SUDDILIVE || SHIVAMOGGA
ಜಿಲ್ಲೆಯಾದ್ಯಂತ ಮುಗಿಲು ಮುಟ್ಟಿದ ಸಂಭ್ರಮಾಚರಣೆ-Celebrations across the district reach peak
![]() |
ಗೋಪಿ ವೃತ್ತದ ಬಳಿ |
ಟಿ20 2025ರ ಕಪ್ ನ್ನ ಆರ್‌ಸಿಬಿ ತನ್ನ ಮೂಡಿಗೆ ಏರಿಸಿಕೊಳ್ಳುತ್ತಿದ್ದಂತೆಯೇ ಶಿವಮೊಗ್ಗ ಜಿಲ್ಲಾಧ್ಯಂತ ಸಂಭ್ರಮಾಚರಣೆ ನಡೆದಿದೆ. ಜಿಲ್ಲೆಯಾದ್ಯಂತ ಸಾಗರ, ಆಯನೂರು, ಶಿಮೊಗ್ಗ ಭದ್ರಾವತಿಗಳಲ್ಲಿ ಸಂಭ್ರಮಾಚರಣೆ ನಡೆಸಿದ ದೃಶ್ಯಾವಳಿಗಳು ಸುದ್ದಿ ಲೈವ್ ಗೆ ಲಭ್ಯವಾಗಿದೆ.
ಉಷಾ ನರ್ಸಿಂಗ್ ಹೋಮ್ ಬಳಿ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ ನಂತರ ಗೋಪಿ ವೃತ್ತದ ಬಳಿ ಕೆಲ ಅಭಿಮಾನಿಗಳು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಾಚರಿಸಿದರು. ಅದರಂತೆ ನಗರದ ಹಲವೆಡೆ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಮುಂದು ವರೆದಿದೆ.ಭದ್ರಾವತಿ
ಅದರಂತೆ ಭದ್ರಾವತಿಯಲ್ಲೂ ಸಹ ಅಭಿಮಾನಿಗಳು ಮನೆಯಿಂದ ಹೊರಗೆ ಬಂದ್ ಬೈಕ್ಗಳಲ್ಲಿ ಸಾಗಿ ಜೈ ಆರ್‌ಸಿಬಿ ಎಂದು ಘೋಷಗಳನ್ನು ಕೂಗುತ್ತಾ ಸಾಗಿರುವ ದೃಶ್ಯಗಳು ಲಭ್ಯವಾಗಿವೆ. ಸಾಗರ
ಸಾಗರದಲ್ಲಿ ಪಂದ್ಯಾವಳಿಗಳ ವೀಕ್ಷಣೆಗಾಗಿ ದೊಡ್ಡ ಎಲ್ ಇ ಡಿ ಸ್ಕ್ರೀನ್ ಅಳವಡಿಸಿ ಅಭಿಮಾನಿಗಳು ಪಂದ್ಯಾವಳಿಯ ವೀಕ್ಷಣೆಗೆ ಅನುವು ಮಾಡಿಕೊಟ್ಟಿದ್ದರು. ಆರ್ ಸಿ ಬಿ ಗೆಲ್ಲುತ್ತಿದ್ದಂತೆಯೇ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ್ದಾರೆ.ಆಯನೂರು
ಆಯನೂರಿನಲ್ಲಿ ನಡು ರಸ್ತೆಯಲ್ಲಿ ಅಭಿಮಾನಿಗಳು ಭರ್ಜರಿ ಪಟಾಕಿಗಳನ್ನು ಸಿಡಿಸುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ. ತಡರಾತ್ರಿಯಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
Celebrations across the district reach peak