SUDDILIVE || BHADRAVATHI
ಅಡಿಕೆ ಮರಗಳ ಕಡಿತಲೆ-ಕಂಗಾಲಾದ ರೈತ-Areca tree felling - farmer in distress
ತಾಲೂಕಿನ ಗುಡ್ಡದ ನೇರಲೆಗೆರೆ ಗ್ರಾನದ ಸರ್ವೆ ನಂಬರ್ 35 ರಲ್ಲಿ ಭದ್ರಾವತಿ ತಾಲೂಕಿನ ತಹಶೀಲ್ದಾರ್ ಅವರಿಂದ ಪೊಲೀಸರ ಸಹಾಯದೊಂದಿಗೆ ಖಾತೆಯಿರುವ ಜಮೀನಿಗೆ ನುಗ್ಗಿ ಅಡಿಕೆ ಮರಗಳನ್ನ ಕಡಿದಿರುವ ಘಟನೆ ನಡೆದಿದೆ.
ಸರ್ವೆನಂಬರ್ 35 ರಲ್ಲಿ ಮೊಹಮದ್ ಎಂಬುವರಿಗೆ ಸೇರಿದ 1.10 ಎಕರೆ ಜಮೀನಿನಲ್ಲಿ ಕಳೆದ 30 ವರ್ಷದಿಂದ ಅಡಿಕೆ ಮರಗಳನ್ನ ಬೆಳೆಸಿದ್ದರು. ಸರ್ಕಾರವೇ ಖಾತೆ ಮಾಡಿ ಕೊಟ್ಟಿದ್ದರು. ಇಂದು ಭದ್ರಾವತಿ ತಹಶೀಲ್ದಾರ್ ಪೊಲೀಸರೊಂದಿಗೆ ಬಂದು ಕಡಿದಿರುವುದಾಗಿ ಮೊಹಮದ್ ಅವರ ಕುಟುಂಬ ಸುದ್ದಿಲೈವ್ ನೊಂದಿಗೆ ಅಳಲು ತೋಡಿ ಕೊಂಡದೆ.
ಸರ್ಕಾರಿ ಜಮೀನು ಎಂದು ಒಕ್ಕಲೆಬ್ಬಿಸಿರುವುದಾಗಿ ಆರೋಪಿಸಿರುವ ಮೊಹಮದ್ ಕುಟುಂಬ ಒಂದು ನೋಟೀಸು ನೀಡದೆ ಏಕಾಏಕಿ ಬಂದು ಈ ದೌರ್ಜನ್ಯ ನಡೆಸಿರುವುದಾಗಿ ಮೊಹಮದ್ ಕುಟುಂಬ ಆರೋಪಿಸಿದೆ. ಇಲ್ಲಿಗೆ ಜನಪ್ರತಿನಿಧಿಗಳ ಮುಖವಾಡ ಕಳಚಿ ಬಿದ್ದಿದೆ. ಮತಗಳಿಗಾಗಿ ಓಡಿಬರುವ ಜನಪ್ರತಿನಿಧಿಗಳು ಯಾರೂ ದೃತಿಗೆಡಬೇಡಿ ನಾವಿದ್ದೇವೆ ಎಂಬ ಬೊಗಳೆ ಆಶ್ವಾಸಬೆ ಮೊಹಮದ್ ಅವರಿಗೆ ಮುಳುವಾಗಿದೆ.
ಒಟ್ಟಿನಲ್ಲಿ ಮತಗಳಿಗಾಗಿ ರೈತರಿಗೆ, ಸಾರ್ವಜನಿಕರಿಗೆ ಬೊಗಳೆ ಆಶ್ವಾಸನೆಗಳು ಕಂಟಕವಾಗಿ ಎದುರಾಗುತ್ತಿದೆ.
Areca tree felling - farmer in distress