ad

ಬೋನಿಗೆ ಬಿದ್ದ ಕರಡಿ-A bear trapped in cage

 SUDDILIVE || SHIVAMOGGA

ಬೋನಿಗೆ ಬಿದ್ದ ಕರಡಿ-A bear trapped in cage

Cage, bear

ಹೊಳಲೂರಿನಲ್ಲಿ ಜನರಿಗೆ ಹಾವಳಿಯಿಟ್ಟಿದ್ದ ಐದಾರು ಕರಡಿಗಳಲ್ಲಿ ಒಂದು ಕರಡಿ ಇಂದು ಬೋನಿಗೆ ಬಿದ್ದಿದೆ. ಹೊಲ, ತೋಟಗಳಲ್ಲಿ ಕೆಲಸ ಮಾಡುವಾಗ ಜನರಿಗೆ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಕರಡಿ ಕೊನೆಗೂ ಬೋನಿಗೆ ಬಿದ್ದಿದೆ. 

ಶಿವಮೊಗ್ಗದ ಗ್ರಾಮಾಂತರ ಭಾಗವಾದ ಹೊಳಲೂರಿನಲ್ಲಿ ಕಳೆದ ಒಂದು ವಾರದಿಂದ ಬೋನಿಟ್ಟಿದ್ದರು. ನಿನ್ನೆ ರಾತ್ರಿ ಕರಡಿ ಬೋನಿಗೆ ಬಿದ್ದಿದೆ. ಬೋನಿಗೆ ಬಿದ್ದ ಕರಡಿಯನ್ನ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಕರಡಿಯನ್ನ ಸಫಾರಿಗೆ ಕರೆದೊಯ್ಯುವ ಸಾಧ್ಯತೆಯಿದೆ. 

ಹೊಳಲೂರು ಹೋಬಳಿ ಸುತ್ತಮುತ್ತ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ, ಬೋನಿಗೆ ಬಿದ್ದ ಕರಡಿಯನ್ನು ಲಯನ್ ಸಫಾರಿ ಗೆ ತೆಗೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಿ ಸಂರಕ್ಷಣೆ ಮಾಡಲಾಗುವುದು. 




ಅರಣ್ಯ ಅಧಿಕಾರಿಗಳಾದ ಶಂಕರ ವಲಯದ ವಲಯ ಅರಣ್ಯ ಅಧಿಕಾರಿ ವಿಜಯಕುಮಾರ್ ಜೇ, Dyrfo ವಸಂತ್ ಕುಮಾರ್, ಬೀಟ್ ಪಾರೆಸ್ಟರ್ ಕೊಟ್ರೇಶ್ ದಾನಮ್ಮನವರ್  ಮಾನವ ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ಸ್ಥಳೀಯರು ಸಹಕರಿಸಬೇಕಾಗಿ ಕೋರಿದರು.

A bear trapped in cage

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close