SUDDILIVE || SHIVAMOGGA
ಮಲಗೋಪದಲ್ಲಿ ಮಹಿಳೆಗೆ ಬಹಿಷ್ಕಾರ-woman Boycott
ಮಲಗಪ್ಪದಲ್ಲಿ ಮಹಿಳೆಯೋರ್ವಳಿಗೆ ಬಹಿಷ್ಕಾರ ಹಾಕಿರುವ ಘಟನೆ ತುಂಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗೀತಾಬಾಯಿ ಎಂಬ ಮಹಿಳೆಯನ್ನು ದೇವಸ್ಥಾನಕ್ಕೆ ಪ್ರೇಶಿಸದಂತೆ, ಗ್ರಾಮಕ್ಕೆ ಕಾಲಿಡದಂತೆ ಹಾಗೂ ನೀರು ಹಿಡಿಯಲು ಅವಕಾಶ ನೀಡದಂತೆ ಬಹಿಷ್ಕರಿಸಲಾಗಿರುವ ಘಟನೆ ಎಫ್ ಐ ಆರ್ ಆಗಿದೆ.
ಮಲಗೋಪದಲ್ಲಿ ಬಂಜಾರ ಅವರ ಗೋಧಿ ಹಬ್ಬ ಆಚರಣೆ ವೇಳೆ ಹಾಕಲಾದ ಬ್ಯಾನರ್ ಹರಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವಾಲಾಲ್ ದೇವಸ್ಥಾನದಲ್ಲಿ ದಂಡ ವಿಧಿಸಲಾಗಿತ್ತು. ಇದೇ ವೇಳೆ ಗೀತಾ ಬಾಯಿ ಎಂಬ ಮಹಿಳೆಗೆ ಬಹಿಷ್ಕರಿಸಿರುವುದಾಗಿ ದೂರು ದಾಖಲಾಗಿದೆ. ಹಟ್ಟಿ ನಾಯಕ ಎಂಬಾತನಿಂದ ಬಹಿಷ್ಕಾರ ನಡೆದಿದ್ದು ಆತನ ವಿರುದ್ಧ ದೂರು ದಾಖಲಾಗಿದೆ.
ನಾನ್ಯಾ ನಾಯಕ ಮಲವಗೋಪ್ಪದ ಬೀದಿಯಲ್ಲಿ ತಮಟೆ ಬಾರಿಸಿ ಬಹಿಷ್ಕರಿಸಿದ್ದು, ತಮ್ಮ ಬೆಂಬಲಿಗರ ಮೂಲಕ ಮಹಿಳೆಯನ್ನ ಮನೆಯಿಂದ ದೇವಸ್ಥಾನಕ್ಕೆ ಏಳೆದು ತಂದು 10000 ದಂಡ ವಿಧಿಸಲಾಗಿದೆ. ಗ್ರಾಮದಲ್ಲಿ ನೀರು ಹಿಡಿಯಲು ಅವಕಾಶ ನೀಡದಂತೆ ಮಹಿಳೆ ದೂರಿನಲ್ಲಿ ದೂರಿದ್ದಾರೆ.
ದಂಡ ಕಟ್ಟಲು ಹಣವಿಲ್ಲ ಎಂದಿದ್ದರು ಸಹ ಸಾಲದ ರೂಪದಲ್ಲಿ ಹಣ ಪಡೆದು ಮಹಿಳೆ ದಂಡ ಕಟ್ಟಿದ್ದು ಊರಿನಿಂದ ಬಹಿಷ್ಕರಿಸಲಾಗಿದೆ ಊರಿನಲ್ಲಿ ದೇವಸ್ಥಾನ, ಬೀದಿಗಳಲ್ಲಿ ತಿರುಗುವುದು ಮತ್ತು ನೀರು ಸಹ ಹಿಡಿಯಬಾರದು ಎಂದು ನಾನ್ಯಾನಾಯಕ ದೇವಸ್ಥಾನದ ಮೈಕ್ ನಲ್ಲಿ ಅನೌನ್ಸ್ ಮಾಡಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಹಬ್ಬ ಹರಿದಿನಗಳಲ್ಲಿ ದೇವಸ್ಥಾನದ ಪೂಜೆ ಪುನಸ್ಕಾರಕ್ಕೆ ಬಾರದಂತೆ ನಾನ್ಯಾನಾಯ್ಕ ಆದೇಶಿಸಿದ್ದು, ಕ್ರೂರವಾಗಿ ಶಿಕ್ಷೆ ನೀಡುವಂತೆ ಮಹಿಳೆ ದೂರಿನಲ್ಲಿ ಕೋರಿಕೊಂಡಿದ್ದಾರೆ.
woman Boycott