SUDDILIVE || THIRTHAHALLI
ಮೋಜುಮಸ್ತಿಗೆ ಕಾರಣವಾಯಿತಾ ಕವಿ ಸಮಾದಿಯ ಜಾಗ-The poet's tomb site became a source of fun
ಕವಿಮನೆ, ಮೋಜು ಮಸ್ತಿಗೆ ಕಾರಣವಾಗಿರುವುದು ದುರಂತದ ವಿಷಯವಾಗಿದೆ. ತೀರ್ಥಳ್ಳಿಯ ಕುಪ್ಪಳ್ಳಿಯಲ್ಲಿರುವ ಕುವೆಂಪು ಅವರ ಸಮಾಧಿ ಬಳಿಯೇ ಜ್ಞಾನವಿಲ್ಲದೆ ಪ್ರವಾಸಿಗರ ಹುಚ್ಚಾಟ ಮುಂದುವರೆದಿದೆ.
ಕುವೆಂಪು ಅವರ ಹುಟ್ಟು ಮನೆಯಾದ ಕುಪ್ಪಳ್ಳಿಯಲ್ಲಿರುವ ಅವರ ಮನೆಯನ್ನು ಮತ್ತು ಕವಿಮನೆಯ ಪಕ್ಕದಲ್ಲಿರುವ ಗುಡ್ಡದ ಮೇಲೆ ಅವರ ಸಮಾಧಿಯು ಸಹ ಇದೆ. ಕುಪ್ಪಳ್ಳಿಯಲ್ಲಿ ಕವಿಮನೆ ಹಾಗೂ ಕುವೆಂಪು ಅವರ ಸಮಾಧಿ ಬಳಿಯೇ ಪ್ರವಾಸಿಗರು ರೀಲ್ಸ್ ನ ಹುಚ್ಛಾಟದ ಹಿನ್ನೆಲೆಯಲ್ಲಿ ಸಮಾಧಿ ಬಳಿಯೆ ಕುಣಿಯುವುದು ಕಂಡುಬಂದಿದೆ
ಕುವೆಂಪು ಪ್ರತಿಷ್ಠಾನದ ಅಡಿಯಲ್ಲಿ ಕವಿಮನೆ ಅಭಿವೃದ್ಧಿಗೊಳಿಸಲಾಗಿದೆ. ಈ ಅಭಿವೃದ್ಧಿ ಹೊಸ ಪೀಳಿಗೆಗೆ ಮೋಜು ಮಸ್ತಿಗೆ ಕಾರಣವಾಗಿದೆ. ಕುಪ್ಪಳ್ಳಿಯ ಕವಿ ಮನೆಗೆ ಪ್ರತಿ ವರ್ಷ ಮೂರರಿಂದ ಮೂರುವರೆ ಲಕ್ಷ ಜನ ಭೇಟಿ ನೀಡುತ್ತಾರೆ. ಇಂದು ಭಾನುವಾರ ವಾದುದರಿಂದ ಎರಡರಿಂದ ಮೂರು ಸಾವಿರ ಜನ ಭೇಟಿ ನೀಡಿದ್ದಾರೆ. ಕವಿ ಮನೆಗೆ ಬಂದವರು ಕವಿಯ ಸಮಾದಿಗೂ ಸಹ ಭೇಟಿ ನೀಡಿ ಅಲ್ಲಿನ ಪ್ರಕೃತಿ ತನ್ನ ಸೌಂದರ್ಯವನ್ನು ಸವಿಯುವುದು ವಾಡಿಕೆಯಾಗಿದೆ.
ಕವಿ ಮನೆಯಲ್ಲಿ ಒಂದಿಷ್ಟು ಕಾಲ ಕಳೆಯುವುದು ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಕುವೆಂಪು ಅವರ ಸಮಾಧಿ ಬಳಿಯೇ ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸಿ ರೀಲ್ಸ್ ಮಾಡುತ್ತಿರುವುದು ಈಗಿನ ಯುವ ಪೀಳಿಗೆಯ ಮನಸ್ಥಿತಿಯನ್ನು ಬಿಂಬಿಸುವಂತಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸೌಂದರ್ಯದ ಪ್ರದೇಶಗಳಲ್ಲಿ ಭೇಟಿ ನೀಡಿ ರೀಲ್ಸ್ ಮಾಡಿ ಹರಿಬಿಡುವುದು ಒಂದು ಟ್ರೆಂಡ್ ಆದರೂ ಸಹ ಕವಿ ಮನೆಯಲ್ಲಿ ಕವಿಯ ಸಮಾಧಿಯ ಬಳಿಯೇ ಕುಣಿದಾಡುವುದು ಸಿನಿಮಾ ಹಾಡಿಗೆ ನೃತ್ಯ ಮಾಡುವುದು ಅದನ್ನು ವಿಡಿಯೋ ಮಾಡಿಕೊಳ್ಳೋದು ಎಷ್ಟು ಸಮಂಜಸ
ಎಂಬುದು ಪ್ರಶ್ನೆಗೆ ನಿಲುಕದ ಉತ್ತರವಾಗಿದೆ. ತಂದೆಯ ಸಮಾಧಿಯ ಬಳಿ ಮಕ್ಕಳು ಕುಣಿಯುತ್ತಾರೆ ಎಂಬ ಪ್ರಶ್ನೆಗೆ ಈಗಿನ ಪೀಳಿಗೆ ಉತ್ತರ ನೀಡಬೇಕಿದೆ.ಎಲ್ಲೆಡೆ ಸೆಕ್ಯೂರಿಟಿ ಗಾರ್ಡ್ ಗಳು ಇದ್ದರೂ ಸಹ ಸಮಾಧಿಯ ಬಳೆ ಇಲ್ಲದಿರುವುದು ಈ ಅವಾಂತರ ನಡೆದಿರಬಹುದು ಎನ್ನಲಾಗಿದೆ.