ad

ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಚ್ಚರಿಕೆ ನೀಡಿದ ಜಿಲ್ಲಾ ಬಿಜೆಪಿ-District BJP warns district in-charge minister

 SUDDILIVE || SHIVAMOGGA

ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಚ್ಚರಿಕೆ ನೀಡಿದ ಜಿಲ್ಲಾ ಬಿಜೆಪಿ-District BJP warns district in-charge minister

Bjp, minister


ಸಂಸದರ ವರ್ಗಾವಣೆ ಮತ್ತು ಜೋಗದ ಅಭಿವೃದ್ಧಿ ಕುರಿತು ಆಕ್ಷೇಪಣೆಯ ವಿರುದ್ಧ ಗರಂ ಆಗಿದ್ದ ಸಚಿವ ಮಧು ಬಂಗಾರಪ್ಪನವರಿಗೆ ಜಿಲ್ಲಾ ಬಿಜೆಪಿ ತಿರುಗೇಟು ನೀಡಿದೆ. ಜಿಲ್ಲಾ ಮಂತ್ರಿ ಮಧು ಬಂಗಾರಪ್ಪನವರಿಗೆ ಜಿಲ್ಲಾ ಬಿಜೆಪಿ ತಮ್ಮ‌ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವಂತೆ ಎಚ್ಚರಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಜಿಲ್ಲಾ ಮಂತ್ರಿಗಳು ಶಿಕ್ಷಣದ ಮಂತ್ರಿಗಳು ಆಗಿದ್ದಾರೆ ಎಂಬುದನ್ನ ಮರೆತು ನಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ವಿಪಕ್ಷದವರಾಗಿ ಎಚ್ಚರಿಸಲು ಸಂಸದರು ಮುಂದಾದರೆ ಅವರ ವಿರುದ್ಧವೇ ಮುಗಿಬೀಳುವುದು ಎಷ್ಟು ಸರಿ ಎಂದು ಪ್ರಶ್ನಿದರು. 

ಸಂಸದರು ಜಿಲ್ಲೆಯಲ್ಲಿ ಅಧಿಕಾರಿಗಳನ್ನ ಬಲವಂತವಾಗಿ ವರ್ಗಾವಣೆ ಮಾಡುವ ಬಗ್ಗೆ ಆಕ್ಷೇಪಿಸಿದ್ದರು. ಅಧಿಕಾರಿಗಳ ವರ್ಗಾವಣೆಯು ಅವಧಿಗೂ ಮುನ್ನಾ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ ಅಷ್ಟೆ, ಅದಕ್ಕೆ ಯಡಿಯೂರಪ್ಪನವರನ್ನ ತಂದು ಜೋಡಿಸಿರುವುದು ಸಚಿವರಿಗೆ ಶೋಭೆ ತರಲ್ಲ ಎಂದು ಕಿಡಿಕಾರಿದರು. 

ಯಡಿಯೂರಪ್ಪ ಜೈಲಿಗೆ ಹೋಗಿದ್ದು ಮತ್ತು ಸಂಸದರು ಬೇರೆ ವಿಷಯವನ್ನ ಸಚಿವರು ಮಾತನಾಡಿದ್ದಾರೆ. ಶಿವಮೊಗ್ಗದ ತೆರಿಗೆ ಹಣ ಎಲ್ಲಿಗೆ ಹೋಯ್ತು ಎಂದಿರುವ ಸಚಿವರಿಗೆ ಜಿಲ್ಲೆಗೆ ಬರಬೇಕಾದ ಅನುದಾನದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಸಚಿವರ ಮೇಲೆಯೇ ಚೆಕ್ ಬೌನ್ಸ್ ಕೇಸ್ ಆಗಿತ್ತಲ್ಲಾ ಆ ಬಗ್ಗೆ ಅವರ ಹೇಳಿಕೆ ಏನು ಹಾಗಾದರೆ? ಇದನ್ನೆಲ್ಲಾ ನಾವು ಮಾತನಾಡಿದರೆ ಹೇಗಿರುತ್ತೆ ಎಂದು ತಿರುಗೇಟು ನೀಡಿದರು. 

ಸಚಿವರು ಸಂಸದರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಚಂದ್ರಶೇಖರ್ ಶಾಮಣ್ಣ ಮತ್ತಿತರ ರೂಪಸಿತರಿದ್ದರು.

District BJP warns district in-charge minister

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close