ad

ಅಡಿಕೆ ವರ್ತಕರೆ ಎಚ್ಚರ-ಅಡಿಕೆ ಕಳ್ಳರಿದ್ದಾರೆ!Betel nut traders, beware

SUDDILIVE || SHIVAMOGGA

ಅಡಿಕೆ ವರ್ತಕರೆ ಎಚ್ಚರ-ಅಡಿಕೆ ಕಳ್ಳರಿದ್ದಾರೆ!Betel nut traders, beware - there are betel nut thieves!

Betelnut, traders


ಅಡಿಕೆಕಳ್ಳರ ಹಾವಳಿ ಶಿವಮೊಗ್ಗದ ಮಲೆನಾಡಿನಲ್ಲಿ ಹೆಚ್ಚಾಗಿದೆ. ಒಂದು ಕಡೆ ಮನೆಯ ಮುಂದೆ ಒಣಹಾಕಿದ ಅಡಿಕೆಯನ್ನ ಕಳವು ಮಾಡಲಾಗುತ್ತಿದ್ದರೆ. ಮತ್ತೊಂದೆಡೆ ಅಡಿಕೆ ಡಂಪ್ ಮಾಡುವ ಜಾಗದಲ್ಲಿ ತೆಗೆದುಕೊಂಡು ಹೋಗದೆ ಕಳುವು ಮಾಡಲಾಗುತ್ತಿದೆ. 

ಇದರಿಂದ ಅಡಿಕೆ ವರ್ತಕರು ಎಚ್ಚರದಿಂದ ಇರುವ ಪರಿಸ್ಥಿತಿ ಇದೆ. ಅಡಿಕೆಯನ್ನ ಗುರುತು ಪರಿಚಯ ಇಲ್ಲದೆ ಅಥವಾ ಲಾರಿ ಚಾಲಕನ ಕುಂಡಲಿ ಹಿಡಿದುಕೊಂಡು ಕಳುಹಿಸಿದ ಇದ್ದರೆ ಲಕ್ಷಾಂತರ ರೂ.ಗಳ ಭಾರಿ ನಷ್ಟದ ಅಪಾಯವೂವಿದೆ. 

ಪಿಐ ಗುರುರಾಜ್ ರಿಂದ ಪ್ರಕರಣ ಬೆಳಕಿಗೆ

ಪಿಐ ಗುರುರಾಜ್ ನೇತೃತ್ವದಲ್ಲಿ ಅಡಿಕೆ ಕಳ್ಳನ ಪತ್ತೆಯಾಗಿದೆ. ಪಿಐ ಗುರುರಾಜ್ ಅವರ ನೇತೃತ್ವದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದೆ. ಕೋಟ್ಯಾಂತರ ಅಡಿಕೆಯನ್ನ ಉತ್ತರ ಭಾರತದ ಕಡೆಗೆ ಕಳುಹಿಸಿ ಕೋಟ್ಯಾಂತರ ರೂ. ಹಣ ಕಳೆದುಕೊಳ್ಳಬೇಕಿದ್ದ ವರ್ತಕ ಪೊಲೀಸರ ಖಡಕ್ ಕಾರ್ಯಾಚರಣೆಯಿಂದ ಭಾರಿ ನಷ್ಟದಿಂದ ಪಾರಾಗಿದ್ದಾನೆ. 

ಮತ್ತೊಂದು ಪ್ರಕರಣದಲ್ಲಿ ತೀರ್ಥಹಳ್ಳಿಯ ಎಪಿಎಂಸಿ ಯಾರ್ಡ್ ನಿಂದ  ಶಿವಮೊಗ್ಗದ ಗಾಡಿಕೊಪ್ಪಕ್ಕೆ ತರಬೇಕಿದ್ದ ಅಡಿಕೆಯನ್ನ ಆಯನೂರಿನಲ್ಲಿ ಅಡಿಕೆ ಇಳಿಸಿ ಚಾಲಕ ಮತ್ತಿತರು ಮನೆಯ ಮುಂದೆ ಗಾಡಿ ನಿಲ್ಸಿದ್ದನು. ಈ ಪ್ರಕರಣ ನಡೆದ 24 ಗಂಟೆಯಲ್ಲಿ ತುಂಗನಗರ ಪೊಲೀಸರಿಂದ ಪತ್ತೆಯಾಗಿದೆ. ಪ್ರಕರಣದಲ್ಲಿ ಮಲ್ಲೇಶ್ ಎಂಬಾತನನ್ನ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಪತ್ತೆಯಾಗಿದ್ದು ಹೇಗೆ

ಮಲ್ಲೇಶ್ ಎಂಬ ಗೂಡ್ಸ್ ವಾಹನ ಚಾಲಕ ಗಾಡಿಕೊಪ್ಪದಲ್ಲಿ ಅಡಿಕೆಯನ್ನ ಡಂಪ್  ಮಾಡದೆ  ಆಯನೂರಿನಲ್ಲಿ ಇಳಿಸಿ ಮನೆಯ ಮುಂದೆ ಖಾಲಿ ಗಾಡಿ ನಿಲ್ಲಿಸಿಕೊಂಡಿದ್ದ. ನಂತರ ಅಡಿಕೆ ಕಳುಹಿಸಿದ ವರ್ತಕರು ಕರೆ ಮಾಡಿದರೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಇದರಿಂದ ಮನೆಯ ಬಳಿ ಬಂದ ವರ್ತಕರು ಖಾಲಿಗಾಡಿ ನಿಂತಿದ್ದನ್ನ ನೋಡಿ ಏನೋ ಗೋಲ್ ಮಾಲ್ ಆಗಿದೆ ಎಂದು ತುಂಗನಗರ ಠಾಣೆಗೆ ವಿಷಯ ತೆಗೆದುಕೊಂಡು ಹೋಗಿದ್ದರು. ಘಟನೆ ನಡೆದು 24 ಗಂಟೆಯ ಒಳಗೆ ತುಂಗ ನಗರ ಪೊಲೀಸರು ಪ್ರಕರಣ ಪತ್ತೆಹಚ್ಚಿ ಆರೋಪಿಯನ್ನ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ‌ಎರಡು ಮೂರು ಆರೋಪಿಗಳಿಗಾಗಿ ಬಲೆಬೀಸಲಾಗಿದೆ. ಸುಮಾರು 10 ಲಕ್ಷ ರೂ.ಮೌಲ್ಯದ 18 ಚೀಲದ ಅಡಿಕೆ ಪತ್ತೆಯಾಗಿದೆ. 

Betel nut traders, beware 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close