ad

ಸಿಗಂದೂರು ಸೇತುವೆಯ ನಿಜವಾದ ನಿರ್ಮಾತೃವನ್ನ ಬಿಜೆಪಿ ಮರೆಯಿತಾ? ನೆಟ್ಟಿಗರು ಯಾರನ್ನ ನೆನಪಿಸಿಕೊಳ್ತಾಯಿದ್ದಾರೆ?BJP forgotten the real builder of the Sigandur Bridge

 SUDDILIVE || SHIVAMOGGA

ಸಿಗಂದೂರು ಸೇತುವೆಯ ನಿಜವಾದ ನಿರ್ಮಾತೃವನ್ನ ಬಿಜೆಪಿ ಮರೆಯಿತಾ? ನೆಟ್ಟಿಗರು ಯಾರನ್ನ ನೆನಪಿಸಿಕೊಳ್ತಾಯಿದ್ದಾರೆ? Has the BJP forgotten the real builder of the Sigandur Bridge? Who are netizens reminding them of?

Siganduru, Bridge
ಪ್ರಸನ್ನ ಕೆರೆಕೈ (The real hero)



ಸಿಗಂದೂರು ಸೇತುವೆ ಲೋಕಾರ್ಪಣೆಗೆ ಸಿದ್ದವಾಗಿದೆ. ನಿನ್ನೆ ಶಿಕಾರಿಪುರದ ಸಹೋದರರು ಸ್ಥಳಕ್ಕೆ ಭೇಟಿ ನೀಡಿ ಬಂದಿದ್ದಾರೆ. ಈ ಸೇತುವೆ ನಿರ್ಮಾಣಕ್ಕೆ ಬೀದಿಗೆ ಬಿದ್ದ ವ್ಯಕ್ತಿಯನ್ನ ಸಾಮಾಜಿಕ ಜಾಲತಾಣದಲ್ಲಿ ನೆನಪಿಸಿಕೊಂಡಿದ್ದಾರೆ. 

ತುಮರಿ ಮಾಜಿ ಅಧ್ಯಕ್ಷರಾದ ಜಿ.ಟಿ ಸತ್ಯನಾರಾಯಣರವರು ಶಿಕಾರಿಪುರದ ಸಹೋದರರು (ಸಂಸದ ರಾಘವೇಂದ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜೇಂದ್ರ) ಭೇಟಿಯ ಫೊಟೊವೊಂದನ್ನ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡು ಸೇತುವೆಯ ಮೂಲ ಕಾರ್ಯಕರ್ತರಾದ ಪ್ರಸನ್ನ ಕೆರೆಕೈ ಅವರು ಕಾಣಿಸುತ್ತಿಲ್ಲ, ಫೊಟೋಗ್ರಾಫರ್ ಬಹುಶಃ ಮರೆತಿದ್ದಾನೆ ಎಂಬುವ ಮೂಲಕ ಸೇತುವೆ ನಿರ್ಮಾಣದ ಮೂಲ ಪುರುಣನನ್ನ ಪರಿಚಯಿಸುವ ಪ್ರಯತ್ನ ನಡೆಸಿದ್ದಾರೆ. 

ಇದು ಸಹೋದರರಿಗೆ ಕಾಲೆಳೆಯುವ ಟಾಂಗ್ ನೀಡುವ ಉದ್ದೇಶದಿಂದ ಅಲ್ಲವೆಂಬುದು ಅಷ್ಟೇ ಸತ್ಯ. ಆದರೆ ಜಿಟಿ ಸತ್ಯನಾರಾಯಣರ ಈ ಪೋಸ್ಟ್ ಸಕ್ಕತ್ ವೈರಲ್ ಆಗುತ್ತಿದೆ. ದ್ವೀಪದ ಜನ ಮೂಲ ಪುರುಷನ ಹುಡುಕಾಟದಲ್ಲಿದ್ದಾರೆ. ಈ ಸೇತುವೆಗಾಗಿ ಬೀದಿಯಲ್ಲಿ ನಿಂತು ಜನರನ್ನ ಎಚ್ಚರಿಸುವ ಕೆಲಸ ಮಾಡಿದ ಪ್ರಸನ್ನ ಕೆರೆಕೈಯನ್ನ ಬಿಜೆಪಿ ಮರೆಯುತ್ತಿದೆ ಎಂಬ ಸಂದೇಶವನ್ನ ನೀಡಿದ್ದಾರೆ. 


ರಾಮಚಂದ್ರ ಹೆಗಡೆ ಎಂಬ ನೆಟ್ಟಿಗರು ಯಶಸ್ಸಿಗೆ ನೂರಾರು ಅಪ್ಪಂದಿರು ಅಂತಾರಲ್ಲಾ ಹಾಗೆ ಇದು. ಹಿನ್ನೀರು‌ಭಾಗದ ಬಿಜೆಪಿ‌ ನಾಯಕರೇ ಪ್ರಸನ್ನ ಹೆಸರು ಹೇಳುವ ಸೌಜನ್ಯ ತೋರುತ್ತಿಲ್ಲ, ಇನ್ನು ರಾಜ್ಯ ನಾಯಕರು ಹೇಳುತ್ತಾರೆಂಬ ನಿರೀಕ್ಷೆ ಇಲ್ಲ. ಕನಿಷ್ಟಪಕ್ಷ ರಾಘವೇಂದ್ರ ಆದರೂ ಅದನ್ನು ಗುರುತಿಸಬೇಕಿತ್ತು. ಅವರಿಗೂ ಪಕ್ಷದಲ್ಲೊಬ್ಬ ಪ್ರತಿಸ್ಪರ್ಧಿ ಬೆಳೆದು ಬಿಡುವ ಆತಂಕ ಇರಬಹುದು. ವಿರೋಧ ಪಕ್ಷದಲ್ಲಿದ್ದರೂ ನೀವು ಪ್ರಸನ್ನ ಅವರನ್ನೂ ಗುರುತಿಸುವ, ಅವರ ಕೊಡುಗೆ ಬಗ್ಗೆ ಬಹಿರಂಗವಾಗಿ ಹೇಳುವ ಔದಾರ್ಯ ತೋರಿದ್ದೀರಿ. ಇದು ಪ್ರಶಂಸನಾರ್ಹ ವಿಚಾರ. ಹಾಗೆಯೇ ಸೇತುವೆಯ ಬಗ್ಗೆ ಛಲಬಿಡದೆ ದುಡಿದ ಪ್ರಸನ್ನ ಅವರನ್ನು ಕನಿಷ್ಟ ಸ್ಮರಿಸದ ಬಿಜೆಪಿ‌ ನಾಯಕರ ನಿಲುವು ಖಂಡನಾರ್ಹ. ಹಿನ್ನೀರು ಭಾಗದ ಸಾರ್ವಜನಿಕರು ಪಕ್ಷಾತೀತವಾಗಿ ಪ್ರಸನ್ನ Prasanna Kerekai  ಅವರನ್ನು ಅಭಿನಂದಿಸಬೇಕು, ಸಾರ್ವಜನಿಕವಾಗಿ ಗೌರವಿಸಬೇಕು ಎಂದರೆ

ಚಾರುವಾಕ ರಘು ಅವರು Ramachandra Hegde ಸರಿಯಾಗಿಯೇ ಹೇಳಿದ್ದಿರಿ. ಯಾರು ಏನೆ ನೌಟಂಕಿ ಆಟ ಆಡಿದರು ಪ್ರಸನ್ನ ಕೆರೆಕೈ ಅವರು ಮಾಡಿದ ಕೆಲಸವನ್ನು ಜನ ಮರೆಯುವುದಿಲ್ಲ. ಉದ್ಘಾಟನೆ ಆಗಲಿ ನಾವು ನೀವು ಸೇರಿ ಪ್ರಸನ್ನ ಸೇರಿದಂತೆ ಇದಕ್ಕಾಗಿ ದುಡಿದವರಿಗೆ ಈ ನದಿಯ ದಂಡೆ ಮೇಲೆ ಅಪರೂಪದ ಅಭಿನಂದನಾ ಕಾರ್ಯಕ್ರಮ ಮಾಡುವಾ.ಏನಂತಿರಾ ಎಂದು ಕೇಳಿದ್ದಾರೆ.

2014 ರಲ್ಲಿ ಪ್ರಸನ್ನ ಕೆರೆಕೈ ಸಿಗಂದೂರು ಸೇತುವೆಗಾಗಿ ಶಿವಮೊಗ್ಗಕ್ಕೆ ಬಂದು ಪ್ರತಿಭಟಿಸಿದ್ದನ್ನ ಕೆಲ ನೆಟ್ಟಿಗರು ಹಂಚಿಕೊಂಡಿದ್ದಾರೆ. ಇನ್ನಾದರೂ ಬಿಜೆಪಿ ಪ್ರಸನ್ನ ಕೆರೆಕೈ ಅವರಂತಹ ಕಾರ್ಯಕರ್ತರನ್ನ ಸ್ಮತಿಸಿಕೊಳ್ಳಲಿ ಎಂದು ನೆಟ್ಟಿಗರು ಪಕ್ಷವನ್ನ ಜಾಲಿಡಿದ್ದಾರೆ. ಪಕ್ಷ ಸುಧಾರಿಸಿಕೊಳ್ಳತ್ತಾ ಕಾದು ನೋಡಬೇಕಿದೆ. 

BJP forgotten the real builder of the Sigandur Bridge


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close