ad

ಮೈದಾನ ಜಾಗ ಪಾಲಿಕೆಯದ್ದು-ಈಶ್ವರಪ್ಪ- The ground land belongs to the corporation - Eshwarappa

 SUDDILIVE || SHIVAMOGGA

ಮೈದಾನ ಜಾಗ ಪಾಲಿಕೆಯದ್ದು-ಈಶ್ವರಪ್ಪ-The ground land belongs to the corporation - Eshwarappa

ಜಿಲ್ಲಾಧಿಕಾರಿಗಳ ಕಚೇರಿಯ ಎದುರಿನ ಮೈದಾನದ ಜಾಗವನ್ನ‌ಮುಸ್ಲೀಂರು ನಿರಂತರವಾಗಿ ಕಬಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದ್ದಾರೆ.

1966 ರಿಂದ 1975 ರ ಒಳಗೆ ನಕಲಿ ದಾಖಲೆ ಸೃಷ್ಠಿಸಿ ಆ ಮೈದಾನವನ್ನ ಪಡೆಯುವ ಪ್ರಯತ್ನ ನಡೆಯುತ್ತಿದೆ. ಡಿಸಿಗೆ ಪ್ರಮುಖ ದಾಖಲೆಗಳನ್ನ ನೀಡಲಾಗಿದೆ. ಪಾಲಿಕೆ ಹಿಂದಿನ ಆಯುಕ್ತರಿಗೆ ನಿರಂತವಾಗಿ ದಾಖಲೆ ನೀಡಿ ಪರಿಶೀಲಿಸಲು ನೀಡಿದರೂ ತಲೆಕೆಡೆಸಿಕೊಳ್ಳದ ಆಯುಕ್ತರಿಂದ ಈ ಅವ್ಯವಸ್ಥೆಯಾಗಿದೆ. 

ನ್ಯಾಯಾಲಯಕ್ಕೆ ಹೋಗಲಾಗಿದೆ. ಮೊನ್ನೆ ವಿಚಾರಣೆ ಮುಗಿದಿದೆ. ತೀರ್ಒಉ ಕಾಯ್ದಿರಿಸಲಾಗಿದೆ. ಪಾಲಿಜೆ ಆಯುಕ್ತರಿಗೆ ಮತ್ತೊಂದು ಮನವಿ ನೀಡಲಾಗುವುದು. ಜು.21 ರಂದು ದಾಖಲಾತಿಯನ್ನ ನೀಡಿ ಪಾಲಿಕೆ ಉಳಿಸಿಕೊಳ್ಳಬೇಕು. ಮುಸ್ಲೀಂರಿಗೆ ನೀಡಿದರೆ ಖಾತೆ ರದ್ದು ಮಾಡಬೇಕು. ಜಾಗವನ್ನ ಯಾವುದೇ ಕಾರಣಕ್ಕೂ ಪ್ರಭಾವಿ ವ್ಯಕ್ತಿಗಳಿಗೆ ಮಣಿಯಬಾರದು ಎಂದರು. 

ಕಮಿಷನರು ಕಾನೂನು ಮೀರಿ ಮುಸ್ಲೀಂರಿಗೆ ಜಾಗ ನೀಡುದ್ರೆ ಹಿಂದೂಗಳನ್ನ‌ ಜಾಗೃತಿಗೊಳಿಸಿ ರಾಷ್ಡ್ರಭಕ್ತರ ಬಳಗ ಪ್ರತಿಭಟಿಸಲಿದೆ. ಮೈದಾನವನ್ನ ಒಂದು ವೇಳೆ ಹಸ್ತಾಂತರಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದಾಖಲೆಗಳನ್ನ ಗಮನಿಸಿ ಕ್ರಮ ಕೈಗೊಳ್ಳಬೇಕು

ಹಿಂದೂ ಸಮಾಜ ಜಾಗೃತಿಯಾಗಿದೆ ಈ ಪ್ರಯತ್ನ ಎದುರಾಳಿಗೆ ಮುಖಭಂಗವಾಗಬೇಕು. ಆಯುಕ್ತರಾಗಿದ್ದ ಚಾರುಲತಾ ಅವರು ಸ್ಪಷ್ಟವಾಗಿ ಉಲ್ಲೇಖಿಸಿ ಇದು ಅಕ್ರಮ ದಾಖಲಾತಿ ಎಂದು ತಿಳಿಸಿದ್ದಾರೆ. ನಮಗೆ ಈ ಜಾಗ ಕೈತಪ್ಪಿ ಹೋಗುವ ಭಯವಿಲ್ಲ. ಅದು ಸಿಡಿಪಿ ಯೋಜನೆಯಲ್ಲಿ ಮೈದಾನದ ಜಾಗ  ಎಂದು ಮಾರ್ಕ್ ಮಾಡಿ ನೀಡಲಾಗಿದೆ ಎಂದರು. 

ವಕ್ಫ್ ಆಗಿ ಬಂದಿದೆ ಎಂಬುದು ಎದುರಾಳಿ ವಾದ. ಇದರಲ್ಲಿ ತಿರಳಿಲ್ಲ. 2019 ರಲ್ಲಿ ಮೈದಾನವನ್ನ ವಕ್ಫ್ ಎಂದು ಬರೆದು ನಕಲಿ ದಾಖಲಾತಿ ಮೇಲೆ ಖಾತೆ ಏರಿಸಲಾಗಿದೆ. ನಮ್ಮ ಆಸ್ತಿಯನ್ನ ಉಳಿಕೊಳ್ಳುತ್ತಿದ್ದೇವೆ.

The ground land belongs to the corporation - Eshwarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close