ಸಾಗರ ಮತ್ತು ಹೊಸನಗರದಾದ್ಯಂತ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ- holiday for school and collages in hosanagara

 SUDDILIVE || HOSANAGARA ||THT

ಹೊನ್ನೇತಾಳು ಶಾಲೆಗೆ ಮತ್ತು ಹೊಸನಗರದಾದ್ಯಂತ ಶಾಲಾ ಕಾಲೇಜುಗಳಿಗೆ ಇಂದು ರಜೆ-holiday for school and collages in hosanagara

Holiday, hosanagara

ಭಾರಿ ಮಳೆ  ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲೂಕಿನಾದ್ಯಂತ ಜೂ.16 ರ ಸೋಮವಾರ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಆಯಾ ತಾಲೂಕಿನ ತಹಸೀಲ್ದಾರ್ ರಜೆ ಆದೇಶಿಸಿದ್ದಾರೆ.

ಎರಡೂ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ರಜೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಅದರಂತೆ ಆಗುಂಬೆ ಭಾಗದಲ್ಲಿ ಭಾರಿ ಮಳೆಗೆ ಹೊನ್ನೇತಾಳು ಸರ್ಕಾರಿ ಶಾಲೆಗೆ ರಜೆ ಘೋಷಿಸಲಾಗಿದೆ ಎಂದು ಎಸ್ ಡಿ ಎಂಸಿ  ಅಧ್ಯಕ್ಷರು ರಜೆ ಘೋಷಿಸಿದ್ದಾರೆ. ಇಂದಿನಿಂದ ಜಿಲ್ಲೆಯಲ್ಲಿ ಮುಂದಿನ 6 ದಿನಗಳವರೆಗೆ ಮಳೆಯ ಮುನ್ಸೂಚನೆಯನ್ನ ಹವಮಾನ ಇಲಾಖೆ ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಿಸಿತ್ತು. 

ಸಧ್ಯಕ್ಕೆ ಸಾಗರ, ಹೊಸನಗರ ತಾಲೂಕಿನಾದ್ಯಂತ ಮತ್ತು ತೀರ್ಥಹಳ್ಳಿಯ ಸರ್ಕಾರಿ ಶಾಲೆಯೊಂದಕ್ಕೆ ರಜೆ ಘೋಷಿಸಿರುವ ಮಾಹಿತಿ ಲಭ್ಯವಾಗಿದೆ. 

holiday for school and collages in hosanagara

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close