ad

ಮನೆ ಕಳ್ಳತನ ಪ್ರಕರಣ-ಆರೋಪಿ ಬಂಧನ-House burglary case - accused arrested

 SUDDILIVE || BHADRAVATHI

ಮನೆ ಕಳ್ಳತನ ಪ್ರಕರಣ-ಆರೋಪಿ ಬಂಧನ-House burglary case - accused arrested

Accused, arrested


ಚಿನ್ನಾಭರಣ ಕಳುವು ಪ್ರಕರಣದ ಆರೋಪಿಯನ್ನ ಹೊಳೆಹೊನ್ನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೂ. 16 ರಂದು ಭದ್ರಾವತಿ ಅರೆದೊಟ್ಲು ಗ್ರಾಮದ ವಾಸಿ ಮಹಿಳೆಯೊಬ್ಬರ ಮನೆಯಲ್ಲಿ ಬಂಗಾರ ಹಾಗು ಬೆಳ್ಳಿಯ ಆಭರಣ ಮತ್ತು ನಗದು ಹಣವನ್ನು  ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಪ್ರಕರಣ  ಹೊಳೆಹೊನ್ನೂರು ಪೊಲೀಸ್ ಠಾಣೆ  ದಾಖಲಾಗಿತ್ತು. 

ಪ್ರಕರಣದಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ ಕೆ, ಐಪಿಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಅನಿಲ್ ಕುಮಾರ.ಎಸ್.ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಎ.ಜಿ ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಹಾಗೂ  ನಾಗರಾಜ್ ಕೆ ಆರ್ ಪೊಲೀಸ್ ಉಪಾಧೀಕ್ಷಕರು ಭದ್ರಾವತಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ  ಲಕ್ಷ್ಮಿಪತಿ ಆರ್.ಎಲ್,  ಪಿ.ಐ ಹೊಳೆಹೊನ್ನೂರು ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ  ಎಎಸ್ಐರವರುಗಳಾದ ಉಮೇಶ ಹಾಗೂ ಸಿಬ್ಬಂದಿಗಳಾದ ಹೆಚ್ಸಿ ಅಣ್ಣಪ್ಪ, ಪ್ರಸನ್ನ, ಮಂಜುನಾಥ. ಪ್ರಕಾಶ ನಾಯ್ಕ, ಕುಮಾರ  & ಪಿಸಿ  ವಿಶ್ವನಾಥ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 

ತನಿಖಾ ತಂಡವು ದಿನಾಂಕ : 19-06-2025 ರಂದು ಪ್ರಕರಣದ ಆರೋಪಿ ಅಪ್ರೋಜ್ ಅಹಮದ್ ,  42 ವರ್ಷ,  ಚನ್ನಗಿರಿ ಟೌನ್ ದಾವಣಗೆರೆ ಜಿಲ್ಲೆ  ಹಾಲೀ ವಾಸ ತಿಪ್ಪಲಾಪುರ ಕ್ಯಾಂಪ್ ಅರಳಹಳ್ಳಿ ಗ್ರಾಮ ಭದ್ರಾವತಿ ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಹೊಳೆಹೊನ್ನೂರು ಪೊಲೀಸ್ ಠಾಣೆ ಗುನ್ನೆ ನಂ 184/2025 & ಗುನ್ನೆ ನಂ 182/2025 ಸದರಿ 2 ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು 66 ಗ್ರಾಂ 820 ಮಿಲಿ ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 113 ಗ್ರಾಂ ಬೆಳ್ಳಿಯ ಆಭರಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಸೇರಿ ಒಟ್ಟು ಅಂದಾಜು ಬೆಲೆ 6,43,000/-ರೂ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯುವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

House burglary case - accused arrested


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close