" alt="ad">

ವಾಹನಕ್ಕೆ ಸಿಲುಕಿ ಜಿಂಕೆ ಬಲಿ- Deer died after vehicle crash

 SUDDILIVE || SHIVAMOGGA

ವಾಹನಕ್ಕೆ ಸಿಲುಕಿ ಜಿಂಕೆ ಬಲಿ-Deer died after vehicle crash

Deer, accident


ಅಪರಿಚಿತ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಪುರಸಭೆ ವ್ಯಾಪ್ತಿಯ ಹಳೇಸೊರಬದ ಗೌರಿಕೆರೆ ಮಠ ಸಮೀಪದ ರಸ್ತೆಯಲ್ಲಿ ಮಂಗಳವಾರ ಬೆಳಗಿನ ಜಾವ ಜಿಂಕೆಯೊಂದು ಮೃತಪಟ್ಟಿದೆ.

ಪಟ್ಟಣದ ಹೊರವಲಯದ ಸೊರಬ ತವನಂದಿ ಮುಖ್ಯರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆ ಗಾಯಗೊಂಡು ನರಳಾಡಿ, ಮೃತಪಟ್ಟಿದೆ. 

ಬೆಳಗ್ಗೆ ಜಮೀನಿಗೆ ತೆರಳುವ ರೈತರು ಗಮನಿಸಿ ಅರಣ್ಯ  ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Deer died after vehicle crash


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close