PSI ದಂಡದ ಫೋಸ್ ಗೂ ನೆಟ್ಟಿಗರ ಆಕ್ಷೇಪಣೆ-Netizens object to the penalty fee

 SUDDILIVE || SHIVAMOGGA 

ದಂಡದ ಫೋಸ್ ಗೂ ನೆಟ್ಟಿಗರ ಆಕ್ಷೇಪಣೆ-Netizens object to the penalty fee

Netizens, penalty

ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐಯವರ  ಪೊಸ್ಟ್ ವೊಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮತ್ತೊಮ್ಮೆ ತಪರಾಕಿ ಹಾಕಿದ್ದಾರೆ. 

ದಿನಾಂಕ. 19.06.25 ರಂದು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ. ತಿರುಮಲೇಶ್ ರವರು ಮತ್ತು ಸಿಬ್ಬಂದಿಯವರಾದ ಪ್ರಶಾಂತ್, ಪ್ರವೀಣ್ ಪಾಟೀಲ್, ಶಂಕರಲಿಂಗ ರವರುಗಳು ಶಿವಮೊಗ್ಗ ನಗರದಲ್ಲಿ  ಸಿ ಸಿ ಕ್ಯಾಮೆರದ ಮೂಲಕ ITMS ತಂತ್ರಾ0ಶದಡಿಯಲ್ಲಿ ದಾಖಲಾದ 29 ಸಂಚಾರ ನಿಯಮ ಉಲ್ಲಂಘಿಸಿದ್ದು, ಈ-ಚಲನ್ ಮೂಲಕ ಕಾರಿನ ಮಾಲೀಕರವರಿಂದ  27,000/- ರೂ. ದಂಡವನ್ನು ಕಟ್ಟಿಸಿಕೊಂಡಿರುವ ಫೊಟೊ ಮತ್ತು ಮಾಹಿತಿಯನ್ನ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಎಂಬ ಪೇಜ್ ನಲ್ಲಿ ಹಾಕಿದ್ದಾರೆ. 



ಹಾಕಿರುವ ಪೋಸ್ಟ್ ಗೆ ಪರ ಮತ್ತು ವಿರುದ್ಧದ ಕಾಮೆಂಟ್ಸ್ ಗಳು ಹರಿದು ಬಂದಿವೆ. ಬಹುತೇಕ ಸಿಗ್ನಲ್ ನಲ್ಲಿ ಟೈಮಿಂಗ್ಸ್ ತೋರಿಸುತ್ತಿಲ್ಲ. ಬಸ್ ನಿಲ್ದಾಣದ ಸಿಗ್ನಲ್ ನಲ್ಲಿ ಯಾವಕಡೆ ಸಿಗ್ನಲ್ ಒಪನ್ ಆಗುತ್ತೆ ಗೊತ್ತಾಗುತ್ತಿಲ್ಲ. ಆಟೋದವರು ಎಲ್ಲಿ ಹೋಗ್ತಾರೆ ಗೊತ್ತಾಗುತ್ತಿಲ್ಲ. ಮೊದಲುಎಲ್ಲಾ ಸಿಗ್ನಲ್ ನಲ್ಲಿ ಟೈಮಿಂಗ್ಸ್ ಹಾಕಿ ಆವಾಗ ಸಿಗ್ನಲ್ ಜಂಪ್ ಕಡಿಮೆ ಆಗುತ್ತೆ ಎಂದು ಕಾಂಮೆಟ್ಸ್ ಹಾಕಿದರೆ

ಗಾರ್ಡನ್ ಏರಿಯಾದ ಗುಜರಿ ವಸ್ತುಗಳನ್ನ ಇಟ್ಟು ರಸ್ತೆಒತ್ತುವರಿಯಾಗಿದೆ ಮೊದಲು ಸರಿಪಡಿಸಿ ಎಂಬ ಆಕ್ಷೇಪಣೆಗಳು ಬಂದಿದೆ. ಜೀಬ್ರಾ ಕ್ರಾಸ್ ನಲ್ಲಿ ಖಾಸಗಿ ಬಸ್ ಗಳು ನಿಲ್ಲಿಸಲಾಗುತ್ತಿದೆ ಅದರ ಬಗ್ಗೆ ಜಾಗೃತಿ ಮೂಡಿಸಿ ನಂತರ ದಂಡ ಹಾಕಿ, ಯಾವುದೋ ಟಾರ್ಗೆಟ್ ವಾಹನಗಳಿಂದ ದಂಡ ವಸೂಲಿ ಮಾಡಬೇಡಿ ಎಂಬ ಆಕ್ಷೇಣೆಗಳು ಕೇಳಿ ಬರುತ್ತಿವೆ. ಇವನ್ನೆಲ್ಲಾ ಟ್ರಾಫಿಕ್ ನ ಪೊಲೀಸರು ಸರಿಪಡಿಸಲು ಸಾಧ್ಯವಾ? ಹೀಗೆ ಫೊಸ್ ಕೊಟ್ಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ಹೀರೋ ಆಗಬೇಕಾ? ಕಾದು ನೋಡಬೇಕಿದೆ. 

Netizens object to the penalty fee

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close