ಸೈಟ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ-Fraud of lakhs of rupees

 SUDDILIVE ||SHIVAMOGGA 

ಸೈಟ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ-Fraud of lakhs of rupees on the pretext of providing a site

Fraud, sites

ಸವಳಂಗ ರಸ್ತೆಯಲ್ಲಿರುವ ಶ್ರೀ ವೆಂಚರ್ ಅಂಡ್ ಡೆವಲಪರ್ಸ್ ನ ಪಾಲುದಾರರಾದ ಮೂವರ ವಿರುದ್ಧ ವಂಚನೆ ಮಾಡಿರುವ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ 

2021 ರಲ್ಲಿ ಚೆನ್ನಕೇಶವ್, ಪನ್ನಗಶಯನ, ನವೀನ್ ಕುಮಾರ್ ಎಂ ಕೆ, ನಾಗಭೂಷಣ್, ರಾಮಕೃಷ್ಣ, ಕಿರಣ್ ಕುಮಾರ್ ಎಂಬುವರು ಸವಳಂಗ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಪಕ್ಕದ ಬಿಲ್ಡಿಂಗಿನಲ್ಲಿರುವ ಕಚೇರಿಗೆ ಭೇಟಿ ನೀಡಿ ಒಟ್ಟು 36 ಲಕ್ಷ ತೊಂಬತ್ತು ಸಾವಿರದ  ರೂ ಹಣ ನೀಡಿ ಸೈಟ್ ನೀಡುವುದಾಗಿ ಈ ಪಾಲುದಾರ ಜೊತೆ  ಅಗ್ರಿಮೆಂಟ್ ಮಾಡಿಕೊಂಡಿದ್ದರು

ಬುಕ್ ಮಾಡಿದ ಸೈಟುಗಳು ಡಿಸಿ ಅಲ್ಲಿನೇಷನ್ ಪಡೆದು 18 ತಿಂಗಳಲ್ಲಿ ರಿಜಿಸ್ಟರ್ ಮಾಡಿಕೊಡುವುದಾಗಿ ಈ ಪಾಲುದಾರರು ಭರವಸೆ ನೀಡಿದ್ದರು ಎಂದು ನವೀನ್ ಕುಮಾರ್ ಎಂ ಕೆ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ನಾಲ್ಕು ವರ್ಷದಿಂದ ಯಾವುದೇ ಸೈಟುಗಳನ್ನು ನೀಡದ ಇವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ನವೀನ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

Fraud of lakhs of rupees

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close