ಪಾಲಿಕೆಯ ನೂತನ ಅಯುಕ್ತರಾಗಿ ಕೆ.ಮಾಯಣ್ಣ ಗೌಡ ನೇಮಕ-K. Mayanna Gowda has been appointed

 SUDDILIVE || SHIVAMOGGA

ಪಾಲಿಕೆಯ ನೂತನ ಅಯುಕ್ತರಾಗಿ ಕೆ.ಮಾಯಣ್ಣ ಗೌಡ ನೇಮಕ-K. Mayanna Gowda has been appointed as the new Commissioner of the Corporation.

Myanna gowda, appointed


ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ  ಕೆ.ಮಾಯಣ್ಣಗೌಡ ಅವರನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್‌ ಆದೇಶಿಸಿದ್ದಾರೆ. ಆಯುಕ್ತರಾಗಿರುವ ಡಾ. ಕವಿತಾ ಯೋಗಪ್ಪನವರ್‌ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.

ಕೆ.ಮಾಯಣ್ಣಗೌಡ ಅವರು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. 2024ರ ಜೂನ್‌ 8ರಂದು ವರ್ಗವಾಗಿತ್ತು. ಸರಿಯಾಗಿ ಒಂದು ವರ್ಷಕ್ಕೆ ಅವರನ್ನು ಪುನಃ ಶಿವಮೊಗ್ಗ ಪಾಲಿಕೆಗೆ ವರ್ಗಾವಣೆ ಮಾಡಲಾಗಿದೆ.

ಡಾ. ಕವಿತಾ ಯೋಗಪ್ಪನವರ್‌ ಅವರನ್ನು ಮುಂದಿನ ಸ್ಥಳ ನಿಯುಕ್ತಿಗಾಗಿ ಸಕ್ಷಮ ಪ್ರಾಧಿಕಾರದಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.

K. Mayanna Gowda has been appointed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close