SUDDILIVE || SHIVAMOGGA
ರಾಷ್ಟ್ರಭಕ್ತರ ಬಳಗದ ಬೃಹತ್ ಪ್ರತಿಭಟನೆ- ಗುಸು ಗುಸುಗೆ ಕಾರಣವಾಯ್ತಾ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರ ಹಾಜರಾತಿ-Massive protest by the Rashtra Bhakta balaga - the presence of the District Brahmin Mahasabha President caused a ruckus
ರಾಜ್ಯದ ಪ್ರತಿ ಯೋಜನೆಗಲ್ಲಿ ಅಸಂವಿಧಾನಿಕವಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಿರುವುದನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಇಂದು ರಾಷ್ಟ್ರಭಕ್ತರ ಬಳಗ ಮಾಜಿ ಡಿಸಿಎಂ ಈಶ್ವರಪ್ಪನವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ಪ್ರತಿಭಟನೆಯಲ್ಲಿ ಆರ್ ಎಸ್ ಎಸ್ ಮುಖಂಡ ನಟರಾಜ್ ಭಾಗವತ್ ಭಾಗವಹಿಸಿರುವುದು ಸಹ ಅಷ್ಟೇ ವಿಶೇಷವಾಗಿದೆ ಇತ್ತೀಚೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಕರ್ನಾಟಕ ಸರ್ಕಾರದ ವಸತಿ ಯೋಜನೆಗಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗುವ ಮೀಸಲಾತಿಯನ್ನು ಹೆಚ್ಚಿಸಲು ನಿರ್ಧರಿಸಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ರಾಮಣ್ಣ ಶ್ರೇಷ್ಠ ಪಾರ್ಕಿನಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ರಾಷ್ಟ್ರಭಕ್ತರ ಬಳಗ ಪ್ರತಿಭಟನೆ ಮೆರವಣಿಗೆ ನಡೆಸಿ ಸಿಎಂ ಸಿದ್ದರಾಮಯ್ಯ ರಿಗೆ ಮನವಿ ಸಲ್ಲಿಸಿತು.
ಆಶ್ರಯ ಬಸವ ಅಂಬೇಡ್ಕರ್ ನಿವಾಸ ದೇವರಾಜ್ ಅರಸ್ ವಸತಿ ಯೋಜನೆಗಳು ಮುಖ್ಯಮಂತ್ರಿಗಳ ನಿವೇಶನ ಯೋಜನೆಗಳು ಹಿಂದುಳಿದ ವರ್ಗಗಳ ದಲಿತರ ಪರಿಶಿಷ್ಟ ಪಂಗಡದವರ ಪರಿಶಿಷ್ಟ ಜಾತಿಗಳಂತಹ ಸಾಮಾಜಿಕವಾಗಿ ತುಳಿತಕ್ಕೊಳಗಾದ ಬಡವರಿಗೆ ಮೀಸಲಾದ ಯೋಜನೆಗಳನ್ನು ಕೇವಲ ರಾಜಕೀಯ ಲಾಭಕ್ಕಾಗಿ ಎಲ್ಲ ಸಮುದಾಯಗಳ ಜನರನ್ನು ವಂಚಿಸಿ ಅಲ್ಪಸಂಖ್ಯಾತರಿಗೆ 15% ಮೀಸಲಾತಿ ನೀಡುತ್ತಿರುವುದು ಸಂವಿಧಾನ ವಿರೋಧಿ ನಡೆಯನ್ನು ಪ್ರದರ್ಶಿಸುತ್ತಿದೆ ಕೂಡಲೇ ಸರ್ಕಾರ ನಿರ್ಧಾರವನ್ನು ಹಿಂಪಡೆದು ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳದಿದ್ದರೆ ರಾಷ್ಟ್ರಭಕ್ತರ ಬಳಗ ಮುಂದಿನ ಹೋರಾಟವನ್ನು ನಿರ್ಧರಿಸಲಿದೆ ಎಂದು ಎಚ್ಚರಿಸಿದೆ.
ನಟರಾಜ್ ಭಾಗವತ ರವರ ನಡೆ ನಿಗೂಡ
ಈ ಹಿಂದೆ ಆರ್ ಎಸ್ ಎಸ್ ನಲ್ಲಿ ಗುರುತಿಸಿಕೊಂಡಿದ್ದ ಹಾಗೂ ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಜಿಲ್ಲ ಬ್ರಾಹ್ಮಣರ ಸಂಘದ ಜಿಲ್ಲಾಧ್ಯಕ್ಷ ನಟರಾಜ್ ಭಾಗವತ್ ಇಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಯಲ್ಲಿ ಗುರುತಿಸಿಕೊಳ್ಳದೆ ರಾಷ್ಟ್ರಭಕ್ತರ ಬಳಗದಲ್ಲಿ ಭಾಗಿಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿತ್ತು.
ಈಗಾಗಲೇ ರಾಷ್ಟ್ರಭಕ್ತರ ಬಳಗಕ್ಕೆ ಬಿಜೆಪಿಯ ಹಲವು ಕಾರ್ಯಕರ್ತರು ಸೇರ್ಪಡೆಯಾದ ಬೆನ್ನಲ್ಲೇ ನಟರಾಜ್ ಭಾಗವತರ ನಡೆ ಹಲವು ಗುಮಾನಿಗೆ ಎಡೆಮಾಡಿಕೊಟ್ಟಿದೆ.
Massive protest by the Rashtra Bhakta balaga