MrJazsohanisharma
ad

ರೈತರ ಬಂಧನವನ್ನ ಖಂಡಿಸಿ ರೈತರ ಪ್ರತಿಭಟನೆ- protest against arrest of farmers

 SUDDILIVE || SHIVAMOGGA

ರೈತರ ಬಂಧನವನ್ನ ಖಂಡಿಸಿ ರೈತರ ಪ್ರತಿಭಟನೆ- protest against arrest of farmers

Protest, farmer


ರೈತರು, ಹೋರಾಟಗಾರರನ್ನು ಅಮಾನುಷವಾಗಿ ಬಂಧಿಸಿರುವುದನ್ನು ಖಂಡಿಸಿ ಇಂದು (ಜೂ.26) ರಾಜ್ಯಾದ್ಯಂತ ಪ್ರತಿಭಟನೆಗೆ ಸಂಯುಕ್ತ ಹೋರಾಟ ಕರೆ ಕೊಟ್ಟಿದೆ. ಹಾಗಾಗಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆದಿದೆ. ಅದರಂತೆ ಡಿಸಿ ಕಚೇರಿಯ ಎದುರು ರಾಜ್ಯ ರೈತ ಸಂಘ ಪ್ರತಿಭಟಿಸಿದೆ.

ರೈತರು, ಹೋರಾಟಗಾರರ ಜೊತೆ ಅಮಾನುಷವಾಗಿ ವರ್ತಿಸಿದ ಡಿಎಸ್‌ಪಿ ಸಜಿತ್ ವಿರುದ್ದ ಕ್ರಮ ಕೈಗೊಳ್ಳಬೇಕು. ಅವರನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಆದೇಶಿಸಬೇಕು. ಭೂ ಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿ ಕೈ ಬಿಡಬೇಕು. ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ರೈತರ ಸುಮಾರು 1700 ಎಕರೆಗೂ ಹೆಚ್ಚು ಕೃಷಿ ಭೂಮಿಯ ಸ್ವಾಧೀನಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ (ಕೆಐಎಡಿಬಿ) ಮುಂದಾಗಿದೆ. ಇದನ್ನು ವಿರೋಧಿಸಿ ಕಳೆದ 1,180 ದಿನಗಳಿಂದ ರೈತರು ನಿರಂತರ ಹೋರಾಟ ನಡೆಸುತ್ತಿದ್ದರು.

ಹೋರಾಟದ ನಿರ್ಣಾಯಕ ಹಂತವಾಗಿ ನಿನ್ನೆ (ಜೂನ್ 25, ಬುಧವಾರ) ದೇವನಹಳ್ಳಿ ಪಟ್ಟಣದಲ್ಲಿ ‘ದೇವನಹಳ್ಳಿ ಚಲೋ’ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಶಾಂತಿಯುತವಾಗಿ ಸಮಾವೇಶ ನಡೆದಿತ್ತು. ಆದರೆ, ಸಂಜೆ 5 ಗಂಟೆಯ ಬಳಿಕ ಹೋರಾಟ ಮುಂದುವರಿಸಲು ಅವಕಾಶ ನಿರಾಕರಿಸಿದ ಪೊಲೀಸರು ರೈತರು, ವಿವಿಧ ಸಂಘಟನೆಗಳ ಮುಖಂಡರು, ವೃದ್ದರು, ಮಹಿಳೆಯರನ್ನು ಬಂಧಿಸಿದ್ದರು. ಬಂಧಿಸಿದ ರೈತರನ್ನ ಪೊಲೀಸರು ಬಂಧಿಸಿ ನಂತರ ದೇವನಹಳ್ಳಿ ಹೆಗ್ಗಡೆ ನಗರದಲ್ಲಿ ಬಿಡುಗಡೆ ಮಾಡಲಾಯಿತು.

ಪ್ರತಿಭಟನೆಯಲ್ಲಿ ಹಿಟ್ಟೂರು ರಾಜು, ಜಿಲ್ಲಾ ಸಿಐಟಿಯು ಸಂಚಾಲಕ ನಾರಾಯಣ, ಹನುಮಕ್ಕ, ಡಿಎಸ್ಎಸ್ ಅಂಬೇಡ್ಕರ್ ವಾದದ ಕಾರ್ಯಕರ್ತರು ಭಾಗಿಯಾಗಿದ್ದರು. 

Farmers protest against arrest of farmers

Girl in a jacket

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close