SUDDILIVE|| SHIVAMOGGA
ಶಿಕಾರಿಪುರದಲ್ಲಿ ರೂಟ್ ಮಾರ್ಚ್-Root March in Shikaripura
ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನ ಸೌಹಾರ್ಧತೆಯಲ್ಲಿ ನಡೆಸಲೆಂದು ಪೊಲೀಸ್ ಇಲಾಖೆ ಹಲವು ಸಿದ್ದತೆಗಳನ್ನ ಈಗಲಿನಿಂದಲೇ ತಯಾರಿಸಿಕೊಂಡಿದೆ.
ಜಿಲ್ಲೆಯಲ್ಲಿ ಮುಂಬರುವ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಿಕಾರಿಪುರ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮವಾಗಿ ನಿನ್ನೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನೊಳಗೊಂಡ ತಂಡವು ರೂಟ್ ಮಾರ್ಚ್ ನಡೆಸಿದೆ. ಶಿಕಾರಿಪುರ ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.
ರೂಟ್ ಮಾರ್ಚ್ ನಲ್ಲಿ, ವಿಶೇಷ ಕಾರ್ಯಪಡೆ ಹಾಗೂ ಶಿರಾಳಕೊಪ್ಪದ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.
Root March in Shikaripura