SUDDILIVE || BHADRAVATHI
ಖೋಟಾ ನೋಟು ಜಾಲದ ಪತ್ತೆ-ಮಾಹಿತಿ ಬಂದರೆ ಹತ್ತಿರದ ಠಾಣೆಗೆ ಮಾಹಿತಿ ನೀಡಿ-If you receive information about a counterfeit currency ring, please inform the nearest police station.
ನಕಲಿ ನೋಟು ಜಾಲದ ಪತ್ತೆಗೆ ನ್ಯೂಟೌನ್ ಪೊಲೀಸರು ಭರ್ಜರಿ ಬೇಟೆ ಆಡಿದ್ದಾರೆ. ಈ ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನ ಬಂಧಿಸಿ ಆತನಿಂದ ಹಣವನ್ನ ವಶಕ್ಕೆ ಪಡೆಯಲಾಗಿದೆ. ಖೋಟಾ ನೋಟುಗಳು ಪತ್ತೆಯಾದರೆ ಭದ್ರಾವತಿ ಪೊಲೀಸರಿಗೆ ಮಾಹಿತಿ ನೀಡಲು ಪ್ರಕಟಣೆ ಲಭಿಸಿದೆ.
ದಿನಾಂಕ:-13-06-2025 ರಂದು ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ವಾಸಿಯಾದ ಅಜಯ 25 ವರ್ಷ, ಕೂಲಿಬಾಕ್ ಶೆಡ್. ಭದ್ರಾವತಿ, ರವರು ಠಾಣೆಗೆ ಹಾಜರಾಗಿ ದಿನಾಂಕ: 12-06-2025 ರಂದು ಸಂಜೆ ಸಮಯದಲ್ಲಿ ಒಬ್ಬ ಅಸಾಮಿಯು ಡಿಸ್ಕವರ್ ಬೈಕಿನಲ್ಲಿ ಬಂದು 500 ರೂ ನಕಲಿ ನೋಟು ಕೊಟ್ಟು ವ್ಯಾಪಾರ ಮಾಡಿಕೊಂಡು ಹೋಗಿರುತ್ತಾರೆಂದು ನ್ಯೂಟೌನ್ ಗೆ ಬಂದ ಮಾಹಿತಿಯ ಆಧಾರದ ಮೇಲೆ ದೂರು ದಾಖಲಾಗಿತ್ತು.
ಈ ಪ್ರಕರಣದಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಎ ಜಿ ಕಾರಿಯಪ್ಪ ರವರ ಮಾರ್ಗದರ್ಶನದಲ್ಲಿ, ನಾಗರಾಜ ಡಿ.ವೈ.ಎಸ್.ಪಿ ಭದ್ರಾವತಿ ಉಪವಿಭಾಗ ಮಂಜುನಾಥ್ ಸಿ.ಪಿ.ಐ ನಗರ ವೃತ್ತ ಭದ್ರಾವತಿ ಪ್ರಭಾರ ರವರ ಮೇಲ್ವಿಚಾರಣೆಯಲಲ್ಲಿ ಟಿ, ರಮೇಶ್ ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆ, ರವರ ನೇತೃತ್ವದ ಸಿಬ್ಬಂದಿಗಳಾದ ಶ್ರೀ ಟಿ.ಪಿ.ಮಂಜಪ್ಪ ಎ.ಎಸ್.ಐ. ಶ್ರೀ ನವೀನ್ ಹೆಚ್.ಸಿ, ಶ್ರೀ ವಿಜಯ್ ಹೆಚ್.ವೈ ಸಿ.ಹೆಚ್.ಸಿ, ಶ್ರೀ ಶ್ರೀಧರ್ ಸಿ.ಹೆಚ್.ಸಿ, ಶ್ರೀ ಮಾರುತಿ ಪಾಟೀಲ ಸಿಪಿಸಿ, ಶ್ರೀ ಪ್ರಸನ್ನ ಸಿಪಿಸಿ, ಶ್ರೀ ರಘು ಬಿ.ಎಂ ಸಿಪಿಸಿ, ಶ್ರೀ ನಾಗರಾಜಪ್ಪ ಬಿ.ಹೆಚ್ ಸಿಪಿಸಿ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಸಿಲಾಗಿರುತ್ತದೆ.
ತನಿಖಾ ತಂಡವು ಈ ಪ್ರಕರಣದ ಆರೋಪಿಯಾದ ರಂಗೇಗೌಡ, 57 ವರ್ಷ, ರಿಯಲ್ ಎಸ್ಟೆಟ್ ಕೆಲಸ, ವಾಸ: ನಾಗಮ್ಮ ಲೇ ಔಟ್, ಎದುರು ಭಂಢಾರಹಳ್ಳಿ ಭದ್ರಾವತಿ ಈತನನ್ನು ದಸ್ತಗಿರಿ ಮಾಡಿ ಸದರಿ ಆರೋಪಿತನಿಂದ 500 ರೂ ಮುಖ ಬೆಲೆಯ 13 ನೋಟುಗಳು, 200 ರೂ ಮುಖ ಬೆಲೆಯ 1 ನೋಟು, 100 ರೂ ಮುಖ ಬೆಲೆಯ 1 ನೋಟು, 50 ರೂ ಮುಖ ಬೆಲೆಯ 1 ನೋಟು ಹಾಗೂ ಕೃತ್ಯಕ್ಕೆ ಬಳಸಿದ ಡಿಸ್ಕವರ್ ಬೈಕ್ ಅನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.
ಆರೋಪಿತನು ಬೇರೆ ಕಡೆ ವ್ಯವಹಾರ ಮಾಡಿದ್ದರ ಬಗ್ಗೆ ತಿಳಿಸಿದ್ದು OFP 790829 ಮತ್ತು 9TV 978202 ಈ ನಂಬರಿನ 500 ರೂ ಮುಖ ಬೆಲೆಯ ನೋಟುಗಳು ಕಂಡು ಬಂದಲ್ಲಿ ಸಾರ್ವಜನಿಕರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ಅಥವಾ ಶಿವಮೊಗ್ಗ, ಕಂಟ್ರೋಲ್ ರೂಂಗೆ ಮಾಹಿತಿ ತಿಳಿಸುವುದು.
ಸದರಿ ತನಿಖಾ ತಂಡದ ಉತ್ತಮ ವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
information about a counterfeit currency ring