SUDDILIVE || SAGARA
ಜುಲೈ 14 ಕ್ಕೆ ಸಿಗಂದೂರು ಸೇತುವೆ ಉದ್ಘಾಟನೆ ಕುರಿತು ಬೇಳೂರು ಹೇಳಿದ್ದೇನು?What did Belur say about the inauguration of the Sigandur Bridge on July 14?
ಕಳಸವಳ್ಳಿ ಸಿಗಂದೂರು ಸೇತುವೆ ಜುಲೈ 14 ರಂದು ಉದ್ಘಾಟನೆಗೊಳ್ಳವ ಬಗ್ಗೆ ಅಪಪ್ರಚಾರ ಮಾಡಲಾಗಿದೆ ಎಂದು ಶಾಸಕ ಗೋಪಾಲ ಕೃಷ್ಣ ಬೇಳೂರು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಗಂದೂರು ಸೇತುವೆ ಬಗ್ಗೆ ಇರುವ ಆಸಕ್ತಿ ಕೋಳೂರು ಸೇತುವೆ ಬಗ್ಗೆ ಸಂಸದರಿಗೆ ಆಗಲಿ, ಮಾಜಿ ಶಾಸಕರಿಗಾಗಲಿ ಯಾಕೆ ಇಲ್ಲ. ಅದನ್ನ ಅವರಿಗೆ ಕೇಳಬೇಕು. ನಾನು ಸಿಗಂದೂರು ಸೇತುವೆ ಉದ್ಘಾಟನೆಯನ್ನ ಮಾಧ್ಯಮದಲ್ಲಿ ಬಂದ ಮೇಲೆ ವಿಚಾರಿಸಿಲಾಯಿತು. ಆಗ ಸೇತುವೆ ಉದ್ಘಾಟನೆ ಮುಂದೆ ಹೋಗಿದೆ ಎಂದು ತಿಳಿಸುತ್ತಾರೆ. ಹಾಗಾದರೆ ಮಾಧ್ಯಮಗಳಲ್ಲಿ ಉದ್ಘಾಟನೆ ದಿನಾಂಕ ಪ್ರಕಟಿಸಿದ್ದು ಯಾಕೆ ಎಂದು ಗರಂ ಆದರು.
ಶಿಕಾರಿ ಪ್ರಕರಣದಲ್ಲಿ ಸಂಬಂಧಿಸಿದಂತೆ ಅರಣ್ಯ ಅಧಿಕಾರಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇರೂರು, ಸಿಗಂದೂರು ಸೇತುವೆ ವೀಕ್ಷಣೆಯ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು ಈ ಪ್ರಕರಣದಲ್ಲಿ ಆರೋಪಿಗಳು ಅರಣ್ಯ ಅಧಿಕಾರಿಗಳು ಸ್ಪಂದಿಸಿದ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯದ ಮುಂದೆ ಆರೋಗ್ಯವಾಗಿ ಇದ್ದೀವಿ ಎಂದು ಒಪ್ಪಿ ಕೊಂಡ ಹಿನ್ನೆಲೆಯಲ್ಲಿ ಈ ಪ್ರಕರಣ ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ.
ಆದರೂ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ತನಿಖೆ ನಡೆಸಲಾಗುತ್ತದೆ ಎಂದರು.
Belur say about the inauguration of the Sigandur Bridge on July 14