ad

ಶ್ರದ್ಧೆ, ಶ್ರಮ ಮತ್ತು ಗುರಿ ಮುಖ್ಯ, ಮೊಬೈಲ್ ಬಳಕೆ ಹೇಗಿರಬೇಕು ಎಂಬುದರ ಬಗ್ಗೆ ವಿವರಣೆ ನೀಡಿದ ಐಪಿಎಸ್ ಕೆ.ಎ ದಯಾನಂದ್-Dedication, hard work and goal are important, IPS K.A. Dayanand explained how mobile usage should be

 SUDDILIVE || SHIVAMOGGA

ಶ್ರದ್ಧೆ, ಶ್ರಮ ಮತ್ತು ಗುರಿ ಮುಖ್ಯ, ಮೊಬೈಲ್ ಬಳಕೆ ಹೇಗಿರಬೇಕು ಎಂಬುದರ ಬಗ್ಗೆ ವಿವರಣೆ ನೀಡಿದ ಐಪಿಎಸ್ ಕೆ.ಎ ದಯಾನಂದ್-Dedication, hard work and goal are important, IPS K.A. Dayanand explained how mobile usage should be


ಈಗಿನ ಮಕ್ಕಳಿನ ಐಕ್ಯೂ ನಮಗೆ ಇಲ್ಲ. ಆದರೂ ಕೆಲವರು ಯಶಸ್ವಿಯಾಗುತ್ತಾರೆ ಕೆಲವರು ಆಗೊಲ್ಲ ಕಾರಣ ಬುದ್ದಿವಂತಿಕೆ ಮಾತ್ರ ಯಶಸ್ವಾಗಲ್ಲ ಎಂದು ಐಪಿಎಸ್ ಕೆ.ಎ ದಯಾನಂದ್ ತಿಳಿಸಿದರು. 

ಅವರು ಕುವೆಂಪು ರಂಗ ಮಂದಿರದಲ್ಲಿ ಸಮನ್ವಯ ಟ್ರಸ್ಟ್ ನ 20 ನೇ ವರ್ಷದ ಸಂಭ್ರಮದ ಸಮಾರಂಭದಲ್ಳಿ ಭರವಸೆಯೇ ಮೊದಲ ಹೆಜ್ಜೆ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಬುದ್ದಿವಂತಿಕೆ ಮಾತ್ರ ಯಶಸ್ಸು ತಂದುಕೊಡಲ್ಲ. ಗುರಿ ನಿಗದಿ ಪಡಿಸಿಕೊಂಡು ಅದರ ಬಗ್ಗೆ ಶ್ರಮ ಹಾಕಬೇಕು. ಆ ಶ್ರಮಕ್ಕೆ ದಿನನಿತ್ಯದ ಫಾಲೋ ಅಪ್ ಇರಬೇಕು. ಆಗ ಐಕ್ಯೂ ಕಡಿಮೆ ಇದ್ದರೂ ಯಶಸ್ಸು ತಂದುಕೊಡುತ್ತೆ ಎಂದ ದಯಾನಂದ್ ತಾವು ಕಾಲೇಜಿಗೆ ಬಂದಾಗ ತಮ್ಮ‌ಮಾವ ಪ್ರಜಾವಾಣಿ ಪತ್ರಿಕೆ ನೀಡಿ ಡಿಕ್ಟೇಷನ್ ಕೊಟ್ಟಿದ್ದರು. 21 ತಪ್ಪಾಗಿತ್ತು. ಅದನ್ನ ಸಾಲಾಗಿ ತೆಗೆದುಕೊಂಡು ಯಶಸ್ವಿನ‌ಮಾರ್ಗ ಎಂದರು. 

ಎಸ್ ಎಸ್ ಎಲ್ ಸಿ ಫೇಲ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿಯಾದ ದುರ್ಗಪ್ಪ ಅಂಗಡಿಯ ಬಗ್ಗೆ ವಿವರಣೆ ನೀಡಿದರು. ಮೊಬೈಲ್ ತಂದೆ ತಾಯಿ ಪಾತ್ರವಹಿಸುತ್ತೆ. ಯಾವುದೇ ಪಾಠ ತಿಳಿಸಿ ಗುರುಗಳ ಪಾತ್ರ ವಹಿಸುತ್ತೆ. ಗ್ರಂಥಾಲಯದ ಪಾತ್ರವನ್ನ ನಿರ್ವಹಿಸುತ್ತೆ. ವೈದ್ಯರ,ಇಂಜಿನಿಯರ್ ಪಾತ್ರ ವಹಿಸುವ ಈ ಮೊಬೈಲ್ ನ್ನ ಹೇಳುವ ವಿಷಯ ಬಿಟ್ಟು ಬೇರೆ ವಿಷಯದ ಬಗ್ಗೆ ಗಮನ ಕೊಡುವುದರಿಂದ ಟೈಂ ಪಾಸ್ ಆಗಲಿದೆ ವಿನಹ ಒಳ್ಳೆಯದಕ್ಕೆ ಬಳಸಲ್ಲ ಎಂದು ಯುವಜನರ ಸಮಸ್ಯೆ ವಿವರಿಸಿದರು. 

ಇಂಟರ್ ನೆಟ್ ಡಿ ಅಕ್ಷನ್ ಸೆಂಟರ್ ಆರಂಭಿಸಲಾಗಿದೆ. ಬೆಂಗಳೂರಿನ‌ ನಿಮಾನ್ಸ್ ನಲ್ಲಿ ಆರಂಭಿಸಲಾಗಿದೆ. ಕುಡಿತ ಮತ್ತು ಇತರೆ ಚಟ ಬಿಡಿಸಲು ಆರಂಭವಾಗಿರುವ ಡಿ ಅಡಿಕ್ಷನ್ ಸೆಂಟರ್ ಮೊಬೈಲ್ ಇಂಟರ್ ನೆಟ್ ನ ಡಿ ಅಡಿಕ್ಷನ್ ಸೆಂಟರ್ ಆರಂಭಿಸಲಾಗಿದೆ. ಮೊಬೈಲ್ ನ ವಾಟ್ಸಪ್,  ಫೇಸ್ ಬುಕ್, ಯೂಟ್ಯೂಬ್ ನೋಡಲ್ಲ, ಡಿಲೀಟ್ ಮಾಡುತ್ತೇವೆ ಎಂದು ಶಪಥ ಮಾಡಿ ಎಂದು ಕರೆ ನೀಡಿದ ಅವರು ಭವಿಷ್ಯಕ್ಕಿಂತ ಈ ಸುಖದ ಅನುಭವ ಮುಖ್ಯವಾಗಿದೆ ಎಂದು ವಿದ್ತಾರ್ಥಿಗಳಿಗೆ ಸಾಮಾಜಿಕ ಜಾಲತಾಣ ಡಿಲೀಟ್ ಮಾಡಲು ಹೇಳಿದರು. 

ಚ್ಯಾಟ್ ಜಿಪಿಟಿ ಬಳಸಿ, ಇದರ ಜೊತೆ ಎಷ್ಟು ಬೇಕಾದರು ಆಟಾಡಿ ನಿಮ್ಮ ಜೀವನದ ಗುರಿ ಮುಟ್ಟಲು ಸಾಧ್ಯವಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದಾಗ ಈ ಜಿಪಿಟಿ ಆಪ್ ನಿಂದ ಅರ್ಥಶಾಸ್ತ್ರದ ಅನುಭವ ಪಡೆದುಕೊಂಡೆ. ಆದರೆ ಇದರ ಬಳಕೆ ಕಡಿಮೆಯಾಗಿದೆ. ಮೊಬೈಲ್ ನಿಲ್ಸಿ ಎಂದರೆ ಯಾರೂ ನಿಲ್ಸಲ್ಲ. ಹಾಗಾಗಿ ನಿಮ್ಮ‌ಜೀವನ ಬೆಳೆಸಿಕೊಳ್ಳಲು ಸಾಧ್ಯವಿದೆ ಎಂದರು. 

ಕಂಪ್ಯೂಟರ್ ಆಫ್ ಮತ್ತು ಆನ್ ಮಾಡಲು ಬಾರದ ನಾನು ಐಎಎಸ್ ಪಾಸ್ ಆದೆ. ಇ ಆಫೀಸ್ ಆರಂಭಿಸಿದ್ದೇನೆ. ಇದಕ್ಕೆ ಆಸಕ್ತಿ ಬೇಕಿದೆ. ಯಶಸ್ಸಿಗೆ ಶ್ರಮ, ಶ್ರದ್ಧೆ ಮತ್ತು ಆಸಕ್ತಿ ಇರಬೇಕು. ಮಹಾಭಾರತ ಎಂದರೆ ಮಹಾಕಾವ್ಯ ಇಲ್ಲಿನ ಪಾತ್ರವನ್ನ ಅರ್ಥ ಮಾಡಿಕೊಂಡರೆ ಬೇರೆ ಯಾವುದನ್ನು ಕಲಿಯುವ ಅಗತ್ಯವಿಲ್ಲ. ನನ್ನಲ್ಲಿ ಜ್ಞಾನಾರ್ಜನೆ, ಹೆಣ್ಣಿನ ಬಗ್ಗೆ ಕೆಟ್ಟ ಅಭಿಪ್ರಾಯವಿದೆ, ಧಾನ ಮಾಡುವ ಗುಣವಿದೆ. ಆ ಗುಣಗಳಿಗೆ ಪಾತ್ರವನ್ನ‌ಹುಡುಕಿ ಸಿಗುತ್ತೆ ಎಂದರು. 

ವಿದ್ಯೆಗೆ ಅರ್ಜುನ, ಜ್ಞಾನಕ್ಕೆ ನಕುಲ ಸಹದೇವ, ತಾಯಿಗೆ ಕುಂತಿ, ಹೆತ್ತವರಿಗೆ ಹೆಗಣವೂಮುದ್ದು ಎಂದರೆ ಗಾಂಧಾರಿ, ಹಿಡಿದ ಕೆಲಸ ಬಿಡದವನು ದುರ್ಯೋದನ, ಗುರಿಗೆ ಶ್ರೀಕೃಷ್ಣ, ಮನುಷ್ಯತ್ವಕ್ಕೆ ವಿಧುರ, ದ್ರೌಪದಿ ಪಾತ್ರ ಅಮೂಲ್ಯವಾಗಿ ಮೂಡಿ ಬಂದಿದೆ. ಧರ್ಮ ಗೆಲ್ಲುತ್ತೆ, ಜ್ಞಾನ ಗೆಲ್ಕುತ್ತೆ, ವ್ಯಾಮೋಹ ಸೋಲುತ್ತೆ, ಕೆಟ್ಟ ಹಠ ಸಾಯುತ್ತೆ, ಕುತಂತ್ರ ಸಾಯುತ್ತೆ. ಸ್ನೇಹ ಮತ್ತು ಧರ್ಮದ ಗೊಂದಲದಲ್ಲಿ ಕರ್ಣ ಸಾಯುತ್ತಾರೆ. ಗುರಿ, ಜ್ಞಾನ ಗೆಲ್ಲುತ್ತದೆ ಎಂದು ಉದಾಹರಣೆ ನೀಡಿದ ದಯಾನಂದ್ ಗುರಿಯನ್ನ ಗಟ್ಟಿಸಿಕೊಳ್ಳದಿದ್ದರೆ ಯಶಸ್ಸಾಗಲ್ಲ ಎಂದು ವಿವರಿಸಿದರು. 

ಹೆಚ್ಚು ಏನು ಮಾಡ್ತೀರಿ ಅಲ್ಲಿ ಗೆಲವಿದೆ. ನಿಮಗೆ ನೀವೆ ಮಾರ್ಗದರ್ಶಕರು, ನಿಮ್ಮನ್ನ ನಿಯಂತ್ರಿಸುತ್ತಿರುವುದು ನೀವೇ. ಆಗಬೇಕು ಎಂದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

Dedication, hard work and goal are important, IPS K.A. Dayanand explained how mobile usage should be


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close