SUDDILIVE || SHIVAMOGGA
ಬಾಳೆಬರ ಘಾಟ್ (ಹುಲಿಕಲ್ ಘಾಟ್) ತಾತ್ಕಾಲಿಕ ಬಂದ್ -Balebara Ghat (Hulikal Ghat) is temporarily closed
ಮಣ್ಣುಕುಸಿತದ ಹಿನ್ನಲೆಯಲ್ಲಿ ಹುಲಿಕಲ್ ಘಾಟ್ ನ್ನ ತಾತ್ಕಾಲಿಕ ಬಂದ್ ಮಾಡಿ ಭಾರಿ ವಾಹನಗಳಿಗೆ ಕಿರಿದಾದ ಸಂಜಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.
ತೀರ್ಥಹಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ 52 ಬಾಳೆಬರ ಘಾಟ್ ಸರಪಳಿ 42.10 ರಿಂದ 42.20 ರಲ್ಲಿನ ಹೇರ್ ಪಿನ್ ತಿರುವಿನಲ್ಲಿ ಮೇ ಅಂತ್ಯದಲ್ಲಿ ಬಿದ್ದಂತಹ ಮಳೆಯಿಂದ ಕಾಂಕ್ರಿಟ್ ರಸ್ತೆಯ ಕೆಳಭಾಗದಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಪ್ರಸ್ತುತ ಮಣ್ಣು ಕುಸಿತವಾಗಿರುವ ಭಾಗದಲ್ಲಿ ತಾತ್ಕಾಲಿಕವಾಗಿ ದುರಸ್ಥಿ ಕಾರ್ಯಕೈಗೊಡಿರುವುದಾಗಿ, ಮತ್ತೆ ಮಳೆ ಚುರುಕುಗೊಂಡಿರುವುದರಿಂದ ಮಣ್ಣು ಮತ್ತೆ ಕುಸಿಯುವಸಂಭವವಿರುವುದರಿಂದ, ಸುರಕ್ಷತಾ ದೃಷ್ಠಿಯಿಂದ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52 ರ ಬಾಳಬರ ಘಾಟಿ ಮಾರ್ಗ ವ್ಯಾಪ್ತಿಯಲ್ಲಿ (ಮಾಸ್ತಿಕಟ್ಟೆಯಿಂದ ಹೊಸಂಗಡಿಯವರೆಗೆ) ತಾತ್ಕಾಲಿಕವಾಗಿ ಮಳೆಗಾಲದವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಗೊಳಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ತಾತ್ಕಾಲಿಕವಾಗಿ ಈಕೆಳಕಂಡಂತೆ ಅಧಿಸೂಚನೆ ಹೊರಡಿಸಲು ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ತಾತ್ಕಾಲಿಕ ಬಂದ್ ಮಾಡಿ ಆದೇಶಿದ್ದಾರೆ.
ಬದಲಿ ಮಾರ್ಗ ಯಾವುದು..!?
1. (ತೀರ್ಥಹಳ್ಳಿ- ರಾವೆ- ಕಾನುಗೋಡು - ಮಾಸ್ತಿಕಟ್ಟೆ-ಹುಲಿಕಲ್ ಘಾಟ್-ಹೊಸಂಗಡಿ- ಸಿದ್ದಾಪುರ- )
2. ತೀರ್ಥಹಳ್ಳಿ - ಯಡೂರು- ಮಾಸ್ತಿಕಟ್ಟೆ- -ನಗರ-ಕೊಲ್ಲೂರು - ಕುಂದಾಪುರ ರಸ್ತೆ
3. ಶಿವಮೊಗ್ಗ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ ಆ mನಂತರ ಹೊನ್ನಾವರ ದಿಂದ- ಭಟ್ಕಳ-ಬೈಂದೂರು-ಕುಂದಾಪುರ ರಸ್ತೆ
ರಾಜ್ಯ ಹೆದ್ದಾರಿ 52 ರ ಬಾಳೆಬರ ಘಾಟ್ ಮಾರ್ಗದಲ್ಲಿ ಭಾರಿ ವಾಹನಗಳ ನಿಷೇದ ಮತ್ತು ಪರ್ಯಾಯ ಮಾರ್ಗದಲ್ಲಿ ಸಂಚಾರವನ್ನು ಮಳಗಾಲ ಪೂರ್ಣಗೊಳ್ಳುವವರೆಗೆ ನಿಷೇಧಿಸಲಾಗಿದೆ.