SUDDILIVE || SHIVAMOGGA
ಧಾರ್ಮಿಕ ದತ್ತಿ ತಿದ್ದುಪಡಿಗೆ ಅನುಮೋದನೆ ನೀಡಿ-ಕಲ್ಲೂರು ಮೇಘರಾಜ್-Approval given to religious endowment amendment - Kallur Megharaj
ಧಾರ್ಮಿಕ ದತ್ತಿ ಕಾಯ್ದೆಯನ್ನ ತಿದ್ದುಪಡಿ ಮಾಡಿದ್ದ ಕಾಯ್ದೆಯನ್ನ ಕಳುಹಿಸಿದ ರಾಜ್ಯ ಸರ್ಕಾರ ರಾಜ್ಯಪಾಲರು ಮೊಸರಿನಲ್ಲಿ ಕಲ್ಲು ಹುಡುಕುವಂತೆ ಮಾಡಿದ್ದಾರೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟೀ ಕಲ್ಲೂರು ಮೇಘರಾಜ್ ಆರೋಪಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ರಾಜ್ಯಪಾಲರು ಅನುಮೋದನೆಗೆ ಬರುವ ಕಾಯ್ದೆಯನ್ನ ರಾಜಕೀಯ ಮಾಡಬಾರದು ಧಾರ್ಮಿಕ ದತ್ತಿ ಕಾಯ್ದೆಯಲ್ಲಿ ಎ ದರ್ಜೆಯ ದೇವಸ್ಥಾನಗಳಿಂದ ಬರುವ ಹಣವನ್ನ ಶೇ.10 ರಷ್ಟು ಹಣವನ್ನ ಸಿ ದರ್ಜೆಗೆ ಬಳಕೆ ಮಾಡುವ ತಿದ್ದುಪಡಿಗೆ ಕೂಡಲೇ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಮುಜರಾಯಿ ಇಲಾಖೆಯಲ್ಲಿ 205 ದೇಚಸ್ಥಾನಗಳಿವೆ. ಬಿ ವರ್ಗದ 195 ದೇವಸ್ಥಾನಗಳಿವೆ ಸಿ ದರ್ಜೆಯಲ್ಲಿ 34,217 ದೇವಸ್ಥಾನಗಳಿವೆ. ಇವುಗಳಲ್ಲಿ 1500 ಸಿ ವರ್ಗದ ದೇವಸ್ಥಾನಗಳು ಬೆಂಗಳೂರಿನಲ್ಲಿವೆ. ಉಳಿದವರು ಗ್ರಾಮ ಭಾಗದಲ್ಲಿವೆ. ಈ ದೇವಸ್ಥಾನಗಳ ಸ್ಥಿತಿ ಬೇರೆಯಿದೆ. ಹಾಗಾಗಿ ಸರ್ಕಾರ ಈ ಬಗ್ಗೆ ತಿದ್ದಪಡಿ ತಂದು ಸರ್ಕಾರ ಅನುಕೂಲ ಮಾಡಲು ಮುಂದಾಗಿದೆ.
ರಾಜ್ಯಪಾಲರು ಈ ವಿದಾಯಕವನ್ನ ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ವಿಧಾಯಕ ಅನುಮೋದನೆ ಪಡೆದು ರಾಜ್ಯಪಾರಿಗೆ ಕಳುಹಿಸಿದರೆ ಅದನ್ನ ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ. ಈ ವಿದಾಯಕದಲ್ಲಿ ಅರ್ಚಕರಿಗೆ ನೀಡುವ ತಸ್ತಿಕ್ ನ್ನ ₹6000 ನಿಂದ ₹10 ಸಾವಿರ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ. ಇದಕ್ಕೆ ಅನುಮೋದನೆ ನೀಡಿ ರಾಜ್ಯಪಾಲರು ಅನುಕೂಲ ಮಾಡಿಕೊಡಲು ಒತ್ತಾಯಿಸಿದರು.
Approval given to religious endowment amendment - Kallur Megharaj