SUDDILIVE || SHIVAMOGGA
ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾಗಿ ಎಸ್. ಪರಮೇಶ್ವರ್ ಆಯ್ಕೆ-S. Parameshwar elected as district president of Savita Samaj
ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾಗಿ ಎಸ್. ಪರಮೇಶ್ವರ್‌ರವರು ಇಂದು ಸರ್ವಾನುಮತದಿಂದ ಆಯ್ಕೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮಾಜಿ ಅಧ್ಯಕ್ಷರಾದ ಮೋಹನ್‌ರವರು ಮಾತನಾಡಿ, ಆರು ತಿಂಗಳ ಹಿಂದೆಯೇ ಅಧ್ಯಕ್ಷರ ಆಯ್ಕೆಯನ್ನು ನಿರ್ಧರಿಸಲಾಗಿತ್ತು. ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು ಭಾಗವಹಿಸಿದ್ದರು. ಹಿಂದಿನ ಅಧ್ಯಕ್ಷರ ನಿರ್ಲಕ್ಷö್ಯಧೋರಣೆ ಮತ್ತು ಸರ್ವಾಧಿಕಾರ ಧೋರಣೆಯನ್ನು ವಿರೋಧಿಸಿ ನೂತನ ಅಧ್ಯಕ್ಷರ ಆಯ್ಕೆಯನ್ನು ಅನಿವಾರ್ಯವಾಗಿ ಮಾಡಲಾಗಿದೆ ಎಂದರು.
ನೂತನ ಅಧ್ಯಕ್ಷರಾದ ಪರಮೇಶ್ವರ್ ಮಾತನಾಡಿ, ಈ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಆಸೆಯಿದೆ. ಸಣ್ಣ-ಪುಟ್ಟ ಸಮಾಜಗಳ ಕೂಡ ಅಭಿವೃದ್ಧಿಗೊಂಡಿವೆ. ಸವಿತಾ ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿದೆ. ಗುರಿ ಮುಟ್ಟಬೇಕಾದರೆ ಸಮಾಜದ ಒಗ್ಗಟ್ಟು ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರನ್ನು ಜೋಡಿಸಿಕೊಂಡು ಸದಸ್ಯರ ಸಂಖ್ಯೆ ಹೆಚ್ಚಿಸಿ, ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಚಿಂತಿಸಲಾಗಿದೆ. ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣದ ಗುರಿಯಿದೆ. ಎಲ್ಲಾ ತಾಲ್ಲೂಕುಗಳಿಗೂ ಸವಿತಾ ಸಮಾಜದ ಕೇಂದ್ರಗಳಲ್ಲಿ ಕಂಪ್ಯೂಟರ್ ಸ್ಥಾಪಿಸಿ ಸಮಾಜಬಾಂಧವರ ವಿಳಾಸವನ್ನು ಡಿಜಿಟಲೀಕರಣ ಮಾಡುವ ಯೋಜನೆಯಿದೆ. ಕಟ್ಟಕಡೆಯ ಸಮಾಜ ಬಾಂಧವರಿಗೂ ಎಲ್ಲಾ ಸೌಲಭ್ಯಗಳು ಸಿಗಬೇಕು ಮತ್ತು ಅವರ ಸಹಕಾರವನ್ನು ಪಡೆಯಲಿದ್ದೇನೆ ಎಂದರು.
ಮಾಡಿದ ಕೆಲಸ ಶಾಶ್ವತವಾಗಿರಬೇಕು. ಜನ ನಮ್ಮನ್ನು ನೆನಪಿನಲ್ಲಿಡುವಂತಹ ಕೆಲಸ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ವಿವಿಧ ತಾಲ್ಲೂಕಿನ ಅಧ್ಯಕ್ಷರುಗಳಾದ ಗಿರೀಶ್, ವಿಶ್ವನಾಥ್, ರಂಜಿತ್, ಮಂಜುನಾಥ, ತೇಜಪ್ಪ, ಸತ್ಯನಾರಾಯಣ, ತಾಲ್ಲೂಕು ಉಪಾಧ್ಯಕ್ಷ ಪ್ರಭಾಕರ್, ಮಾಜಿ ಕಾರ್ಯದರ್ಶಿ ರವಿ, ಮೋಹನ್ ಇದ್ದರು.
S. Parameshwar elected as district president of Savita Samaj