ad

ಕುಡಿದ ಮತ್ತಿನಲ್ಲಿ ನಡೆದ ಕೊಲೆ? A murder committed while intoxicated?

 SUDDILIVE || SHIVAMOGGA

ಕುಡಿದ ಮತ್ತಿನಲ್ಲಿ ನಡೆದ ಕೊಲೆ? A murder committed while intoxicated?

Murder, intoxication

ಶಿವಮೊಗ್ಗದಲ್ಲಿ ಸ್ನೇಹಿತರ ಎಣ್ಣೆ ಪಾರ್ಟಿ ವೇಳೆ ಕಿರಿಕ್- ಕೊಲೆಯಲ್ಲಿ ಅಂತ್ಯವಾಗಿದೆ. ಶಿವಮೊಗ್ಗದ ಬೊಮ್ಮನಕಟ್ಟೆ ಇ-ಬ್ಲಾಕ್ ನಲ್ಲಿ ನಡೆದ ಘಟನೆ ನಡೆದಿದೆ. 

ಪವನ್ (28) ಎಂಬ ಯುವಕನನ್ನ ಬರ್ಬರವಾಗಿ ಕೊಲೆಯಾಗಿದೆ. ಶಿವಕುಮಾರ್ ಎಂಬುವರ ಮನೆಯಲ್ಲೇ ಈ ಘಟನೆ ನಡೆದಿದೆ. ಬೊಮ್ಮನಕಟ್ಟೆಯ ಇ-ಬ್ಲಾಕ್ ನಲ್ಲಿರುವ ಶಿವಕುಮಾರ್ ಮನೆಗೆ ಪವನ್ ತೆರಳಿದ್ದನು. 

ಕುಡಿದ ನಂತರದಲ್ಲಿ ಸ್ನೇಹಿತರ ನಡುವೆ ಗಲಾಟೆ- ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶಿವಕುಮಾರ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಘಟನಾ ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಶಿವಮೊಗ್ಗ ಸಬ್ ಡಿವಿಜನ್-2 ಡಿವೈಎಸ್ಪಿ ಸಂಜೀವ್ ಕುಮಾರ್ ಭೇಟಿ ನೀಡಿದ್ದಾರೆ. ವಿನೋಬನಗರ ಇನ್ಸ್ಪೆಕ್ಟರ್ ಡಿ.ಕೆ.ಸಂತೋಷ್ ಕುಮಾರ್ ರಿಂದ ಎಸ್ಪಿ ಮಾಹಿತಿ ಪಡೆದಿದ್ದಾರೆ. 

ಶಿವಮೊಗ್ಗದ ಬೊಮ್ಮನಕಟ್ಟೆ ಯಲ್ಲಿ ಪವನ್ ಮರ್ಡರ್ ಪ್ರಕರಣ.ಸ್ಥಳಕ್ಕೆ ಬೆರಳಚ್ಚು ಮತ್ತು ಫಾರೆನ್ಸಿಕ್ ತಜ್ಞರ ಭೇಟಿ ನೀಡಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಮಾಹಿತಿಯನ್ನ ತಂಡ ಕಲೆಹಾಕಿದೆ. ಇವಿಷ್ಟು ಪ್ರಾಥಮಿಕ ಮಾಹಿತಿಗಳಾಗಿವೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close