SUDDILIVE || SHIVAMOGGA
ಶ್ರಾವಣದ ನಾಲ್ಕು ಶುಕ್ರವಾರದಂದು ಕೋಟೆ ಮಾರಿಕಾಂಬ ದೇವಿಗೆ ವಿಶೇಷ ಪೂಜೆ-Special Puja on the four Fridays of shravana
![]() |
ಆಷಾಢ ಕಳೆದು ಶ್ರಾವಣ ಆಗಮಿಸುತ್ತಿದೆ. ಶ್ರಾವಣದ ಬೆನ್ನಲ್ಲೇ ದೇವಸ್ಥಾನದ ದೇವರಿಗೆ ವಿಶೇಷ ಪೂಜೆ, ಅಲಂಕಾರ ಮೊದಲಾದ ಪೂಜಾ ಕೈಂಕರ್ಯಗಳು ಮುಂದುವರೆಯಲಿದೆ.
ಆಶಾಡ ಮುಗದು ಶ್ರಾವಣದ ಬೆನ್ನಲ್ಲೇ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯು ನಗರ ದೇವತೆ ಕೋಟೆ ಶ್ರೀ ಮಾರಿಕಾಂಬ ದೇವಿಗೆ ಶ್ರಾವಣ ವೈಭವ ಹೆಸರಿನಲ್ಲಿ ವಿಶೇಷ ಅಲಂಕಾರ ನಡೆಯಲಿದೆ ಶ್ರಾವಣದ ಪ್ರತಿ ಶುಕ್ರವಾರ ದೇವಿಗೆ ವಿಶೇಷ ಅಲಂಕಾರ ಜರುಗಲಿದೆ.
ಆಷಾಢ ಮೊದಲನೇ ಶುಕ್ರವಾರದಂದು ಅಂದರೆ ಜುಲೈ 25ರಂದು ಅಮ್ಮನವರಿಗೆ ಮೀನಾಕ್ಷಿ ಅಲಂಕಾರ ಆಗಸ್ಟ್ ಒಂದನೇ ತಾರೀಕು ಶುಕ್ರವಾರದಂದು ಶ್ರೀ ಲಲಿತ ಪರಮೇಶ್ವರಿ ಅಲಂಕಾರ ಆಗಸ್ಟ್ 8ರಂದು ವರಮಹಾಲಕ್ಷ್ಮಿ ಅಲಂಕಾರ ಆಗಸ್ಟ್ 15ರಂದು ಚಂಡಿಕಾ ದುರ್ಗಾಪರಮೇಶ್ವರಿ ಅಲಂಕಾರ ನೆರವೇರಿಸಲಾಗುತ್ತಿದೆ.
ಆಗಸ್ಟ್ 22ರಂದು ಅಮ್ಮನವರಿಗೆ ಮೀನಾಕ್ಷಿ ಅಲಂಕಾರದ ಜೊತೆಗೆ ಸರ್ವಭರಣಭೂಷತೆ ಅಲಂಕಾರ ಜರುಗಲಿದೆ ಜೊತೆಗೆ ಬೆಳಿಗ್ಗೆ ಎಂಟು ಮೂವತ್ತಕ್ಕೆ ಸಾಮೂಹಿಕ ಶ್ರೀ ದುರ್ಗಾ ಹೋಮ ಸಹ ಹಮ್ಮಿಕೊಳ್ಳಲಾಗಿದೆ ಶ್ರಾವಣದ ಈ ನಾಲ್ಕು ಶುಕ್ರವಾರದಂದು ಬೆಳಿಗ್ಗೆ 8:30 ರಿಂದ 12 ಗಂಟೆವರೆಗೆ ಉತ್ಸವ ಮೂರ್ತಿಗೆ ಸಾಮೂಹಿಕ ಕ್ಷೀರಭಿಷೇಕ ಜರುಗಲಿದೆ 40 ರು ರಶೀದಿ ಪಡೆದು ಸಂಜೆ 6:00ಗೆ ನಡೆಯುವ ಪ್ರಕರೋತ್ಸವದಲ್ಲಿ ಭಾಗಿಯಾಗಲು ಕೋರಲಾಗಿದೆ
Special Puja on the four Fridays of Shravan