" alt="ad">

ಜೂ.26 ಮತ್ತು 27 ರಂದು ವಿದ್ಯುತ್ ವ್ಯತ್ಯಯ

SUDDILIVE || SHIVAMOGGA

ಜೂ.26 ಮತ್ತು 27 ರಂದು ವಿದ್ಯುತ್ ವ್ಯತ್ಯಯ-Power outage on June 26th and 27th

Power, Outage


ಶಿವಮೊಗ್ಗದ ಕೆಲ ಬಡಾವಣೆಗಳಲ್ಲಿ  ಜೂ.26 ಮತ್ತು 27 ರಂದು ಹಲವು ಕಾರಣಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. 

ಶಿವಮೊಗ್ಗ ತಾಲೂಕು ಆಯನೂರು ಗ್ರಾಮದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಾಗೂ ತುರ್ತು ಕಾಮಗಾರಿ ಇರುವುದರಿಂದ ಜೂ.26 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ಈ ವಿವಿ ಕೇಂದ್ರದಿAದ ಸರಬರಾಜಾಗುವ ಹಳ್ಳಿಗಳಾದ ಆಯನೂರು, ಮಂಡಘಟ್ಟ, ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ತಮ್ಮಡಿಹಳ್ಳಿ, ಮೈಸವಳ್ಳಿ, ಸೇವಾಲಾಲ್ ನಗರ, ವೀರಣ್ಣನಬೆನವಳ್ಳಿ, ಇಟ್ಟಿಗೇಹಳ್ಳಿ ಹಾಗೂ ಸುತ್ತಮುತ್ತ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನಗರ ಉಪ ವಿಭಾಗ-2 ಘಟಕ-06ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ನಡೆಯುತ್ತಿರುವುದರಿಂದ ಜೂ.26 ರ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ. 

ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ಭವಾನಿ ಲೇಔಟ್, ಆಶ್ರಯ ಬಡಾವಣೆ, ಚಾಲುಕ್ಯ ನಗರ, ಕೆಹೆಚ್‌ಬಿ ಕಾಲೋನಿ, ಹಳೆ ಊರು ಗೋಪಿಶೆಟ್ಟಿಕೊಪ್ಪ, ಮಂಜಪ್ಪ ಬಸಪ್ಪ ಲೇಔಟ್, ಜಿಎಸ್ ಕ್ಯಾಸ್ಟಿಂಗ್, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಫ್ಯಾಕ್ಟರಿ, ಕಾಮತ್ ಲೇಔಟ್, ಮೇಲಿನ ತುಂಗಾನಗರ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ನಗರ ಉಪ ವಿಭಾಗ-2 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ.27 ರಂದು ವಿದ್ಯುತ್ ವ್ಯತ್ಯಯ

 ಶಿವಮೊಗ್ಗ ನಗರದ ಮೀನು ಮಾರುಕಟ್ಟೆ ಬಳಿ ವಿದ್ಯುತ್ ಉಪಕರಣಗಳ ದುರಸ್ಥಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.27 ರಂದು ಬೆಳ್ಳಗ್ಗೆ 9:00 ರಿಂದ 06:00 ರವರೆಗೆ ಈ ವ್ಯಾಪ್ತಿಯ ಗಾಂಧಿಬಜಾರ್, ಸಾರ್ವಕರ್ ನಗರ, ಮೀನು ಮಾರುಕಟ್ಟೆ, ತಿರುಪಳಯ್ಯನ ಕೇರಿ, ಎಲೆರೇವಣ್ಣ ಕೇರಿ, ಆನವೇರಪ್ಪ ಕೇರಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close