ಪ್ರೇಮ ವಿಫಲತೆಯಲ್ಲಿ ಯುವತಿ ಆತ್ಮಹತ್ಯೆ-Young woman commits suicide over failed love

 SUDDILIVE || SHIVAMOGGA

ಪ್ರೇಮ ವಿಫಲತೆಯಲ್ಲಿ ಯುವತಿ ಆತ್ಮಹತ್ಯೆ-Young woman commits suicide over failed love

Love, failed

ಆಕೆ ಸಾವಿರಾರು ಕನಸುಗಳನ್ನ ಕಟ್ಟಿಕೊಂಡವಳು. ನೂರಾರು ಜನರ ಆರೋಗ್ಯ ಕಾಪಾಬೇಕು ಎಂದು ಡಾಕ್ಟರ್ ಸೇವೆಯನ್ನು ಮಾಡಬೇಕೆಂದು ಹಠ ಹೊತ್ತವಳು. ಜೀವ ಉಳಿಸಬೇಕಾದಂತಹ ಭಾವಿ ವೈದ್ಯೆ ಬಾಳಲ್ಲಿ ಅದೇನಾಯ್ತೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ಈ ಲೋಕವನ್ನೇ ತ್ಯಜಿಸಿದ್ದಾಳೆ. ಆಕೆಯ ಬಾಳಲ್ಲಿ ಆದಂತಹ ದುರಂತವಾದರೂ ಏನು ? ಭಾವಿ ವೈದ್ಯೆಯ ನಿಗೂಢ ಸಾವು ಪ್ರಕರಣ ಈಗ ಕುಟುಂಬಸ್ಥರಲ್ಲಿ ಕಣ್ಣೀರು ತಂದಿದೆ.

ವಿಧಿ ಆಟವೇ ಹಾಗೆ ಕನಸುಗಳನ್ನ ಕೊಲೆ ಮಾಡುತ್ತದೆ. ಅದೆಷ್ಟೋ ಜೀವಗಳನ್ನ ಅತೃಪ್ತಿಗೊಳಿಸುತ್ತದೆ‌.. ಯಾರನ್ನು ಕೂಡ ಆ ವಿಧಿ ಬಿಡಲಾರದು... ವಿಧಿಗೆ ಬಡವ - ಶ್ರೀಮಂತ, ಸುಂದರ - ಕುರೂಪಿ ಎನ್ನುವ ಭೇದ ಭಾವಗಳಿಲ್ಲ. ಅದರ ಪಾಶಕ್ಕೆ ಸಿಲುಕಿದರೆ ಮುಗಿಯಿತಿ, ಅದೆಷ್ಟೇ ಒಳ್ಳೆತನವಿದ್ದರೂ ಕೂಡ ತನ್ನತ್ತ ಕರೆದುಕೊಂಡು ಬಿಡುತ್ತದೆ. ಅದಕ್ಕೆ ಉದಾಹರಣೆ ಎಂದರೆ ಶಿವಮೊಗ್ಗದಲ್ಲಿ ನಿನ್ನೆ ನಡೆದ ಆತ್ಮಹತ್ಯೆ ಪ್ರಕರಣ. ಕೇವಲ ಒಂದೆರಡು ತಿಂಗಳಲ್ಲಿ ಆಕೆ ಸ್ಪೆತೊಸ್ಕೊಪ್ ಹಿಡಿದು ಜನರ ಸೇವೆಗೆ ನಿಲ್ಲಬೇಕಿತ್ತು... ಆದರೆ ವಿಧಿಯ ಆಟವೇ ಬೇರೆ ಆಗಿತ್ತು..... ಹೌದು ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಫೈನಲ್ ಇಯರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ವಿಷ್ಣುಪ್ರಿಯ ನೇಣಿಗೆ ಶರಣಾಗಿದ್ದಾಳೆ. 22 ವರ್ಷದ ಈಕೆಗೆ ಅದೇನಾಯ್ತೋ ಗೊತ್ತಿಲ್ಲ ತಾನೇ ವಾಸವಾಗಿದ್ದ ಹಾಸ್ಟೆಲ್ನಲ್ಲೇ ನೇಣಿಗೆ ಶರಣಾಗಿದ್ದಾಳೆ. ವೈದ್ಯಕೀಯ ಶಿಕ್ಷಣ ಮುಗಿಸಿ ಇಂಟರ್ನ್ಶಿಪ್ ಹಂತದಲ್ಲಿದ್ದ ಆಕೆ ನೇಣು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಆಕೆಯ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇಂಟರ್ನ್ಶಿಪ್ ಮುಗಿಯಲು ಕೇವಲ ಹತ್ತು ದಿನ ಬಾಕಿ ಇರುವಾಗಲೇ ಇಹಲೋಕ ತ್ಯೆಜಿಸಿದ್ದಾಳೆ...

ಬೆಂಗಳೂರು ಮೂಲದ ವಿಷ್ಣುಪ್ರಿಯ ಓದಿದ್ದೆಲ್ಲದು ಕೂಡ ಮನೆಯಿಂದ ಹೊರಗಡೆ. 7ನೇ ತರಗತಿಯಿಂದಲೂ ಕೂಡ ಹಾಸ್ಟೆಲ್ನಲ್ಲೇ ಓದಿದಾಕೆ. ಒಳ್ಳೆ ಅಂಕಗಳನ್ನ ಪಡೆದು ಉನ್ನತ ವ್ಯಾಸಂಗ ಮಾಡಲು ಶಿವಮೊಗ್ಗಕ್ಕೆ ಆಗಮಿಸಿದ್ಲು. ಇಲ್ಲಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಚೆನ್ನಾಗಿ ಓದುತ್ತಿದ್ದಳು. ಆದರೆ ಯಾಕೆ ಈ ರೀತಿ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂಬುದು ಎಲ್ಲರಿಗೂ ಯಕ್ಷಪ್ರಶ್ನೆಯಾಗಿದೆ. ಸ್ನೇಹಿತರನ್ನ ಕೇಳಿದರೆ ಆಕೆ ಆ ರೀತಿ ಮಾಡಿಕೊಳ್ಳುವ ವ್ಯಕ್ತಿತ್ವದವಳು ಅಲ್ಲ ಎಂದು ಹೇಳಿದರೆ, ಇನ್ನು ಮದುವೆಯ ವಿಚಾರ ಆಕೆಯನ್ನು ಕುಗ್ಗಿಸಿ ಬಿಟ್ಟಿದೆ ಎಂದು ಮೂಲಗಳು ಹೇಳುತ್ತವೆ. ಇದರ ಜೊತೆ ಮೂಲಗಳು ಹೇಳುವ ಪ್ರಕಾರ ಆಕೆಗೆ ಇಷ್ಟವಾದ ವ್ಯಕ್ತಿಯನ್ನ ಕುಟುಂಬಸ್ಥರು ಒಪ್ಪದೇ ಇದ್ದಿದ್ದಕ್ಕೆ ಈ ರೀತಿ ಮಾಡಿಕೊಂಡಿರಬಹುದು ಎಂಬುದರ ಬಗ್ಗೆ ಅನುಮಾನ ಈಗ ವ್ಯಕ್ತವಾಗುತ್ತಿದ್ದಾರೆ

ಒಟ್ಟಿನಲ್ಲಿ ಬಾಳಿ ಬದುಕಿ ನೂರಾರು ಜನರ ಆರೋಗ್ಯ ಕಾಪಾಡಬೇಕಿದ್ದ ವಿಷ್ಣುಪ್ರಿಯ ಈಗ ಈ ಲೋಕವನ್ನ ತೊರೆದು ದೂರ ಹೋಗಿದ್ದಾಳೆ. ಆದರೆ ಆಕೆಯ ಸಾವು ಸಹಜವಾಗಿ ಅನುಮಾನ ಕೂಡ ಮೂಡಿಸುತ್ತದೆ. ಅವಳ ಸಾವಿಗೆ ಕಾರಣ ತಿಳಿಯಬೇಕಾಗಿದೆ, ಹಾಗಾಗಿ ತನಿಖೆ ಯಾವ ರೀತಿ ನಡೆಯುತ್ತದೆ ಎಂಬುದನ್ನ ಕಾದು ನೋಡಬೇಕು.....

Young woman commits suicide over failed love

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close