್ತೆಯ ಒಂದು ಮಾರ್ಗದ ಸಂಚಾರ ಸ್ಥಗಿತಗೊಳ್ಳಲಿದೆ 56.35 ಕೋಟಿ ವೆಚ್ಚದಲ್ಲಿ ಭಾರತಿಪುರ ಎಡಬಲ ಸೇತುವೆ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು ಸಂಚಾರಕ್ಕೆ ಅನುವು ಮಾಡಲಾಗಿದೆ.

ಆಕಸ್ಮಿಕವಾಗಿ ಗುಡ್ಡಕೋಷತ ಸಂಭವಿಸಿದರೆ ಮುಂದೇನು ಗತಿ ಎಂಬ ಪ್ರಶ್ನೆ ಮಾನ ಸಂಚಾರರನ್ನು ಆತಂಕಕ್ಕೆ ಈಡು ಮಾಡಿದೆ ಶಿವಮೊಗ್ಗ ಮಂಗಳೂರು ರಾಷ್ಟ್ರೀಯ ಹೆದ್ದಾರಿ 169 ಮಾರ್ಗದ ವಿಸ್ತರಣೆ ಕಾಮಗಾರಿ ವೇಗ ಪಡೆದುಕೊಂಡು ಮಾರ್ಗ ಮಧ್ಯೆ ನೀರುಗೊಳಿಸುವ ಉದ್ದೇಶದಿಂದ ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು ಇನ್ನೂರು ಮೀಟರ್ ಉದ್ದದಷ್ಟು ಬೃಹತ್ ಗುಡ್ಡವನ್ನು ಕಡಿದು ಚತುಷ್ಪದ ಸೇತುವೆ ನಿರ್ಮಿಸಲಾಗಿದೆ. 

ರಸ್ತೆಯ ಬದಿಯಲ್ಲೇ ಮೂರು ಅಡಿಗಳಷ್ಟು ಎತ್ತರದ ಗುಡ್ಡ ಇದೆ ಒಂದು ವೇಳೆ ಶಾಲಾ ವಾಹನ ಪ್ರಯಾಣಿಕರ ಬಸ್ ಹೆಚ್ಚು ಜನರು ಓಡಾಡುವಾಗ ಗುಡ್ಡ ಕುಸಿದರೆ ಏಕಕಾಲದಲ್ಲಿ ನೂರಾರು ಜನರ ಪ್ರಾಣಕ್ಕೆ ಕುಂದುಂಟಾಗಲಿದೆ. ಭಾರಿ ಪ್ರಮಾಣದಲ್ಲಿ ಗುಡ್ಡ ಜರುವಿದರೆ ಸ್ಥಳೀಯ ನಿವಾಸಿಗಳ ಮನೆಗಳಿಗೆ ಗುಡ್ಡದ ಮಣ್ಣು ನೀರು ನುಗ್ಗುವ ಸಾಧ್ಯತೆ ಹೆಚ್ಚಿದೆ 

ಗುಡುಗು ಗಾಳಿ ಮಳೆ ಸುರಿದರೆ ಗುಡ್ಡದ ನೆತ್ತಿ ನೋಡುವ ಸನ್ನಿವೇಶ ನಿರ್ಮಾಣವಾಗಲಿದೆ ಹತ್ತಿರದಲ್ಲೇ ತುಂಗಾ ನದಿ ಹರಿಯುತ್ತಿದ್ದು ಪ್ರವಾಹ ನೀರಿನ ಸೆಳೆಯ ಹರಿವು ಗುರುತಿಸದಿರುವುದು ರಸ್ತೆ ಸೇತುವೆ ನಿರ್ಮಾಣಕ್ಕಾಗಿ ಬೃಹತ್ ಗಾತ್ರದ ಬುಂಡೋಜರ್ ವೈಬ್ರೆಟರ ಕುಳಿ ಯಂತ್ರ ಬಳಕೆಯಿಂದಾಗಿ ಗುಡ್ಡದ ಮೇಲಿರುವ ಮರಗಳ ಬೇರು ಸಡಿಲ ಗೊಂಡಿರುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ 

ತಡೆಗೋಡೆ ನಿರ್ಮಾಣ ಮಾಡಿಲ್ಲ 

ಅರಣ್ಯ ಇಲಾಖೆಯ ಪೂರ್ವಾಲುಮತಿ ಕೇವಲ ರಸ್ತೆಗೆ ಮಾತ್ರ ದೊರೆತಿದ್ದು ಗುಡ್ಡದ ನೆತ್ತಿಯ ಮೇಲಿನ ಮರಗಳ ಕಟಾವಿಗೆ ದೊರೆತಿರಲಿಲ್ಲ ತಡೆಗೋಡೆ ನಿರ್ಮಿಸಿದರು ಗುಡ್ಡ ಕುಸಿಯುವುದನ್ನು ತಡೆಯಲು ಸಾಧ್ಯವಿಲ್ಲ ಮಳೆಗಾಲದಲ್ಲಿ ಎಲ್ಲಿ ಕೂತಿರುತ್ತದೆ ಎಂದು ವೀಕ್ಷಿಸಿ ಅಲ್ಲಿಗೆ ತಡೆಗೋಡೆ ನಿರ್ಮಿಸುವ ಚಿಂತನೆ ಇಟ್ಟುಕೊಂಡಿದ್ದೇವೆ ಎಂದು ಇತ್ತೀಚೆಗೆ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಮುಂಗಾರು ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಯೊಬ್ಬರು ಸಭೆಗೆ ತಿಳಿಸಿದ್ದರೂ. 

ಅನುಮತಿಸಿದ ಅರಣ್ಯ ಇಲಾಖೆ 

ಭಾರತಿಪುರ ಗುಡ್ಡ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಕೊಂಡಿದೆ ಹೆದ್ದಾರಿ ಪ್ರಾಧಿಕಾರ ಕೇಳಿದಷ್ಟು ಪ್ರದೇಶವನ್ನು ಮಾತ್ರ ಕೇಂದ್ರಾ ಅರಣ್ಯ ಪರಿಸರ ಸಚಿವಾಲಯ ಪೂರ್ವ ಅನುಮತಿ ನೀಡಿದೆ ಗುಡ್ಡ ಕಡಿದಾದ ಪ್ರದೇಶದಿಂದ ಕೂಡಿದ್ದು ಹೆಚ್ಚಿನ ಗುಡ್ಡ ಕಡಿತಕ್ಕೆ ಅನುಮತಿಸಿಲ್ಲ ಪೂರ್ಣ ಅನುಮತಿಗೂ ಮುನ್ನವೇ ಗುಡ್ಡ ಕೊರೆದಿರುವುದರಿಂದ ಸಮಸ್ಯೆ ತಲೆದೂರಿದೆ. 

ತರತುರಿಯ ಪರ್ಯಾಯಮಾರ್ಗ 

ಭಾರತಿಪುರ ಗುಡ್ಡ ಕುಸಿದರೆ ತೀರ್ಥಹಳ್ಳಿ ಸಂಪರ್ಕ ಕಡಿತಗೊಳ್ಳುತ್ತದೆ ಹೀಗಾಗಿ ಕೆಸರೆಯಿಂದ ಬಾನುಗೋಡು ಜಡ್ಡುಗದ್ದೆ ಭಾರತಿಪುರ ಎಡಗುಡ್ಡೆ ಶಿರುಪತಿ, ತುಪ್ಪದ ಮನೆ ಸಂಪರ್ಕಕ್ಕೆ ಹೊಸ ರಸ್ತೆ ನಿರ್ಮಿಸಲಾಗುತ್ತಿದೆ ಎಂಟು ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿ ಬೈಪಾಸ್ ರಸ್ತೆ ನಿರ್ಮಾಣದ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಿದೆ ತರಾತುರಿಯಲ್ಲಿ ರಸ್ತೆ ನಿರ್ಮಿಸುತ್ತಿರುವುದು ಗ್ರಾಮಸ್ಥರಲ್ಲಿ ಹಲವು ಅನುಮಾನಗಳನ್ನು 

ಮಲೆನಾಡು ನಡುಗಿಸಿದ ಭೂಕುಸಿತ 

2019ರಲ್ಲಿ ಹೆಗಲತ್ತಿ ಗುಡ್ಡ ಕುಸಿತ ಬಾರಿ ಸದ್ದು ಮಾಡಿತ್ತು ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಥಳ ವೀಕ್ಷಿಸಿದ್ದರು ಮಾನವ ಹಾನಿ ಸಂಭವಿಸದಿದ್ದರೂ ಸಾಗುವಳಿ ಪ್ರದೇಶಗಳಿಗೆ ಭಾರಿ ಪ್ರಮಾಣದ ನಷ್ಟ ಉಂಟಾಗಿತ್ತು 2021 ರಲ್ಲಿ ಹೆಗ್ಗಾರು ಗುಡ್ಡ ಕುಸಿದು ಹಳ್ಳದ ಹರಿವಿನ ದಿಕ್ಕು ಬದಲಾಯಿಸಿತು. 2023ರಲ್ಲಿ ಆಗುಂಬೆ ಘಾಟಿಯ 17ನೇ ತಿರುಗು ಕುಸಿದು ಸಂಪೂರ್ಣ ರಸ್ತೆ ಸಂಚಾರ ಸ್ಥಗಿತಗೊಳಿಸಿತ್ತು 2024ರಲ್ಲಿ ಬಾಳೆಬೈಲು ಸೇತುವೆ ಮಾರ್ಗ ಕುಸಿದು ಸಂಚಾರ ಸ್ಥಗಿತಗೊಂಡಿತ್ತು ಭಾರತಿಪುರ ತಿರುವಿನಲ್ಲಿ 18 ಕಡೆಗಳಲ್ಲಿ ಗುಡ್ಡ ಜರುಗಿದೆ.

Bharathipura hill collapse

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close