ad

ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳು ಅರೆಸ್ಟ್-Accused arrested in murder case

 SUDDILIVE || SHIVAMOGGA

ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳು ಅರೆಸ್ಟ್-Accused arrested in murder case that took place due to an immoral relationship

Accused, Murder


ಕುಂಸಿಯವ ಎಕೆ ಕಾಲೋನಿಯಲ್ಲಿ ಶನಿವಾರ ರಾತ್ರಿ ಮಚ್ಚು ಬೀಸಿ ಕೊಲೆ ಮಾಡಿದ್ದ ಆರೋಪಿಗಳನ್ನ‌ ಕುಂಸಿ ಪೊಲೀಸರು ಬಂಧಿಸಿದ್ದಾರೆ. ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಪ್ರಕರಣದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಗ ಬಂಧನವಾಗಿದೆ. 

 ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಸಿ ಗ್ರಾಮದಲ್ಲಿ  ಎಕೆ ಕಾಲೋನಿಯಲ್ಲಿ ಶನಿವಾರ ಜೂ.29 ರಂದು ವಾಸು ಯಾನೆ ವಸಂತನ ಕೊಲೆಯಾಗಿತ್ತು.  ಕೊಲೆ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ 1ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಮತ್ತು ಶ್ರೀ ಕಾರಿಯಪ್ಪ ಎ.ಜಿ 2ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ರವರ ಮಾರ್ಗದರ್ಶದಲ್ಲಿ ವಿಶೇಷ ತಂಡವನ್ನು ಶ್ರೀ ಸಂಜೀವ್ ಕುಮಾರ್ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ-ಬಿ ಉಪವಿಭಾಗರವರ ಸಾರಥ್ಯದಲ್ಲಿ ರಚಿಸಿ, ಆ ವಿಶೇಷ ತಂಡದಲ್ಲಿ ಕುಂಸಿ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ದೀಪಕ್ ಎಂ.ಎಸ್ ಪಿಎಸ್‌ಐ ಶ್ರೀ ಶಾಂತರಾಜ್, ಹಾಗೂ ಕುಂಸಿ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಸಿಹೆಚ್‌ಸಿ, 400 ಶ್ರೀ ಪ್ರಕಾಶ್, ಸಿಹೆಚ್‌ಸಿ 235 ರಾಘು ಶೇಟ್ಟಿ. ಜೀಪ್ ಚಾಲಕರಾದ ಎ.ಹೆಚ್.ಸಿ 20 ಶಿವಪ್ಪ, ಸಿಪಿಸಿ 1503 ಶ್ರೀ ಶಶಿಧರ ಸಿಪಿಸಿ 1430 ಮಂಜುನಾಥ, ಸಿಪಿಸಿ 1454 ರಘು.ಬಿ. ಸಿಪಿಸಿ 1417 ನಿತೀನ್, ಮತ್ತು ಸಿಪಿಸಿ 1047 ಆದರ್ಶ, ಸಿಪಿಸಿ 1481 ವಿನಾಯಕ ಬಿ.ಟಿ. ಸಿಪಿಸಿ 1422 ಶಶಿಕುಮಾರ್. ಸಿ.ಪಿ.ಸಿ 1875 ಬುರಾನ್, ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ಸಿಬ್ಬಂಧಿಗಳಾದ ಶ್ರೀ ಗುರುರಾಜ. ಶ್ರೀ ಇಂದ್ರೇಶ್, ಮತ್ತು ಶ್ರೀ ವಿಜಯ್ ಕುಮಾರ್ ದಿನೇಶ್ ರಾವ್ ಮತ್ತು ಜಯ್ ಕುಮಾರ್ ರವರನ್ನ ಒಳಗೊಂಡ ತಂಡ ಭರ್ಜರಿ ಬಲೆ ಬೀಸಿತ್ತು.  

ಈ ಪ್ರಕರಣದ ಜಾಡನ್ನು ಪತ್ತೆ ಹಚ್ಚಿ, ಪ್ರಕರಣದ ಆರೋಪಿಗಳಾದ ಎl. ಹರೀಶ ತಂದೆ ಮಲ್ಲೇಶಪ್ಪ, (23)  ಹಾಗೂ ಎ2 ಆಕಾಶ್ ತಂದೆ ಮಲ್ಲೇಶಪ್ಪ, (21) ಇವರನ್ನು ವಶಕ್ಕೆ ಪಡೆಯಲಾಗಿದೆ.  ಕೃತ್ಯಕ್ಕೆ ಬಳಸಿದ ಆಯುಧವನ್ನು ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಬಗ್ಗೆ ಆರೋಪಿತರ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿರುತ್ತಾರೆ.

Accused arrested in murder case

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close