SUDDILIVE || SAMPEKATTE
ಮದ್ಯದ ವಿಚಾರದಲ್ಲಿ ಗಲಾಟೆ ಟಯರ್ ಬಿಚ್ಚುವ ರಾಡಿನಿಂದ ಯುವಕನ ಮೇಲೆ ಹಲ್ಲೆ-A young man was attacked with a tire iron during a dispute over alcohol.
ಮದ್ಯದ ವಿಚಾರವಾಗಿ ನಡುರಸ್ತೆಯಲ್ಲೇ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೊಸನಗರ ತಾಲೂಕು ನಿಟ್ಟೂರು ಸಮೀಪದ ಸಂಪೆಕಟ್ಟೆ ಸರ್ಕಲ್‌ನಲ್ಲಿ ಘಟನೆ ನಡೆದಿದೆ. ಲಕ್ಷ್ಮೀಶ ಎಂಬಾತ ಗಾಯಗೊಂಡಿದ್ದು, ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತುಂಬೆಗದ್ದೆ ಗ್ರಾಮದ ಲಕ್ಷ್ಮೀಶ ರಾತ್ರಿ 10 ಗಂಟೆ ಹೊತ್ತಿಗೆ ಸಂಪೆಕಟ್ಟೆಯ ಅಂಗಡಿಗೆ ತೆರಳಿದ್ದಾನೆ. ಈ ಸಂದರ್ಭ ಜೀಪಿನಲ್ಲಿ ಬಂದ ಸುಬ್ರಹ್ಮಣ್ಯ, ಅವಿನಾಶ, ರಾಘವೇಂದ್ರ ಎಂಬುವವರು ಮದ್ಯ ತೆಗೆದುಕೊಂಡು ಬಾ ಎಂದು ಲಕ್ಷ್ಮೀಶನಿಗೆ ಹೇಳಿದ್ದಾರೆ. ಲಕ್ಷ್ಮೀಶ ನಾನೇಕೆ ತೆಗೆದುಕೊಂಡು ಬರಬೇಕು ಎಂದು ಕೇಳಿದ್ದಾನೆ. ನಿರಾಕರಿಸಿದ ಯುವಕನ ಮೇಲೆ ಮನಸೋಯಿಚ್ಛೆ ಹಲ್ಲೆ ನಡೆಸಿದ್ದಾರೆ.
ಜೀಪ್‌ನ ಟಯರ್ ಬಿಚ್ಚುವ ರಾಡ್‌ನಿಂದ ಲಕ್ಷ್ಮೀಶನ ತಲೆಗೆ ಹೊಡೆಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗಾಯಗೊಂಡಿದ್ದ ಲಕ್ಷ್ಮೀಶನನ್ನು ನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
A young man was attacked with a tire iron during a dispute over alcohol.