ಅಂತರಾಜ್ಯ ಕಳ್ಳನ ಕಾಲಿಗೆ ಗುಂಡು, -Interstate thief shot in the leg

 SUDDILIVE || SHIVAMOGGA

ಅಂತರಾಜ್ಯ ಕಳ್ಳನ ಕಾಲಿಗೆ ಗುಂಡು, -Interstate thief shot in the leg

Interstate, leg


ಶಿವಮೊಗ್ಗದಲ್ಲಿ ಮತ್ತೆ ಮೊಳಗಿದ ಪೊಲೀಸರ ಗುಂಡಿನ ಸದ್ದು, ಅಂತರರಾಜ್ಯ ಕಳ್ಳನ ಕಾಲಿಗೆ ಪೊಲೀಸರ ಗುಂಡೇಟು ಬಿದ್ದಿದೆ. ಕಲ್ಕೆರೆ ಮಂಜುನಾಥ್ @ ಕಲ್ಕೆರೆ ಮಂಜ(47) ಎಂಬ ಆರೋಪಿ ಕಾಲಿಗೆ ಗುಂಡೇಟು ತಗುಲಿದೆ. 

ಬೆಂಗಳೂರಿನ‌ ಕಲ್ಕೆರೆ ನಿವಾಸಿಯಾದ ಆರೋಪಿ ಮಂಜುನಾಥ್ ಕಳ್ಳತನಕ್ಕಾಗಿ ಶಿವಮೊಗ್ಗ ನಗರದಲ್ಲಿ ಮುರ್ನಾಲ್ಕು ದಿನದಿಂದ ಓಡಾಡುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಇತನ ವಿರುದ್ಧ 24  ಪ್ರಕರಣ ದಾಖಲಾಗಿವೆ ಇದರಲ್ಲಿ ಬಹುತೇಕ ಕಳ್ಳತನ ಪ್ರಕರಣಗಳಿದ್ದವು. 

ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರಕಿದ್ದ ಹಿನ್ನೆಲೆಯಲ್ಲಿ ಜಯನಗರ ಠಾಣೆಯಲ್ಲಿ ಗಾಂಧಿನಗರದಲ್ಲಿ ಮನೆಗಳ್ಳತನ ನಡೆದಿತ್ತು ಏಪ್ರಿಲ್ ಅಲ್ಲಿ ನಡೆದ ಮನೆಗಳ್ಳತನದ ಬಗ್ಗೆ ನಿತಿನ್ ಎಂಬುವರು ದೂರದ ಕಳಿಸಿದ್ದರು. ಮನೆಯ ಒಳಗೆ ಇದ್ದ ಐ 20 ಕಾರ್ ನ್ನ ಹಾಗೂ ಸುಮಾರು 11,30,000 ಚಿನ್ನಾಭರಣ, ನಗದು ಹಾಗೂ ಇತರ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿದ್ದ ಪ್ರಕರಣ ದೂರು ದಾಖಲಾಗಿತ್ತು

ಈ ಪ್ರಕರಣದಲ್ಲಿ  ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಆರೋಪಿ ಎಗುರಿಬಿದ್ದಿದ್ದಾನೆ. ಪೊಲೀಸ್ ಸಿಬ್ಬಂದಿ ದ್ಯಾಮಪ್ಪನ ಮೇಲೆ ಕಳ್ಳಮಂಜ ಹಲ್ಲೆ ಮಾಡಿದ್ದನು. ಪಿಎಸ್ಐ ನವೀನ್ ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿ, ಎಚ್ಚರಿಕೆ ನೀಡಿದ್ರೂ ಚಾಕುವಿನಿಂದ ಹಲ್ಲೆ ನಡೆಸಿದ್ದನು.

ಈ ವೇಳೆ ಆತ್ಮರಕ್ಷಣೆಗೆ ನವೀನ್ ಕುಮಾರ್ ಆರೋಪಿ ಮಂಜನ ಕಾಲಿಗೆ ಫೈಯರ್ ಮಾಡಲಾಗಿದೆ. ಜಯನಗರ ಠಾಣೆ ಪಿಎಸ್ಐ ನವೀನ್ ಬ್ಯಾಕೋಡು ರಿಂದ ಫೈರಿಂಗ್ ಮಾಡಿದ್ದಾರೆ. ಬಳಿಕ ಆರೋಪಿ ಬಂಧನವಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ಸಹ ಆಸ್ಪತ್ರೆಗೆ ದಾಖಲು. ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. 

Interstate thief shot in the leg


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close