SUDDILIVE || SHIVAMOGGA
ನಿಹಾಲ್ ಯಾನೆ ಬೆಕ್ಕು ಹಾಗೂ ಬಚ್ಚಾ ಫೈಸಲ್ ವಿರುದ್ಧ ದೂರು ದಾಖಲು-Complaint filed against Nihal alias Bekku and Baccha Faisal
ನಿಹಾಲ್ ಯಾನೆ ಬೆಕ್ಕು, ಬಚ್ಚಾ ಫೈಸಲ್, ಅಹಮದ್ ಹಾಗೂ ಇತರ ನಾಲ್ವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿ ವಿಚಾರದಲ್ಲಿ ಅಂಗಡಿ ಯುವಕನೋರ್ವನನ್ನ ಎತ್ತುಹಾಕಿಕೊಂಡು ಹೋಗಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ದೂರು ದಾಖಲಾಗಿದೆ.
ಅಮೀರ್ ಅಹ್ಮದ್ ಸರ್ಕಲ್ ನಲ್ಲಿರುವ ಬಿಸ್ಮಿಲ್ಲಾ ಮೊಬೈಲ್ ಅಂಗಡಿಯಲ್ಲಿ ವಾದಿ-ಏ-ಹುದಾ ಬಡಾವಣೆಯ ವಾಸಿಯಾದ ಅಹಮದ್ ಎಂಬುವನು ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದನು. ಖರೀದಿಸಿದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಆಗಿದೆ ಎಂದು ತಿಳಿಸಿದ ಹಿನ್ನಲೆಯಲ್ಲಿ ಅಂಗಡಿಯಲ್ಲಿ ಕೆಲಸ ಮಾಡುವ ಯುವಕ ಬೇರೆ ಮೊಬೈಲನ್ನು ನೀಡಿದ್ದನು ಬೇರೆ ಮೊಬೈಲ್ ಮೊಬೈಲ್ ಸಹ ಸರಿಯಾಗಿಲ್ಲ ಬದಲಾಯಿಸಿ ಕೊಡು ಎಂದು ಕಾಡಲು ಆರಂಭಿಸಿದ್ದನು.
ಜೂನ್ 19ರಂದು ಸಂಜೆ ಬಿಸ್ಮಿಲ್ಲಾ ಮೊಬೈಲ್ ಅಂಗಡಿಯ ಮಾಲೀಕರಾದ ಅಬ್ರಾರ್ ಮತ್ತು ಕೆಲಸ ಮಾಡುವಾತ ಸೈಯದ್ ಇರ್ಫಾನ್ ಇರುವಾಗ ಅಹಮದ್ ನಿಹಾಲ್ ಯಾನೆ ಬೆಕ್ಕು ಬಚ್ಚ ಫೈಝಲ್ ಹಾಗೂ ಇತರೆ ನಾಲ್ವರಿಂದ ಐದು ಜನರೊಂದಿಗೆ ಮೊಬೈಲ್ ಅಂಗಡಿ ಒಳಗೆ ನುಗ್ಗಿ ಕೆಲಸಮಾಡುವ ಸೈಯದ್ಇರ್ಫಾನನ ಕೊರಳಪಟ್ಟಿ ಹಿಡಿದು ಈತ ನಮ್ ಹುಡುಗ ಎಂದು ನಿನಗೆ ಗೊತ್ತಿಲ್ಲವೇ ಎಂದು ಬೆದರಿಕೆ ಹಾಕಿದ್ದಾರೆ.
ಸೈಯದ್ ಇರ್ಫಾನನನ್ನು ಬಲವಂತವಾಗಿ ಅಂಗಡಿಯಿಂದ ಎಳೆದುಕೊಂಡು ಹೋಗಿ ಬೈಕ್ ನಲ್ಲಿ ಕೂರಿಸಿಕೊಂಡು ವಾದಿ-ಏ-ಹುದಾ ಬಡಾವಣೆಗೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ದಮ್ಕಿ ಹಾಕಿದ್ದಾರೆ. ಈ ವೇಳೆ ಸೈಯದ್ ಇರ್ಫಾನ್ ಕೂಗಿಕೊಂಡಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಜನರನ್ನ ನೋಡಿ ಈ ಯುವಕರ ತಂಡ ಪರಾರಿಯಾಗಿದೆ. ಸೈಯದ್ ಇರ್ಫಾನ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆತನನ್ನು ಮೆಗನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು ನಂತರ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ನಿಹಾಲ್ ಯಾನೆ ಬೆಕ್ಕು ಇತ್ತೀಚೆಗೆ ಎಷ್ಟೇ ಅಪ್ರಾಪ್ತ ವಯಸ್ಸಿನಿಂದ ಪ್ರಾರ್ಥನಾಗಿದ್ದು 18 ವರ್ಷ ತುಂಬಿದೆ ಅಷ್ಟರಲ್ಲೇ ಹಲವು ಠಾಣೆಗಳಲ್ಲಿ ಈತನ ವಿರುದ್ಧ ದೂರು ದಾಖಲಾಗಿದೆ ಗಾಂಜಾ ಪ್ರಕರಣದಲ್ಲಿ ಸರಿಯಾಗಿದ್ದನು.
Complaint filed against Nihal alias Bekku and Baccha Faisal