ಹೊಟೆಲ್ ಕಳುವು ಪ್ರಕರಣ ಬೇಧಿಸಿದ ಹೊಳೆಹೊನ್ನೂರು ಪೊಲೀಸರು-Holehonnur police crack hotel theft case

SUDDILIVE || SHIVAMOGGA

ಹೊಟೆಲ್ ಕಳುವು ಪ್ರಕರಣ ಬೇಧಿಸಿದ ಹೊಳೆಹೊನ್ನೂರು ಪೊಲೀಸರು-Holehonnur police crack hotel theft case

Crack, theft

ಹೋಟೆಲ್ ನಲ್ಲಿದ್ದ ನಗದು, ಪಾತ್ರೆ, ಬ್ಯಾಟರಿ ಮೊದಲಾದ ವಸ್ತುಗಳ ಕಳುವು ಪ್ರಕರಣಕ್ಕೆ ಸಂಬಂದಿಸಿದಂತೆ ಹೊಳೆಹೊನ್ನೂರು ಪೊಲೀಸ್ ಠಾಣೆ ಪೊಲಿಸರು ಆರೋಪಿಯನ್ನ ಪತ್ತೆ ಮಾಡಿ ಒಟ್ಟು 6,40,000 ರೂ.ಗಳ ಮೌಲ್ಯದ ವಸ್ತು ಮತ್ತು ನಗದನ್ನ ವಶಕ್ಕೆ ಪಡೆದಿದ್ದಾರೆ. 

ಶಿವಾಜಿರಾವ್, 36 ವರ್ಷ, ಎಮ್ಮೆ ಹಟ್ಟಿ ಗ್ರಾಮ ಭದ್ರಾವತಿ ರವರು, ದಿನಾಂಕ: 04-04-2025 ರಂದು  ಹೋಟೇಲ್ ನಲ್ಲಿ ಕಳುವು ಪ್ರಕರಣ ನಡೆದಿದ್ದು, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಪ್ರಕರಣದಲ್ಲಿ ಮಾಲು ಹಾಗೂ ಆರೋಪಿತರ ಪತ್ತೆಗಾಗಿ  ಮಿಥುನ್ ಕುಮಾರ್ ಜಿ ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ,  ಅನಿಲ್ ಕುಮಾರ.ಎಸ್.ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1,  ಎ.ಜಿ ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಹಾಗೂ ನಾಗರಾಜ್ ಕೆ ಆರ್ ಪೊಲೀಸ್ ಉಪಾಧೀಕ್ಷಕರು ರವರ ಮೇಲ್ವಿಚಾರಣೆಯಲ್ಲಿ  ಲಕ್ಷ್ಮೀಪತಿ ಆರ್.ಎಲ್ ಪಿ.ಐ ಹೊಳೆಹೊನ್ನೂರು ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ  ಎಎಸ್ಐ ಉಮೇಶ ಹಾಗೂ ಸಿಬ್ಬಂದಿಗಳಾದ ಹೆಚ್ಸಿ ಅಣ್ಣಪ್ಪ, ಪ್ರಸನ್ನ, ಮಂಜುನಾಥ. ಪ್ರಕಾಶ ನಾಯ್ಕ & ಸಿ ಪಿಸಿ  ವಿಶ್ವನಾಥ, ರವರುಗಳನ್ನು ಒಳಗೊಂಡ ತಂಡವನ್ನು ರಚಿಸಿರುತ್ತದೆ.

ತನಿಖಾ ತಂಡವು ದಿನಾಂಕ :- 14-06-2025 ರಂದು ಪ್ರಕರಣದ ಆರೋಪಿ ರಾಕೇಶ ಹೆಚ್ ಕೆ, 27 ವರ್ಷ, ಹೆಂಡೆಗದ್ದೆ ಮೂಡಗೊಪ್ಪ ಗ್ರಾಮ ನಗರ ಹೋಬಳಿ ಹೊಸನಗರ ಈತನನ್ನು ದಸ್ತಗಿರಿ ಮಾಡಿ, ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದ 05 ಬ್ಯಾಟರಿ ಅಂದಾಜು ಮೌಲ್ಯ 60,000/- ರೂ,  ಅಡುಗೆ ಪಾತ್ರೆಗಳು ಅಂದಾಜು ಮೌಲ್ಯ  80,000/- ರೂ ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಅಂದಾಜು ಬೆಲೆ 5,00,000/-  ಸೇರಿ ಒಟ್ಟು 6,40,000/- ರೂ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Holehonnur police crack hotel theft case

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close