ಮೂರುದಿನ ಡಿ.ಮಲ್ಕಪ್ಪ ಅಂಡ್ ಸನ್ಸ್ ನಲ್ಲಿ ಹೊಂಬಾಳೆ ಉತ್ಸವ-Three-day Hombale festival

 SUDDILIVE || SHIVAMOGGA

ಮೂರುದಿನ ಡಿ.ಮಲ್ಕಪ್ಪ ಅಂಡ್ ಸನ್ಸ್ ನಲ್ಲಿ ಹೊಂಬಾಳೆ ಉತ್ಸವ-Three-day Hombale festival at D. Malkappa and Sons

Festival, homabale


ಜೂ.12, ರಿಂದ 14 ರ ವವರೆಗೆ ವೈವಿಧ್ಯಯ ಮಯ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟವನ್ನ ಎಪಿಎಂಸಿ ಯಾರ್ಡ್ ನಲ್ಲಿರುವ ಡಿ ಮಲ್ಕಪ್ಪ ಅಂಡ್ ಸನ್ಸ್ ಸಂಸ್ಥೆ ಆವರಣದಲ್ಲಿ ಬೆಳಿಗ್ಗೆ 8 ರಿಂದ  ರಾತ್ರಿ 9ವರವರೆಗೆ ನಡೆಯಲಿದೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಡಿ.ಮಲ್ಕಪ್ಪ ಅಂಡ್ ಸನ್ಸ್ ನ ಮಾಲೀಕ ಮೋಹನ್, ಹೊಂಬಾಳೆ ಉತ್ಸವ ದ ಅಡಿಯಲ್ಲಿ ನಡೆಯುವ ಉತ್ಸವದಲ್ಲಿ ಮುಖ್ಯವಾಗಿ ಮಾವು, ಹಲಸು, ಬಾಳೆಯ ವೈವಿಧ್ಯಮಯ ತಳಿಗಳು ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇರಲಿವೆ. ರತ್ನಗಿರಿ, ಅಫೋನ್ಸಾ, ಮಲಗೊಬ ಜೊತೆಗೆ ಶಕ್ಕರಗುಟ್ಟಿ, ರಸಪುರಿ, ಮಲ್ಲಿಕಾ, ಕಾಲಪ್ಪಾಡು, ಬೈಗನ್‌ಲ್ಲಿ, ಇಮಾಮ್‌ ಪಸಂದ್, ದಶೇರಿ ಮುಂತಾದ ವಿಶೇಷ, ರುಚಿಕರವಾದ ಹದಿನೈದಕ್ಕೂ ಹೆಚ್ಚು ತಳಿಯ ಮಾವಿನ ಹಣ್ಣುಗಳು ಪ್ರದರ್ಶನ ಹಾಗೂ ಮಾರಾಟ ಇರಲಿದೆ.

ಒಂದು ಲಕ್ಷ ರೂಪಾಯಿಗೆ ಒಂದು ಕೆಜಿ ಬೆಲೆ ಇರುವ ಜಪಾನಿನ ಮೀಯಾ ಝಾಕಿ ತಳಿಯ ಮಾವಿನ ಹಣ್ಣು ಈ ಪ್ರದರ್ಶನದಲ್ಲಿ ಇರಲಿದ್ದು ಮಾರಾಟಕ್ಕಿರುವುದಿಲ್ಲ.  ಇದೂ ಕೂಡಾ ಶಿವಮೊಗ್ಗದಲ್ಲಿ ಪ್ರದರ್ಶನಕ್ಕೆ ಇಡುತ್ತಿರುವುದು ಮೊದಲ ಬಾರಿಗೆ ಎಂದರು. 

ಮಾವಿನ ಜೊತೆ ಚಂದ್ರ ಹಲಸು, ಚಂದ್ರಬಕ್ಕೆ, ಬಾಳೆಹಣ್ಣುಗಳಲ್ಲಿ ರಸಬಾಳೆ, ಪಚ್ಚಬಾಳೆ, ನೇಂದ್ರಬಾಳೆ, ಪುಟ್ಟಬಾಳೆ, ಕರಿಬಾಳೆ, ಚಂದ್ರಬಾಳೆ ಮುಂತಾದ ತಳಿಗಳು ಇರಲಿವೆ.

ಈ ಪ್ರದರ್ಶನದಲ್ಲಿ ದಾಳಿಂಬೆ, ಸೇಬು, ನೇರಳೆ, ಸೀತಾಫಲ, ರಾಮಫಲ, ಮೊಸಂಬಿ, ಪೊಪ್ಪಾಯ, ಕಲ್ಲಂಗಡಿ, ಕಿತ್ತಲೆ, ದ್ರಾಕ್ಷಿಯಂತ ದೇಶಿ ಹಣ್ಣುಗಳ ಜೊತೆಗೆ ವಿದೇಶಿ ಹಣ್ಣಗಳು ಲಭ್ಯವಿವೆ. ಇವುಗಳಲ್ಲಿ ರಾಂಬುಟಾನ್, ಬಟರ್‌ಪ್ರೊಟ್, ಬ್ಲೂಬೇರಿ, ಲೀಚಿ, ಸಿಹಿ ಹುಣಸೆ, ಗೋಲ್ಡನ್ ಕಿವಿ, ಹಿಮಾಚಲ್ ಚರಿ, ಪೀಚ್, ಪ್ಯೂಸಿ ಅಪಲ್, ಚೈನಾ ಪ್ಲಮ್, ಸೌತ್ ಆಫ್ರೀಕ್ ಮ್ಯಾಡ್ರಿನ್, ರೆಡ್ ಪಿಯರ್ಸ್, ಗ್ರೀನ್ ಪಿಯರ್ಸ್, ಡ್ರಾಗನ್ ಫೂಟ್ಸ್ ಇನ್ನೂ ಮುಂತಾದ ಹಣ್ಣುಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗುವುದ ಎಂದು ತಿಳಿಸಿದರು.

ಎರಡು ಸಾವಿರ ರೂಪಾಯಿಗೆ ಒಂದು ಕೆಜಿ ಸಿಗುವ ಬ್ಲೂಬೆರ್ರಿ ಈ ಪ್ರದರ್ಶನದ ಇನ್ನೊಂದು ವಿಶೇಷ ಎಂದು ತಿಳಿಸಿದರು. 

ಡಿಎಂ ಶಂಕರಪ್ಪ, ಹರ್ಷ ಕಾಮತ್, ಹೆಚ್ ಸಿ ಗಣೇಶ್, ಬಿಜೆಪಿ ಯುವ ಮೋರ್ಚಾದ ಅನಿಲ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. 

Three-day Hombale festival

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close