SUDDILIVE || SHIVAMOGGA
ಯುವತಿಯನ್ನ ಮಾತನಾಡಿಸ ಬೇಡ ಎಂದಿದ್ದಕ್ಕೆ ಯುವತಿಯ ತಾಯಿಯ ಜೊತೆ ಅನುಚಿತ ವರ್ತನೆ-Inappropriate behavior towards a young woman's mother for telling her not to talk to her.
ಹುಡುಗಿ ವಿಷಯಕ್ಕೆ ಬರಬೇಡ ಎಂದು ಹೇಳಿದ ವಿಷಯದಲ್ಲಿ ಯುವತಿಯ ತಾಯಿಗೆ ರಸ್ತೆ ಅಡ್ಡಕಟ್ಟಿ ಅವಹೇಳನ ರೀತಿಯಲ್ಲಿ ನಡೆದುಕೊಂಡ ಯುವಕನ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿದ್ಯಾನಗರದ ಮತ್ತೂರಿಗೆ ಹೋಗುವ ರಸ್ತೆಯಲ್ಲಿರುವ ಮೋಟಾಳ್ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಹೋಗುತ್ತಿದ್ದ ಯುವತಿಯ ತಾಯಿಯನ್ನ ಆಕಾಶ್ ಎಂಬ ಯುವಕ ಸೀರೆ ರವಿಕೆ ಹಿಡಿದು ಎಳೆದು ಅನುಚಿತವಾಗಿ ವರ್ತಿಸಿದ್ದಾನೆ.
ಯುವತಿಯನ್ನಮಾತನಾಡಿಸ ಬೇಡ ಎಂದು ತಂದೆ ಮತ್ತು ತಂದೆಯ ಸಹೋದರರಿಬ್ಬರು ಆಕಾಶ್ ಗೆ ಬುದ್ದಿವಾದ ಹೇಳಿದಕ್ಕೆ ಮನಸ್ಸಿಗೆ ಹಚ್ಚಿಕೊಂಡ ಆತ ಯುವತಿಯ ತಾಯಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Inappropriate behavior towards a young woman's mother