ad

ಆನಂದಪುರ-ಕೋಳಿಲಾರಿ ಪಲ್ಟಿ-lorry upset

SUDDILIVE || SAGARA

ಆನಂದಪುರ-ಕೋಳಿಲಾರಿ ಪಲ್ಟಿ-lorry upset

Lorry, upset

ಸಾಗರ ತಾಲ್ಲೂಕಿನ ಆನಂದಪುರ-ಹೊಸೂರು ಹಾಗೂ ಸುತ್ತಲಿನ ನಿವಾಸಿಗಳಿಗೆ ಆದ್ರೆ ಮಳೆಯ ತಂಪಿನ ನಡುವೆ ಬುಧವಾರ ಕೋಳಿ ಊಟದ ಗಮ್ಮತ್ತು ಬಿಸಿಯಾಗಿಸಿತು. ಹೊಸೂರು-ಆನಂದಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 206ರ ತಿರುವಿನಲ್ಲಿ ಬೆಳಿಗ್ಗೆ ಕೋಳಿ ತುಂಬಿದ್ದ ಲಾರಿ ಪಲ್ಟಿಯಾಗಿ

ರಸ್ತೆಗೆ ಬಿದ್ದ ಕೋಳಿಗಳನ್ನು ಸ್ಥಳೀಯರು, ರಸ್ತೆಯಲ್ಲಿ ಓಡಾಡುವವರು ಉಚಿತವಾಗಿ ಕೊಂಡೊಯ್ದರು. ಸಾಗರದ ತಾಜ್ ಟ್ರೇಡರ್ಸ್ ಗೆ ಸೇರಿದ ಲಾರಿಯಲ್ಲಿ ನಾಲ್ಕೂವರೆ ಟನ್ ತೂಕದಷ್ಟು ಕೋಳಿಗಳನ್ನು ಸಾಗರಕ್ಕೆ ಸಾಗಣೆ ಮಾಡಲಾಗುತ್ತಿತ್ತು.

ಅಪಘಾತದಿಂದ ಬಹಳಷ್ಟು ಕೋಳಿಗಳು ಸಾವಿಗೀಡಾಗಿದ್ದು, ಇನ್ನೂ ಕೆಲವು ಜೀವನ್ಮರಣದ ಸ್ಥಿತಿಯಲ್ಲಿದ್ದವು. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ನಿಲ್ಲಿಸಿ ಕೆಲವರು ಕೋಳಿಗಳ ಕೊಂಡೊಯ್ದರು.

'ಆದ್ರ ಮಳೆಗೆ ಥಂಡಿ ಹಿಡಿದಿದೆ. ಇವತ್ತು ಮನೆಯಲ್ಲಿ ಕೋಳಿ ಊಟದ ಗಮ್ಮತ್ತು. ಬಹಳಷ್ಟು ಖಾದ್ಯ ಮಾಡಬಹುದು ಕಣ್ರಿ' ಎಂದು ಕೋಳಿಗಳ ಹಿಡಿದು ಹೊರಟ ಆನಂದಪುರದ ಕೂಲಿ ಕಾರ್ಮಿಕ ಭಾಸ್ಕರ ನಕ್ಕ ಮಾತನಾಡುತ್ತಾರೆ. 

'ತಿರುವಿನಲ್ಲಿ ದಿಢೀರನೆ ಕಾರಿನವನು ಅಡ್ಡಬಂದ ಕಾರಣ ನಿಯಂತ್ರಣ ತಪ್ಪಿದ ಲಾರಿ ಉರುಳಿ ಬಿದ್ದಿದೆ. ನಂತರ ಜೆಸಿಬಿಯಿಂದ ಲಾರಿಯನ್ನ ಎತ್ತಲಾಗಿದೆ.  ಸತ್ತಿರುವ ಕೋಳಿಗಳ ಒಯ್ದು ಏನು ಮಾಡುವುದು. ಜನರು ಒಯ್ಯಲು ಬಿಡಿ. ಅಪಘಾತದಿಂದ  8 ಲಕ್ಷರೂ. ದಷ್ಟು ಹಾನಿಯಾಗಿದೆ' ಎಂದು ಲಾರಿ ಚಾಲಕ ಫಯಾಜ್ 'ಸುದ್ದಿಲೈವ್' ಗೆ ಪ್ರತಿಕ್ರಿಯಿಸಿದರು.

lorry upset

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close