SUDDILIVE || SHIVAMOGGA
ಜೀವನದಿ ತುಂಗೆಗೆ ಶಾಸಕರಿಂದ ಬಾಗಿನ- Bageena from MLAChennabasappa
ಸಕಲ ದೇವಾನುದೇವತೆಗಳ ಅನುಗ್ರಹದಿಂದ ಜಿಲ್ಲೆ ಹಾಗೂ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಶಿವಮೊಗ್ಗದ ಜೀವನಾಡಿಯಾದ ತಾಯಿ ತುಂಗಾ ಮಾತೆಯು ಮೈದುಂಬಿ ಹರಿಯುತ್ತಿರುವ ಈ ಪವಿತ್ರ ಸಂದರ್ಭದಲ್ಲಿ, ನದಿಯ ಪರಿಪೂರ್ಣತೆಯ ಗೌರವಾರ್ಥವಾಗಿ ಹಾಗೂ ಪ್ರಕೃತಿ ಪ್ರತಿಯೊಂದು ಕಣಕ್ಕೂ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ, ಬಿಜೆಪಿ ಶಿವಮೊಗ್ಗ ನಗರ ಸಮಿತಿಯಿಂದ ಕೋರ್ಪಲಯ್ಯ ಛತ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ತುಂಗಾ ನದಿಗೆ ಬಾಗಿನ ಅರ್ಪಣೆ’ ಕಾರ್ಯಕ್ರಮದಲ್ಲಿ *ಶಾಸಕರಾದ ಎಸ್ಎನ್ ಚನ್ನಬಸಪ್ಪ* ಅವರು ಭಾಗವಹಿಸಿ, ಬಾಗಿನ ಅರ್ಪಣೆ ಮಾಡಿದರು.
ತುಂಗಾ ನದಿ ರಾಜ್ಯದ ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನದ ಪ್ರಮುಖ ಮೂಲವಾಗಿದ್ದು, ತುಂಗೆಗೆ ಬಾಗಿನ ಅರ್ಪಿಸುವ ಸಂಸ್ಕೃತಿ ನಮ್ಮ ನಾಡಿನ ನದೀಪೂಜಾ ಪರಂಪರೆಯ ಪ್ರತಿಬಿಂಬವಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ *ಶ್ರೀ ಎನ್‌ಕೆ ಜಗದೀಶ್* ಹಾಗೂ ನಗರಾಧ್ಯಕ್ಷರಾದ ಶ್ರೀ *ಮೋಹನ್ ರೆಡ್ಡಿ*, ಜಿಲ್ಲೆ ಪ್ರಧಾನ ಕಾರ್ಯದರ್ಶಿಗಳಾದ ಹರಿಕೃಷ್ಣ, ಮಾಲತೇಶ್, ಮಾಜಿ ಸೂಡಾ ಅಧ್ಯಕ್ಷರುಗಳಾದ ಎನ್ ಜೆ ನಾಗರಾಜ, ಎಸ್ ಜ್ಞಾನೇಶ್ವರ್, ಮಾಜಿ ಮಹಾ ನಗರ ಪಾಲಿಕೆ ಸದಸ್ಯರುಗಳಾದ ಪ್ರಭು, ಸುರೇಖಾಮುರಳಿಧರ್ , ಶಿವ ಕುಮಾರ್, ಗನ್ನಿ ಶಂಕರ್ ಹಾಗೂ ಜಿಲ್ಲಾ ಸಮಿತಿ ಸದಸ್ಯರು, ಹಾಗೂ ನಗರದ ಸಮಿತಿಯ ಪ್ರಮುಖರು, ವಿವಿಧ ಮೋರ್ಚಾಗಳ ಸದಸ್ಯರು, ಧಾರ್ಮಿಕ ಮುಖಂಡರು, ನಮ್ಮ ಕಾರ್ಯಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.