ad

ವಿಗ್ರಹಕ್ಕೆ ಹಾನಿ ಉಂಟು ಮಾಡಿದ ಆರೋಪಿಯ ಬಂಧನ-Accused arrested for damaging idol

 SUDDILIVE || ANAVATTI

ವಿಗ್ರಹಕ್ಕೆ ಹಾನಿ ಉಂಟು ಮಾಡಿದ ಆರೋಪಿಯ ಬಂಧನ-Accused arrested for damaging idol



ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕೂಬಟೂರು ಗ್ರಾಮದಲ್ಲಿರುವ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿ ದೇವಸ್ಥಾನದ ವಿಗ್ರಹವನ್ನ ಹಾಳು ಮಾಡಿದ ಪ್ರಕರಣವನ್ನ ಆನವಟ್ಟಿ ಪೊಲೀಸರು ಬೇಧಿಸಿ ಆರೋಪಿಯನ್ನ ಘಟನೆ ಬಡೆದ 4 ಗಂಟೆಯ ಒಳಗೆ ಬಂಧಿಸಿದ್ದಾರೆ. 

ನರಸಿಂಹಸ್ವಾಮಿ ಮೂರ್ತಿಯನ್ನು ನಿನ್ನೆ ಮಧ್ಯಾಹ್ನ ಸುಮಾರು 4:00 ಅವಧಿಯಲ್ಲಿ ವಿರೂಪಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾದ ಬೆನ್ನಲ್ಲೇ ಎಸ್ಪಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಡಿವೈಎಸ್ಪಿ ಶಿಕಾರಿಪುರ ಮತ್ತು ಪಿಎಸ್ಐ ಚಂದನ್ ಆನವಟ್ಟಿ ಇವರು ಸ್ಥಳ ಪರಿಶೀಲನೆ ನಡೆಸಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗೋಂದಿ ಗ್ರಾಮದ ನಿವಾಸಿ  ಕೋಟೇಶ್ವರ ಎಂಬ 32 ವರ್ಷದ ಯುವಕನನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಯ ವಿಕೃತ ಮನಸ್ಸಿನಿಂದ ಈ ಪ್ರಕರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ಏನೇ ಆಗಲಿ ಘಟನೆಯನ್ನ ಬೇರೆಡೆ ತೆಗೆದುಕೊಂಡು ಹೋಗುವ ಬಗ್ಗೆ ಕೆಲ ಕಾಣದ ಕೈಗಳು ಹವಣಿಸುತ್ತಿದ್ದವು. ಇದನ್ನ ತಕ್ಷಣ ಗುರುತಿಸಿದ ಶಿವಮೊಗ್ಗ ಪೊಲೀಸರು ಪ್ರಕರಣವನ್ನ ಸೂಕ್ಷ್ಮವಾಗಿ ನಿಭಾಯಿಸಿ ಆರೋಪಿಯನ್ನ‌ಬಂಧಿಸಿದ್ದಾರೆ. 


Accused arrested for damaging idol

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close