ಜೂ.15 ರಂದು ಗಂಧರ್ವ ಗಮನ- Gandharva gamaka on June 15th

SUDDILIVE || SHIVAMOGGA

ಜೂ.15 ರಂದು ಗಂಧರ್ವ ಗಮನ-Gandharva gamaka on June 15th

Gandharva, gamaka

ಗಂಧರ್ವ ಗಮಕ  ಪಾಠಶಾಲೆಯ ವಾರ್ಷಿಕೋತ್ಸವವನ್ನು  ಜೂನ್ 15 ರಂದು ರವಿಂದ್ರ ನಗರದ ಗಣಪತಿ  ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸದಸ್ಯರಾದ ಮುರುಳಿದರ್ ಅವಧಾನಿ ಹೇಳಿದರು.

ಇಂದು ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು  ಸಂಜೆ 5-15 ಕ್ಕೆ ಪ್ರಾರಂಭವಾಗುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹನಿರ್ದೇಶಕರಾದ  ಉಮೇಶ್ ಅವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ನರರೋಗ ತಜ್ಞರಾದ  ಡಾ|| ಶಿವರಾಮಕೃಷ್ಣ ಅವರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅಪಾರವಾಗಿ ಗಮಕ ಶಾರದೆಯ ಸೇವೆಗೈದ ಕರ್ನಾಟಕ ಗಮಕಲಾ ಪರಿಷತ್ತಿನ ಅಧ್ಯಕ್ಷರಾದ ಹಿರಿಯ ಅಧಿಕಾರಿ ಡಾ|| A.V ಪ್ರಸನ್ನ ಅವರನ್ನು ಪಾಠಶಾಲೆಗೆ ವತಿಯಿಂದ ಸನ್ಮಾನಿಸಲಾಗುವುದು.ಸದಾ ಕಾರ್ಯಕ್ರಮದ ನಂತರ ವಿಶೇಷವಾಗಿ ಗಮಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಪೂಜೆ ಹೊಸಹಳ್ಳಿ ಕೇಶವಮೂರ್ತಿಗಳು ಹಾಡಿರುವ ವಿಶೇಷ ಪದ್ಯಗಳ ಧ್ವನಿ ಸುರಳಿಗಳಿಗೆ ಡಾ|| A.V ಪ್ರಸನ್ನ ಅವರು ವ್ಯಾಖ್ಯಾನಿಸುತ್ತಾರೆ.ಕಾರ್ಯಕ್ರಮದ ನೇತೃತ್ವವನ್ನು ಅಧ್ಯಾಪಕರಾದ  ಪ್ರಸಾದ ಭಾರದ್ವಾಜರು ಮತ್ತು ಅಧ್ಯಕ್ಷತೆಯನ್ನು  ಅಚ್ಯುತಾವಧಾನಿಗಳು ವಹಿಸಲಿದ್ದಾರೆ. ಎಂದರು

 ಕನ್ನಡದಲ್ಲಿ ಅನೇಕ ಕಲೆಗಳಿವೆ. ಅದರಲ್ಲಿ  ಗಮಕ ಕಲೆ ಕನ್ನಡಕ್ಕೆ ವಿಶೇಷ ಕಲೆಯಾಗಿದೆ. ಗಮಕವೆಂಬುದು ಅತ್ಯಂತ ಪ್ರಾಚೀನರಾದ ಕಲೆಯಾಗಿದೆ. ಇದರ ವ್ಯಾಪ್ತಿಯು ಬಹಳ ವಿಸ್ತಾರವಾಗಿದ್ದರೂ ಇಂದು ಕನ್ನಡ ನುಡಿಗಾಗಿಯೇ ಮೀಸಲಾಗಿರುವ ಕಲೆಯೆಂದರೆ ಅದು ಗಮಕ ಮಾತ್ರ. ಪ್ರತಿಯೊಂದು ಸಮಾಜದ ಜ್ಞಾನವು ಅದರ ಸಾಹಿತ್ಯದಲ್ಲಿರುತ್ತದೆ ಜ್ಞಾನದ ಸಂವಹನವೇ ಸಾಹಿತ್ಯದ ಧೈಯವಾಗಿರುತ್ತದೆ. 'ಕನ್ನಡ ಸಂಸ್ಕೃತಿ ಕನ್ನಡಸದಾಚಾರ ಕನ್ನಡ ಭಾಷೆಯ ಸೊಗಡು.ನಮ್ಮ ಕಾವ್ಯಗಳಲ್ಲಿಯೇ ವ್ಯಕ್ತವಾಗುತ್ತದೆ. ಇಂತಹ ಕಾವ್ಯವನ್ನು ಜನಮಾನಕ್ಕೆ ಸಮರ್ಥವಾಗಿ ತಲುಪಿಸಬಲ್ಲ.  ಗಮಕ ಈ ಕಲೆಯನ್ನು ಜತನದಿಂದ ಕಾಪಾಡಿಕೊಂಡು ಪ್ರಸಾರ ಮಾಡುತ್ತಿರುವ ಜೋಡಿ ಗ್ರಾಮಗಳು ಸಂಸ್ಕೃತ ಗ್ರಾಮ ಮತ್ತೂರು ಮತ್ತು ಗಮಕ ಗ್ರಾಮಹೊಸಹಳ್ಳಿ, ಈ ಗ್ರಾಮದವರಾದ ಪೂಜ್ಯ ಗಮಕ ಗಂಧರ್ವ ಕೇಶವಮೂರ್ತಿಗಳು ಪದ್ಮಶ್ರೀ ಪುರಸ್ಕೃತರಾಗಿ ಗಮಕಲೆಗೆ ರಾಷ್ಟ್ರೀಯ ಮನ್ನಣೆಯನ್ನು ತಂದಿರುತ್ತಾರೆ.ಅವರ ಶಿಷ್ಯರಾದ  ಪ್ರಸಾದ ಭಾರದ್ವಾಜರು ಕಲಾಪ್ರಸಾರಕ್ಕಾಗಿ ಹಾಗೂ ಕನ್ನಡ ಕಾವ್ಯಗಳನ್ನು ಅದರಲ್ಲಿರುವ ಸಂಸ್ಕಾರ, ಮೌಲ್ಯಗಳನ್ನು ಜನತೆಗೆ ತಲುಪಿಸುವ ಸದುದ್ದೇಶದಿಂದ ಗುರುಗಳ ಹೆಸರಿನಲ್ಲಿ ಗಂಧರ್ವ ಗಮಕ ಪಾಠಶಾಲೆಯನ್ನು ಸ್ಥಾಪಿಸಿದರು. ಅದಕ್ಕೆ ಇದೀಗ  ಒಂದು ವರ್ಷ ತುಂಬಿದೆ.ನಾಡಿನಾದ್ಯಂತ ಈ ಪಾಠಶಾಲೆಯಿಂದ 60ಕ್ಕೂ ಹೆಚ್ಚು ಜನರು ಗಮಕ ವ್ಯಾಸಂಗ ಮಾಡುತ್ತಿರುವುದು ಅತ್ಯಂತ ಸಂತೋಷದಾಯಕ ವಿಷಯವಾಗಿದ್ದು. ಈ ಹಿನ್ನೆಲೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

Gandharva gamaka on June 15th


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close