ಎಲ್ಲೋ ಬೋರ್ಡ್ ಬಾಡಿಗೆ ಕಾರನ್ನ ಎಗುರಿಸಿದ ಮಹಿಳೆ-A woman who theft rental car

 SUDDILIVE || SHIVAMOGGA

ಎಲ್ಲೋ ಬೋರ್ಡ್ ಬಾಡಿಗೆ ಕಾರನ್ನ ಎಗುರಿಸಿದ ಮಹಿಳೆ-A woman who theft  rental car 

Woman, theft

ಬಾಡಿಗೆ ಪಿಕಪ್ ಮಾಡಲು ಬಂದ ವಾಹನವನ್ನೇ ಮಹಿಳೆಯೋರ್ವಳು ಕಳುವು ಮಾಡಿರುವ ಘಟನೆ ವರದಿಯಾಗಿದೆ

ಶೃಂಗೇರಿಯಿಂದ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಮಹಿಳೆಯನ್ನು ಪಿಕ್ ಅಪ್ ಮಾಡಲು ಬಂದಿದ್ದ ವಾಹನ ಚಾಲಕನನ್ನೇ ರೂಮಿನಲ್ಲಿ ಕೂಡ ಹಾಕಿ ಆತನ ಬಾಡಿಗೆ ಓಡಿಸುವ ಶಿಫ್ಟ್ ಡಿಸೈರ್ ಕಾರನ್ನೇ ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ಮಾಲೀಕ ತಾಹಿರ್ ಅಹಮದ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶೃಂಗೇರಿಯಿಂದ ರಮೇಶ್ ಗೌಡ ಎನ್ನುವರು ಶಿಫ್ಟ್ ಡಿಸೈರ್ ಕಾರನ್ನು ಮೊಬೈಲ್ ಮೂಲಕ ಬುಕ್ ಮಾಡಿದ್ದ ಮಹಿಳೆಯನ್ನು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಹತ್ತಿಸಿಕೊಂಡು ಸಾಗರ ರಸ್ತೆಯಲ್ಲಿರುವ ಬ್ಲೂ ಮೂನ್ ಲಾಡ್ಜ್ ಗೆ ವಿಶ್ರಾಂತಿಗಾಗಿ ಕರೆದುಕೊಂಡು ಬಂದಿದ್ದರು ಈ ವೇಳೆ ಮಹಿಳೆಯು ವಾಶ್ರೂಮ್ ಬಳಸುವಂತೆ ಹಾಗೂ ಕೊಂಚ ವಿಶ್ರಮಿಸುವಂತೆಯೂ ಸಹ ಚಾಲಕನಿಗೆ ಹೇಳಿದಳು ಚಾಲಕ ವಾಶ್ ರೂಮ್ ಗೆ ಹೋಗುತ್ತಿದ್ದಂತೆಯೇ ಕೊಠಡಿಯ ಬಾಗಿಲನ್ನು ಎಳೆದುಕೊಂಡು ಕಾರ್ ತೆಗೆದುಕೊಂಡು ಮಹಿಳೆ ಪರಾರಿಯಾಗಿದ್ದಾಳೆ ಶೃಂಗೇರಿಯಿಂದ ಮಾಲೀಕ ತಾಹಿರ್ ಅಹಮದ್ ಶಿವಮೊಗ್ಗ ಬಂದಿದ್ದು ಹತ್ತಿರದ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ ಲಾಡ್ಜ್ ಇನ್ ತಪಾಸಣೆಯನ್ನು ಮಾಡಿದ್ದಾರೆ.

ಈ ಕುರಿತು ಸುದ್ದಿಲೈವ್ ಗೆ ಮಾಹಿತಿ ನೀಡಿದ ತಾಹೀರ್ ಅಹಮದ್ ನಮ್ಮ ಕಾರಿನ ಚಾಲಕ ನನ್ನ ಬಳಿ ಕುಟುಂಬದೊಂದಿಗೆ ಪ್ರವಾಸ ಹೋಗುತ್ತಿರುವುದಾಗಿ ಕಾರು ಪಡೆದುಕೊಂಡು ಹೋಗಿದ್ದಾರೆ. ಈಗ ಮಹಿಳೆ ಎಲ್ಲೋ ಬೋರ್ಡ್ ಕಾರನ್ನ ಕಳುವು ಮಾಡಿಕೊಂಡು ಹೋಗಿರುವುದಾಗಿ ಹೇಳಿದ್ದಾರೆ. ತುಂಗ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಆಧಾರ್ ಕಾರ್ಡ್ ಪ್ರಕಾರ ಮಹಿಳೆ ಬೆಳಗಾವಿ ಜಿಲ್ಲೆಯ ವಸುಂಧರ ಎಂದು ತಿಳಿದು ಬರುತ್ತಿದೆ ಎಂದು ವಿವರಿಸಿದ್ದಾರೆ. 

woman who theft  rental car 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close