SUDDILIVE || SHIVAMOGGA
ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ದಾಳಿ-Police raid on jail
ಶಿವಮೊಗ್ಗದ ಜೈಲ್ ನಲ್ಲಿ ಪೊಲೀಸರ ಹುಡುಕಾಟ ಮುಂದುವರೆದಿದೆ. ಗಾಂಜಾ, ಮೊಬೈಲ್ ಬಳಕೆ ಮೊದಲಾದ ನಿಷೇಧಿತ ವಸ್ತುಗಳು ಬಳಕೆಯ ಆರೋಪದ ಹಿನ್ನಲೆಯಲ್ಲಿ ಈ ದಾಳಿ ಮಹತ್ವ ಪಡೆದುಕೊಂಡಿದೆ.
ಈ ದಿನ ದಿನಾಂಕಃ 02-07-2025 ರಂದು ಬೆಳಗ್ಗೆ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ, ದಿಲೀಪ್, ಡಿವೈಎಸ್.ಪಿ, ಡಿ.ಎ.ಆರ್, ಶಿವಮೊಗ್ಗ, ಬಾಬು ಆಂಜನಪ್ಪ ಡಿವೈಎಸ್.ಪಿ, ಶಿವಮೊಗ್ಗ-ಎ ಉಪ ವಿಭಾಗ, ಸಂಜೀವ್ ಕುಮಾರ್ ಟಿ, ಡಿವೈಎಸ್.ಪಿ, ಶಿವಮೊಗ್ಗ-ಬಿ ಉಪ ವಿಭಾಗ, 2 ಪಿ.ಐ ಹಾಗೂ 4 ಪಿಎಸ್ಐ ಮತ್ತು 41 ಪೊಲೀಸ್ ಸಿಬ್ಬಂಧಿಗಳ ತಂಡವು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಸಧ್ಯಕ್ಕೆ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.